ಕೃಷ್ಣ ಮೇಲ್ದಂಡೆ ಯೋಜನೆಯ ರೈತರಿಗೆ ಸೂಕ್ತ ಪರಿಹಾರಕ್ಕೆ- ಶಂಕರಗೌಡ ಬಿರಾದಾರ ಆಗ್ರಹ!
ಯುವ ಭಾರತ ಸುದ್ದಿ ಬಸವನಬಾಗೇವಾಡಿ: ಕೃಷ್ಣ ಮೇಲ್ದಂಡೆ ಯೋಜನೆಯ ಹಂತ 3ರಡಿ ಭೂಸ್ವಾಧನಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ ವಿಷಯ ಆದರೆ ಭೂಮಿ ಕಳೆದುಕೊಳ್ಳುವ ರೈತರಿಗೆ ಹೆಚ್ಚಿನ ದರ ನೀಡಬೇಕು ಎಂದು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷರಾದ ಶಂಕರಗೌಡ ಎಸ್ ಬಿರಾದಾರ ಅವರು ಸರ್ಕಾರವನ್ನು ಅಗ್ರಹಿಸಿದ್ದಾರೆ.
ಕೃಷ್ಣ ಮೇಲ್ದಂಡೆ ಯೋಜನೆಗೆ ಲಕ್ಷಾಂತರ ಜಮೀನುಗಳನ್ನು ಕಳೆದುಕೊಂಡು ತಮ್ಮ ಬದುಕನ್ನೇ ತ್ಯಾಗ ಮಾಡಿದ ಸಂತ್ರಸ್ತರಿಗೆ ಒಣ ಬೇಸಾಯಗೆ 5 ಲಕ್ಷ ಹಾಗೂ ನೀರಾವರಿಗೆ 6 ಲಕ್ಷ ನಿಡುವುದಾಗಿ ಬೆಳಗಾವಿ ಅಧಿವೇಶನದಲ್ಲಿ ಘೋಷಿಸಲಾಗಿದೆ ಸಮ್ಮತಿಯ ಐ ತೀರ್ಪು ಅನ್ವಯ ನಾಲ್ಕು ಪಟ್ಟು ಅಂದರೆ ಒಣ ಬೇಸಾಯಿಗೆ 20 ಲಕ್ಷ ರೂ ನೀರಾವರಿಗೆ 24 ಲಕ್ಷ ರೂ ಸರ್ಕಾರ ನೀಡಲು ಮುಂದಾಗಿದೆ ಈಗಾಗಲೇ ನಮ್ಮ ಜಿಲ್ಲೆಯಲ್ಲಿ ರೈತರ ಜಮೀನಿನಲ್ಲಿ ಕೆನಲ್ ಹಾಯ್ದು ಹೋಗಿದ್ದರೆ ಅಂತಹ ರೈತರಿಗೆ ಸುಮಾರು 50ರಿಂದ 60 ಲಕ್ಷ ಪರಿಹಾರವನ್ನು ಕೊಟ್ಟಿದ್ದಾರೆ ನಮ್ಮ ಜಿಲ್ಲೆಯಲ್ಲಿ ಯಾವುದೇ ಭಾಗದಲ್ಲಿ ಹುಡುಕಿದರೂ ಎಕರೆಗೆ ಐದರಿಂದ ಆರು ಲಕ್ಷದವರೆಗೆ ರೈತರ ಭೂಮಿ ಸಿಗುವುದಿಲ್ಲ ಅಂತಹದರಲ್ಲಿ ಸರ್ಕಾರ ರೈತರಿಗೆ ಮತ್ತೊಮ್ಮೆ ಮೋಸ ಮಾಡಲು ಹೊರಟಿದೆ ಈಗಾಗಲೇ ರೈತರು ತಮ್ಮ ಕೃಷಿ ಜಮೀನವನ್ನು ಸಾಕಷ್ಟು ಕಳೆದುಕೊಂಡು ಕಂಗಾಲಾಗಿದ್ದಾರೆ ನಮ್ಮ ಜಿಲ್ಲೆಯಲ್ಲಿ ಬರಗಾಲ ಅತಿವೃಷ್ಟಿ ಬೆಳೆ ಹಾನಿ ಹೀಗೆ ನಾನ ಕಾರಣಗಳಿಂದ ರೈತರು ಸಂಕಷ್ಟದಲ್ಲಿದ್ದಾರೆ ಅಲ್ಲದೆ ಎನ್‌ಟಿಪಿಸಿ ಯೋಜನೆಯಾಗಲು ಕೂಡ ರೈತರು ಸಾಕಷ್ಟು ಭೂಮಿ ಕಳೆದುಕೊಂಡಿದ್ದಾರೆ ರೈತರಿಗೆ ಸೂಕ್ತವಾದ ಮಾರುಕಟ್ಟೆ ಬೆಲೆಯನ್ನು ಸರ್ಕಾರ ನಿಗದಿ ಮಾಡಿ ಭೂಸ್ವಾಧೀನ ಮಾಡಿಕೊಳ್ಳಬೇಕೆಂದು ಸರ್ಕಾರವನ್ನು ಆಚರಿಸುತ್ತೇವೆ
ಉದ್ಯೋಗ ನೀಡಲು ಅಗ್ರಹ: ಎನಟಿಪಿಸಿಯಲ್ಲಿ ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಉದ್ಯೋಗ ಕೊಡಬೇಕು ಅಖಂಡ ಬಸವನಬಾಗೇವಾಡಿ ತಾಲೂಕಿನ ರೈತರಿಗೆ ಉಚಿತವಾಗಿ ವಿದ್ಯುತ್ತನ್ನು ಕೊಡಬೇಕು ಬಸವನ ಬಾಗೇವಾಡಿ ಪಟ್ಟಣದಲ್ಲಿ ಸಾಕಷ್ಟು ಪವನ ವಿದ್ಯುತ್ ಕಂಪನಿಗಳು ಕಾರ್ಯಚರಣೆ ಮಾಡುತ್ತಿದ್ದರು ಪಟ್ಟಣದಲ್ಲಿ ಸರಿಯಾಗಿ ವಿದ್ಯುತ್ ಸಪ್ಲೈ ಕೊಡುತ್ತಿಲ್ಲ ಅಧಿಕಾರಿಗಳಿಗೆ ಕೇಳಿದರೆ ಉಡಾಫೆ ಉತ್ತರವನ್ನು ಕೊಡುತ್ತಾರೆ ಕೂಡಲೇ ಇದನ್ನೆಲ್ಲ ಸರಿ ಮಾಡಿದೆ ಹೋದರೆ ರಾಷ್ಟ್ರೀಯ ಬಸವ ಸೈನ್ಯ ಸಂಘಟನೆ ವತಿಯಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಚ್ಚರಿಕೆ ನೀಡಿದ್ದಾರೆ