ಸತತ ಪ್ರಯತ್ನದಿಂದ ಏನೇಲ್ಲಾ ಸಾಧನೆ ಸಾಧ್ಯ-ಬಿ.ಎ.ಕೋಟಿ!
ಯುವ ಭಾರತ ಸುದ್ದಿ ಬೆಟಗೇರಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಓದಿದರೂ ಕಡಿಮೆ. ಸತತ ಪ್ರಯತ್ನದಿಂದ ಏನೇಲ್ಲಾ ಸಾಧನೆ ಸಾಧ್ಯ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪತ್ರೆಪ್ಪನ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯ ಮುಖ್ಯ ಶಿಕ್ಷಕ ಬಿ.ಎ.ಕೋಟಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪತ್ರೆಪ್ಪನ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಡಿ.೧೪ರಂದು ನಡೆದ ಕಳೆದ ಜುಲೈ ತಿಂಗಳಲ್ಲಿ ಜರುಗಿದ ರಾಷ್ಟç ಮಟ್ಟದ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಎಂಬಿಬಿಎಸ್ ವ್ಯಾಸಂಗಕ್ಕೆ ತೆರುಳುತ್ತಿರುವ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿ ಲಕ್ಕಣ್ಣ ಮಹಾದೇವ ಕೋಣಿ ಅವರ ಸತ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಯ ಮಕ್ಕಳು ಚೆನ್ನಾಗಿ ಓದಿ, ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ತಾವು ಕಲಿತ ಶಾಲೆ, ಹುಟ್ಟೂರಿನ ಹಾಗೂ ತಮ್ಮ ಕುಟುಂಬದ ಕೀರ್ತಿತರಬೇಕೆಂದರು.
ಎಂಬಿಬಿಎಸ್ ವ್ಯಾಸಂಗಕ್ಕೆ ತೆರುಳುತ್ತಿರುವ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿ ಲಕ್ಕಣ್ಣ ಮಹಾದೇವ ಕೋಣಿ ಅವರನ್ನು ಸ್ಥಳೀಯ ಪತ್ರೆಪ್ಪನ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯ ವತಿಯಿಂದ ಸತ್ಕರಿಸಿದ ಬಳಿಕ ಶಾಲಾ ಮಕ್ಕಳಿಗೆ ಸಿಹಿ ವಿತರಿಸಲಾಯಿತು.
ಎಚ್.ಜಿ.ಕಟ್ಟಿಮನಿ, ಎಸ್.ಜಿ.ಮಠಪತಿ, ಎ.ಎಸ್.ಸವದತ್ತಿ, ಎಸ್.ಜಿ.ಗುಡಸಿ, ವಿಠಲ ಕೋಣಿ, ರವಿ ಉಪ್ಪಾರ, ಸಿದ್ದಪ್ಪ ಕೋಣಿ, ಅಡಿವೆಪ್ಪ ಜೋಗಿ, ಮುತ್ತೆಪ್ಪ ಬಾನಸಿ, ಹನುಮಂತ ಬಾನಸಿ, ರೇವಣಸಿದ್ದ ಸವತಿಕಾಯಿ, ಶಾಲೆಯ ಶಿಕ್ಷಕರು, ಎಸ್‌ಡಿಎಂಸಿ ಮಾಜಿ ಅಧ್ಯಕ್ಷರು, ಸದಸ್ಯರು, ಬಿಸಿಯೂಟ ಅಡುಗೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಮತ್ತೀತರರು ಇದ್ದರು.