Breaking News

ಯುವ ಸಮುದಾಯ ಆಧ್ಯಾತ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು- ಸರ್ವೋತ್ತಮ ಜಾರಕಿಹೊಳಿ

Spread the love

ಯುವ ಸಮುದಾಯ ಆಧ್ಯಾತ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು- ಸರ್ವೋತ್ತಮ ಜಾರಕಿಹೊಳಿ

ಗೋಕಾಕ: ಯುವ ಸಮುದಾಯ ಅಧ್ಯಾತ್ಮೀಕ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ಅವರು ಹುಣಶ್ಯಾಳ ಪಿಜಿ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ನಡೆಯುತ್ತಿರುವ ೨೭ನೇ ಸತ್ಸಂಗ ಮಹೋತ್ಸವ ಮತ್ತು ಸಿದ್ದಲಿಂಗೇಶ್ವರ ಜಾತ್ರಾ ಹಾಗೂ ತುಲಾಭಾರ ಸೇವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶ್ರೀಮಠದ ನಿಜಗುಣ ದೇವ ಮಹಾಸ್ವಾಮಿಜಿರಲ್ಲಿ ಸಹೋದರತ್ವ ಭಾವನೆವಿದೆ. ಅವರ ಜ್ಞಾನದ ಆಶೀರ್ವಾದ ನಾವೆಲ್ಲರೂ ಪಡೆದುಕೊಂಡು ಪುಣ್ಯವಂತರಾಗಬೇಕು. ಪ್ರೀತಿ ಮತ್ತು ಸಹೋದರತ್ವದ ವಿಚಾರಗಳನ್ನು ಬೆಳೆಸಿಕೊಂಡು ಮಠಮಾನ್ಯಗಳ ಕಾರ್ಯಕ್ರಮಗಳಲ್ಲಿ ಯುವಜನತೆ ಭಾಗವಹಿಸಬೇಕು. ಯುವ ಜನತೆ ಪುಣ್ಯಮಯ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು. ಶ್ರೀಮಠವು ಧಾರ್ಮಿಕ ಕಾರ್ಯಕ್ರಮವನ್ನು ಮಾಡುತ್ತಾ ನಾಡಿನ ಸಮಸ್ತ ಭಕ್ತವೃಂದಕ್ಕೆ ಆಶೀರ್ವಾದ ನೀಡುತ್ತಾ ಬಂದಿದೆ. ಅವರ ಜೊತೆಗೆ ನಮ್ಮ ಜಾರಕಿಹೊಳಿ ಮನೆತನವು ಸದಾ ಇರುತ್ತೇವೆ ಎಂದರಲ್ಲದೇ ಗುರುಗಳ ಅಪೇಕ್ಷೆಗಿಂತ ಭಕ್ತರು ನಿಷ್ಕಲ ಮನಸ್ಸಿನಿಂದ ಕಾರ್ಯ ಮಾಡಿದರೆ ಗುರುವಿನ ಆಶೀರ್ವಾದ ಸದಾ ಇರುತ್ತದೆ. ಮನುಷ್ಯನಿಗೆ ಯಾವುದೇ ಕಷ್ಟ ಬಂದರೂ ಸಹ ಗುರು ಅದನ್ನು ದೂರಮಾಡುತ್ತಾನೆ. ಗುರುವಿನ ಸೇವೆ ಅತೀಅಮೂಲ್ಯವಾದದ್ದು ಅದನ್ನು ಸದುಪಯೋಗ ಪಡಿಸಿಕೊಂಡರೆ ಮನುಷ್ಯ ಜನ್ಮವು ಪಾವನವಾಗುತ್ತದೆ. ಭಕ್ತಿ,ಶೃದ್ಧೆಯಿಂದ ಗುರುವಿನಲ್ಲಿ ಕಾಣಬೇಕೆಂದರು.
ಹುಕ್ಕೇರಿಯ ಶ್ರೀ ಚಂದ್ರಶೇಖರ ಮಹಾಸ್ವಾಮಿಜಿ ಮಾತನಾಡಿ ಶ್ರೀ ನಿಜಗುಣ ದೇವ ಮಹಾಸ್ವಾಮಿಗಳು ಸದ್ಗರುಗಳ ಕೃಪಾ ಬಲದಿಂದ ಅಭೂತ ಪೂರ್ವ ಎನ್ನುವ ರೀತಿಯಲ್ಲಿ ಶ್ರೀ ಸಿದ್ದಲಿಂಗ ಕೈವಲ್ಯಾಶ್ರಮ ನಿರ್ಮಿಸಿ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಸಂಗೀತ, ಧಾರ್ಮಿಕ, ಆಧ್ಯಾತ್ಮಿಕ ಸಂಘಟನೆ ಮಾಡಿ ನಿಂತ ನೆಲ ಸುಕ್ಷೇತ್ರವಾಗಿರಿಸಿದ್ದಾರೆ ಎಂದರು.
ವೇದಿಕೆ ಮೇಲೆ ಶ್ರೀಮಠದ ನಿಜಗುಣ ದೇವ ಮಹಾಸ್ವಾಮಿಗಳು, ಕೃಪಾನಂದ ಮಹಾಸ್ವಾಮಿಜಿ,ಕೊಟಬಾಗಿಯ ಪ್ರಭುದೇವ ಸ್ವಾಮಿಜಿ, ತೊಂಡಿಕಟ್ಟಿಯ ಅಭಿನವ ವೆಂಕಟೀಶ ಮಹಾರಾಜರು, ಬೀದರಿನ ಗಣೇಶಾನಂದ ಮಹಾರಾಜರು, ಸಿದ್ಧಾನಂದ ಮಹಾಸ್ವಾಮಿಜಿ, ಲಿಂಗನೂರಿನ ಶಿವಪುತ್ರ ಅವಧೂತರು ಸೇರಿದಂತೆ ಅನೇಕ ಮಹಾತ್ಮರು ಉಪಸ್ಥಿತರಿದ್ದರು.
ಶ್ರೀಮಠದ ವತಿಯಿಂದ ದಾನಿಗಳಿಗೆ,ಗಣ್ಯರಿಗೆ, ಪೂಜ್ಯರಿಗೆ ಸನ್ಮಾನಿಸಲಾಯಿತು. ಗುರುನಾಥ ಶಾಸ್ತಿçà ಕಾರ್ಯಕ್ರಮವನ್ನು ನಿರೂಪಿಸಿದರು.


Spread the love

About Yuva Bharatha

Check Also

ನಿಜಗುಣದೇವ ಮಹಾಸ್ವಾಮಿಗಳಿಗೆ ‘ಸಾಹಿತ್ಯಸಿರಿ’ ಪ್ರಶಸ್ತಿ ಶ್ರೀ ರಂಭಾಪುರಿ ಜಗದ್ಗುರುಗಳಿಂದ ಘೋಷಣೆ!

Spread the loveನಿಜಗುಣದೇವ ಮಹಾಸ್ವಾಮಿಗಳಿಗೆ ‘ಸಾಹಿತ್ಯಸಿರಿ’ ಪ್ರಶಸ್ತಿ ಶ್ರೀ ರಂಭಾಪುರಿ ಜಗದ್ಗುರುಗಳಿಂದ ಘೋಷಣೆ! ಗೋಕಾಕ: ಸಮನ್ವಯದ ಕೊಂಡೆಯಾದ ಹುಣಶ್ಯಾಳ ಪಿಜಿಯ …

Leave a Reply

Your email address will not be published. Required fields are marked *

3 + eleven =