ಭಗವದ್ಗೀತೆಯು ಕೇವಲ ಹಿಂದುಗಳಿಗೆ ಮಾತ್ರ ಮಾರ್ಗದರ್ಶನ ಮಾಡುವ ಗ್ರಂಥವಲ್ಲದೆ ಸಮಸ್ತ ಮನುಕುಲಕ್ಕೆ ಮಾರ್ಗದರ್ಶನ ಮಾಡುವ ಏಕೈಕ ಗ್ರಂಥವಾಗಿದೆ-ಶಾಮನoದ ಪೂಜೇರಿ!!
ಗೋಕಾಕ: ಜಗದ್ಗುರು ಶ್ರೀ ಸಿದ್ಧಾರೂಢರ ಪರಮಶಿಷ್ಯರಾದ ಗೋಕಾಕದ ಸದ್ಗುರು ಶ್ರೀ ಶಾಮಾನಂದ ಮಹಾಸ್ವಾಮಿಗಳವರ ಶ್ರೀಮಠದಲ್ಲಿ ಶ್ರೀಮದ್ ಭಗವದ್ಗೀತಾ ಜಯಂತಿ ವಿಶೇಷವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠದ ಧರ್ಮದರ್ಶಿ ಶಾಮನಂದ ಪೂಜೇರಿ ಅವರು ಭಗವದ್ಗೀತೆಯ ಮಹಿಮೆಯನ್ನು ಮತ್ತು ಅದರಲ್ಲಿಯ ತತ್ವಪದೇಶವನ್ನು ಕುರಿತು ವಿಶೇಷವಾದ ಪ್ರವಚನವನ್ನು ನೀಡಿದರು ಅವರು ಮಾತನಾಡುತ್ತಾ ಭಗವದ್ಗೀತೆಯು ಕೇವಲ ಹಿಂದುಗಳಿಗೆ ಮಾತ್ರ ಮಾರ್ಗದರ್ಶನ ಮಾಡುವ ಗ್ರಂಥವಲ್ಲದೆ ಸಮಸ್ತ ಮನುಕುಲಕ್ಕೆ ಮಾರ್ಗದರ್ಶನ ಮಾಡುವ ಏಕೈಕ ಗ್ರಂಥವಾಗಿದೆ ಎಂದು ಹೇಳಿದರು. ಆದುದರಿಂದ ಭಗವದ್ಗೀತೆಯನ್ನು ನಮ್ಮ ದೇಶದ ರಾಷ್ಟ್ರ ಗ್ರಂಥ ಎಂದು ಘೋಷಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಅತ್ಯಾನಂದ ಮಹಾಸ್ವಾಮಿಗಳು ಸಾನಿಧ್ಯವನ್ನು ವಹಿಸಿಕೊಂಡಿದ್ದರು. ವೇದಿಕೆ ಮೇಲೆ ಮಾಂತೇಶ ತಾಂವಶಿ, ಡಾ ಜೀರಗಾಳ, ಬಸವರಾಜ ಚೌಗಲಾ, ಸಿರಿಗನ್ನಡ ರಾಜ್ಯ ಮಹಿಳಾ ವೇದಿಕೆಯ ಅಧ್ಯಕ್ಷÀ ಶ್ರೀಮತಿ ರಜನಿ ಜೀರಗಾಳ, ಶ್ರೀಮತಿ ಸುಶ್ಮಿತಾ ಭಟ್, ಕನ್ನಡ ಸಾಹಿತ್ಯ ಪರಿಷತ್ ಗೋಕಾಕ ಘಟಕದ ಅಧ್ಯಕ್ಷÀ ಶ್ರೀಮತಿ ಭಾರತಿ ಮಗದುಮ, ಮೊದಲಾದವರು ಉಪಸ್ಥಿತರಿದ್ದರು,