ಸುವಿಚಾರ ಚಿಂತನ ಕಾರ್ಯಕ್ರಮ
ಗೋಕಾಕ: ಸಮೀಪದ ಹುಣಶ್ಯಾಳ ಪಿಜಿ ಗ್ರಾಮದ ಶ್ರೀ ಸಿದ್ದಲಿಂಗ ಕೈವಲ್ಯಾಶ್ರಮದಲ್ಲಿ ದಿ.೧೮ರಂದು ಮಧ್ಯಾಹ್ನ 12 ಗಂಟೆಗೆ 187ನೇ ಸುವಿಚಾರ ಚಿಂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ಪೂಜ್ಯ ಶ್ರೀ ನಿಜಗುಣ ದೇವ ಮಹಾಸ್ವಾಮಿಗಳು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೇಗಿನಹಾಳದ ಶ್ರೀ ಸಿದ್ಧಾರೂಢ ಮಠದ ಪೂಜ್ಯ ಶ್ರೀ ಅದ್ವೆöÊತಾನಂದಭಾರತಿ ಸ್ವಾಮಿಗಳು ವಹಿಸುವರು. ಪಾವನ ಸಾನಿಧ್ಯ ಶ್ರೀಮಠದ ಪೂಜ್ಯ ಶ್ರೀ ನಿಜಗುಣ ದೇವ ಮಹಾಸ್ವಾಮಿಗಳು ವಹಿಸುವರು.
ಶ್ರೀ ನಿಜಗುಣ ದೇವ ಮಹಾಸ್ವಾಮಿಗಳು
ಮಧ್ಯಾಹ್ನ ಪ್ರವಚನ ಕಾರ್ಯಕ್ರಮದಲ್ಲಿ “ಸುಮ್ಮನೆ ಕಾಲವನು ಕಳೆದು” ಎಂಬ ವಿಷಯದ ಕುರಿತು ಪ್ರವಚನ ಜರುಗಲಿದೆ. ದಾಸೋಹ ಸೇವೆಯನ್ನು ಶರಣ ಬಸವರಾಜ ಮಾರುತಿ ಸುಂಕದ ಹಾಗೂ ಚಿಂತನ ಸೇವೆಯನ್ನು ಶರಣ ಹಣಮಂತ ಮಾರುತಿ ಸುಂಕದ ನೆgವೇರಿಸಲಿದ್ದಾರೆ. ನಂತರ ಶ್ರೀ ಸಿದ್ದಲಿಂಗೇಶ್ವರ ಭಜನಾಮಂಡಳಿ ಇವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.
YuvaBharataha Latest Kannada News
