Breaking News
????????????????????????????????????

ಉತ್ತಮ ನಾಗರಿಕರನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ-ಲಖನ ಜಾರಕಿಹೊಳಿ!

Spread the love

ಉತ್ತಮ ನಾಗರಿಕರನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ-ಲಖನ ಜಾರಕಿಹೊಳಿ!

ಗೋಕಾಕ: ಉತ್ತಮ ನಾಗರಿಕರನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ವಿಧಾನ ಪರಿಷತ ಸದಸ್ಯ ಲಖನ ಜಾರಕಿಹೊಳಿ ಹೇಳಿದರು.
ಅವರು, ಶುಕ್ರವಾರದಂದು ನಗರದ ಮಹಾಲಕ್ಷಿö್ಮÃ ಸಭಾ ಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗೋಕಾಕ ಇವರು ಡಾ.ಸರ್ವಪಲ್ಲಿ ರಾಧಾಕೃಷ್ಣನ ರವರ 138ನೇ ಹುಟ್ಟು ಹಬ್ಬದ ನಿಮಿತ್ಯ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ, ನಿವೃತ್ತ ಹಾಗೂ ಉತ್ತಮ ಶಿಕ್ಷಕರನ್ನು ಸತ್ಕರಿಸಿ ಮಾತನಾಡಿದರು.

ಶಿಕ್ಷಕರನ್ನು ಗೌರವಿಸುವ ಈ ದಿನ ಮಹತ್ವದ ದಿನವಾಗಿದೆ. ಅತ್ಯಂತ ಪವಿತ್ರವಾದ ವೃತ್ತಿ ಶಿಕ್ಷಕ ವೃತ್ತಿಯಾಗಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಿ ಅವರನ್ನು ಸಮಾಜ ಗೌರವಿಸುವ ವ್ಯಕ್ತಿಗಳನ್ನಾಗಿಸಿ ದೇಶ ಕಟ್ಟುವ ಶಿಲ್ಪಿಗಳನ್ನಾಗಿಸಿದ್ದಾರೆ. ಗೋಕಾಕ ವಲಯದ ವಿಭಿನ್ನ ಕಾರ್ಯಕ್ರಮಗಳ ಮೂಲಕ ಗುರುಗಳ ಮಹತ್ವವನ್ನು ಹೆಚ್ಚಿಸುತ್ತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಮುಂಜಾನೆ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರರ ಮೂರ್ತಿಗೆ ಮಾಲಾರ್ಪಣೆಯನ್ನು ಮಾಡಿ, ಭವ್ಯ ರಥದಲ್ಲಿ ಡಾ.ರಾಧಾಕೃಷ್ಣನ್ ಅವರ ಭಾವಚಿತ್ರದೊಂದಿಗೆ ಸಮಾರಂಭದ ವೇದಿಕೆಗೆ ಭವ್ಯ ಮೆರವಣಿಗೆಯನ್ನು ಆಯೋಜಿಸಲಾಗಿತ್ತು.
ವೇದಿಕೆಯ ಮೇಲೆ ಜಿಪಂ ಮಾಜಿ ಸದಸ್ಯರಾದ ಟಿ ಆರ್ ಕಾಗಲ, ಎಮ್ ಎಲ್ ತೋಳಿನವರ, ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ತಹಶೀಲದಾರ ಡಾ.ಮೋಹನ ಭಸ್ಮೆ, ತಾಲೂಕು ಮಟ್ಟದ ಅಧಿಕಾರಿಗಳಾದ ಪರಶುರಾಮ ಘಸ್ತೆ, ಎಮ್ ಎಲ್ ಜನ್ಮಟ್ಟಿ, ಎ ಬಿ ಮಲಬನ್ನವರ, ಎಮ್ ಎಸ್ ಬಾಗಡಿ, ಎಸ್ ಪಿ ವರಾಳೆ, ಬಿ ಎಸ್ ಕುಡುವಕ್ಕಲಿಗ, ಎಲ್ ಕೆ ತೋರಣಗಟ್ಟಿ, ನೌಕರರ ಸಂಘದ ತಾಲೂಕಾಧ್ಯಕ್ಷ ವಿನಾಯಕ ಮಾಳಿ, ವಿವಿಧ ಶಿಕ್ಷಕ ಸಂಘಗಳ ಅಧ್ಯಕ್ಷರುಗಳಾದ ಎಮ್ ವಿ ಬಾಗೆನ್ನವರ, ಜಿ ಆರ್ ಸನದಿ ಇದ್ದರು.


Spread the love

About Yuva Bharatha

Check Also

ವಾಲಿಬಾಲ್ ಅಸೋಸಿಯೇಷನ್ ಆಫ್ ಕರ್ನಾಟಕ ಉಪಾಧ್ಯಕ್ಷರಾಗಿ ಸರ್ವೋತ್ತಮ ಜಾರಕಿಹೊಳಿ ಆಯ್ಕೆ

Spread the love ವಾಲಿಬಾಲ್ ಅಸೋಸಿಯೇಷನ್ ಆಫ್ ಕರ್ನಾಟಕ ಉಪಾಧ್ಯಕ್ಷರಾಗಿ ಸರ್ವೋತ್ತಮ ಜಾರಕಿಹೊಳಿ ಆಯ್ಕೆ ಗೋಕಾಕ  ವಾಲಿಬಾಲ್ ಅಸೋಸಿಯೇಷನ್ ನೂತನ …

Leave a Reply

Your email address will not be published. Required fields are marked *

3 × three =