ನಮ್ಮ ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ನೀಡಬೇಕಾಗಿದೆ.- ಗಜಾನನ ಮನ್ನಿಕೇರಿ.!
ಗೋಕಾಕ: ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೋಳುವದರಿಂದ ಮಾನಸಿಕ ನೆಮ್ಮದಿಯೊಂದಿಗೆ ದೇವರ ಅನುಗ್ರಹಕ್ಕೆ ಪಾತ್ರರಾಗುತ್ತೇವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಾಯಕ ಆಯುಕ್ತ ಗಜಾನನ ಮನ್ನಿಕೇರಿ ಹೇಳಿದರು.
ರವಿವಾರದಂದು ಇಲ್ಲಿನ ವಿವೇಕಾನಂದ ನಗರದ ಶ್ರೀ ಶಿವಲಿಂಗೇಶ್ವರ ದೇವಸ್ಥಾನದಲ್ಲಿ ಶ್ರಾವಣಮಾಸದ ಮುಕ್ತಾಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಂದಿನ ತಾಂತ್ರಿಕ ಯುಗದಲ್ಲಿ ಆಧುನಿಕ ಜೀವನದ ಭರಾಟೆಯಿಂದ ಆಧ್ಯಾತ್ಮಿಕ ಕಾರ್ಯಕ್ರಮಗಳು ಮಾಯವಾಗುತ್ತಿದ್ದು, ಇಂತಹ ಕಾರ್ಯಕ್ರಮಗಳ ಮೂಲಕ ನಮ್ಮ ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ನೀಡಬೇಕಾಗಿದೆ. ಮಕ್ಕಳಲ್ಲಿಯೂ ಸಹ ಆಧ್ಯಾತ್ಮಿಕ ಜಾಗೃತಿ ಮೂಡಿಸಿ ಅವರನ್ನು ಸುಸಂಸ್ಕೃತ ನಾಗರಿಕರನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಹುಲಿಕಟ್ಟಿಯ ಶ್ರೀ ಕುಮಾರದೇವರು, ಕೌಜಲಗಿಯ ಮಲ್ಲಿಕಾರ್ಜುನ ಸ್ವಾಮಿಗಳು, ಪ್ರವಚನಕಾರ ಡಾ.ಬಸವರಾಜ ಚೌಗಲಾ, ನಗರಸಭೆ ಸದಸ್ಯೆ ಭಾರತಿ ಹತ್ತಿ, ಗಣ್ಯರಾದ ಮಹಾಂತೇಶ ತಾವಂಶಿ, ಎಂ.ಎಸ್.ವಾಲಿ, ಪಿ.ಎಂ ವಣ್ಣೂರ, ಶ್ರೀ ಶಿವಲಿಂಗೇಶ್ವರ ವಿಕಾಸ ಸಮಿತಿಯ ಅಧ್ಯಕ್ಷ ಜೀವಪ್ಪ ಬಡಿಗೇರ, ಸದಸ್ಯರಾದ ಪ್ರೇಮಲತಾ ಕಡಗಲ್, ಲಕ್ಕಪ್ಪ ಕೋತ್ತಲ್, ವಿರಭದ್ರ ಶೇಬನ್ನವರ, ಅಶೋಕ್ ಗೋಣಿ, ಉದಯ ಬನ್ನಿಶೆಟ್ಟಿ, ಅಮರಗುಂಡಪ್ಪ ಬಿಜ್ಜಳ, ಈಶ್ವರ ಪಾಟೀಲ, ಭೀಮಪ್ಪ ಗೋಲಬಾಂವಿ, ಸುನಂದಾ ಮನ್ನಿಕೇರಿ, ಉಮಾದೇವಿ ಹಿರೇಮಠ, ಜಗದೇವಿ ಭೋಸಗಾ, ಬಸವರಾಜ ಕಾಪಸಿ, ಶಿವಶಂಕರ್ ದಾಸಪ್ಪನವರ ಇದ್ದರು.