ಸಮಾಜದಲ್ಲಿ ವಿವಾಹಕ್ಕೆ ಅತಿಯಾಗಿ ಖರ್ಚು ಮಾಡುತ್ತಿರುವುದು ಕುಟುಂಬದ ಅಭ್ಯುದಯಕ್ಕೆ ಮಾರಕವಾಗಿದೆ- ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ!
ಯುವ ಭಾರತ ಸುದ್ದಿ ಇಂಡಿ: ಕುಟುಂಬದ ಅಭಿವೃದ್ಧಿಗೆ ಸಾಮೂಹಿಕ ವಿವಾಹದಂತಹ ಹೆಜ್ಜೆ ಅತಿ ಅವಶ್ಯ. ಇಂದು ಬಡವರಾದಿಯಾಗಿ ಹೆಚ್ಚಿನವರು ಶಿಕ್ಷಣಕ್ಕಿಂತ ಹೆಚ್ಚಾಗಿ ವಿವಾಹಕ್ಕೆ ಖರ್ಚು ಮಾಡುತ್ತಿದ್ದಾರೆ. ಇದರಿಂದ ಸಾಲದ ಹೊರೆಯಲ್ಲಿ ಸಿಲುಕುತ್ತಿದ್ದಾರೆ ಎಂದು ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ ಹೇಳಿದರು.
ಅವರು ಗುರುವಾರ ತಾಲೂಕಿನ ತಡವಲಗಾ ಗ್ರಾಮದಲ್ಲಿ ಶ್ರೀಗುರು ರಾಚೋಟೇಶ್ವರ ಶಿವಾಚಾರ್ಯರ ಪುಣ್ಯಸ್ಮರಣೋತ್ಸವ ನಿಮಿತ್ಯ ಹಮ್ಮಿಕೊಂಡ ಸರಳ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆಯಲ್ಲಿ ಮಾತನಾಡಿದರು.
ಇಂದು ಸಮಾಜದಲ್ಲಿ ವಿವಾಹಕ್ಕೆ ಅತಿಯಾಗಿ ಖರ್ಚು ಮಾಡುತ್ತಿರುವುದು ಕುಟುಂಬದ ಅಭ್ಯುದಯಕ್ಕೆ ಮಾರಕವಾಗಿದೆ. ಸಾಲ ಮಾಡಿ ಮದುವೆ ಮಾಡಿ ಹತ್ತಾರು ವರ್ಷಗಳಾದರೂ ಸಹ ಸಾಲಮುಕ್ತರಾಗದೆ ಪರಿತಪಿಸುತ್ತಿರುತ್ತಾರೆ. ಶ್ರೀಮಠ ಆಯೋಜಿಸುವ ಇಂತಹ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಮದುವೆಯಾದರೆ ಸಾಲ ಮಾಡುವ ಸಂಭವವೇ ಇರುವುದಿಲ್ಲ ಎಂದರು.
ನಮ್ಮ ಭಾಗದಲ್ಲಿ ಕಳೆದ ಎರಡು ದಶಕಗಳಿಂದ ಸಮಗ್ರವಾಗಿ ಮಳೆ ಇಲ್ಲದೆ ಇರುವುದರಿಂದ ನೀರಿನ ಸಮಸ್ಯೆಯಾಗಿತ್ತು. ಬಿಜೆಪಿ ಸರಕಾರದ ನೀರಾವರಿ ಮಂತ್ರಿಗಳು ಹಾಗೂ ಸಂಸದರು ಈ ಭಾಗದ ಕೆರೆಗಳಿಗೆ ನೀರು ಹರಿಸಿ ರೈತರಿಗೆ ಅನುವು ಮಾಡಿಕೊಟ್ಟಿದ್ದಾರೆ. ಇದರಿಂದ ರೈತರ ಬಾಳು ಹಸನಾಗುತ್ತದೆ ಎಂದ ಅವರು ನೀರು ಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ ನೀರು ಹರಿಸಿದ ಗೋವಿಂದ ಕಾರಜೋಳ ಹಾಗು ಸಂಸದ ರಮೇಶ ಜಿಗಜಿಣಗಿ ಅವರಿಗೆ ಅಭಿನಂದಿಸುವುದಾಗಿ ತಿಳಿಸಿದರು.
ತಡವಲಗಾದ ಶಿವಾನಂದಯ್ಯ ಶಾಸ್ತಿçಗಳು ಪ್ರಾಸ್ತಾವಿಕವಾಗಿ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ ಮಾತನಾಡಿದರು.
ಮಮದಾಪೂರದ ಮುರುಘೇಂದ್ರ ಮಹಾಸ್ವಾಮೀಜಿ, ಬಾಗೇವಾಡಿಯ ಶಿಪ್ರಕಾಶ ಶಿವಾಚಾರ್ಯರು, ಆಲಮೇಲದ ಚಂದ್ರಶೇಖರ ಶಿವಾಚಾರ್ಯರು ಆಶೀರ್ವಚನ ನೀಡಿ ತಡವಲಗಾ ಹಿರೇಮಠದಲ್ಲಿ ಮದುವೆ ಆಗುತ್ತಿರುವ ಜೋಡಿಗಳು ಭಾಗ್ಯವಂತರಾಗಿದ್ದಾರೆ. ಸಾಮೂಹಿಕ ವಿವಾಹದಲ್ಲಿ ಮದುವೆಯಾದರೆ ಹಲವು ಶ್ರೀಗಳ, ಗಣ್ಯರ, ಸಾವಿರಾರು ಜನರ ಆಶೀರ್ವಾದ ದೊರೆಯುತ್ತದೆ. ಇಲ್ಲಿ ಮದುವೆಯಾದ ಜೋಡಿ ಸಮಾಜದ ನಡುವೆ ಉತ್ತಮ ಸಂಸ್ಕಾರವAತರAತಾಗಿ ಬದುಕಿ ಬಾಳಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ನೇತೃತ್ವವನ್ನು ತಡವಲಗಾ ಹಿರೇಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ವಹಿಸಿದ್ದರು.
ಸಾನಿಧ್ಯವನ್ನು ಬಂಥನಾಳದ ವೃಷಭಲಿಂಗ ಮಹಾಸ್ವಾಮೀಜಿ, ಗೋಳಸಾರದ ಅಭಿನವ ಪುಂಡಲಿAಗ ಮಹಾರಾಜರು, ಅಥರ್ಗಾದ ಮುರುಘೇಂದ್ರ ಮಹಾಸ್ವಾಮೀಜಿ ವಹಿಸಿದ್ದರು.
ಶಾಸಕರ ಸುಪುತ್ರ ವಿಠ್ಠಲಗೌಡ ಪಾಟೀಲ, ಉದ್ದಿಮೆದಾರ ಸಾಬು ದೊಡಮನಿ, ಸಂಜೀವ ಹಿರೇಮಠ, ಬಸವರಾಜ ಇಂಡಿ, ಚಂದ್ರಶೇಖರ ರೂಗಿ, ಅಶೋಕಗೌಡ ಬಿರಾದಾರ, ಶಿವಾನಂದ ಬಿರಾದಾರ, ನಾಗುಗೌಡ ಪಾಟೀಲ, ಶ್ರೀಮಂತ ಹಿರೇಕುರುಬರ, ಲಕ್ಷö್ಮಣ ಆಳೂರ, ಉಸ್ಮಾನಸಾಬ ಕಸಾಬ, ಅಶೋಕ ಕಟ್ಟಿ ಸೇರಿದಂತೆ ಮತ್ತಿತರರು ಇದ್ದರು.