ಸಂಘಟನೆಯದ ಮಾತ್ರ ಸದೃಢ ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗಿದೆ-ಶಿವಾನಂದ ಹಿರೇಮಠ!!
ಯುವ ಭಾರತ ಸುದ್ದಿ ಗೋಕಾಕ: ಮನಸ್ಸುಗಳನ್ನು ಒಗ್ಗೂಡಸಲ್ಲಿಕೆ ಸಂಘಟನೆಯ ಅವಶ್ಯಕತೆ ಇದ್ದು ಸಂಘಟನೆಯಿಂದ ಮಾತ್ರ ಸದೃಢ ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗಿದೆ ಎಂದು ಪೌರಾಯುಕ್ತ ಹಾಗೂ ಜೆಎನ್‌ಎಸ್‌ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿ ಶಿವಾನಂದ ಹಿರೇಮಠ ಹೇಳಿದರು.
ಸೋಮವಾರದಂದು ನಗರದ ಜೆಎನ್‌ಎಸ್ ಶಾಲಾ ಸಭಾಂಗಣದಲ್ಲಿ ಸನ್ ೧೯೯೨ನೇ ಸಾಲಿನ ಎಸ್‌ಎಸ್‌ಎಲ್ ಸಿ ವಿದ್ಯಾರ್ಥಿಗಳು ಆಯೋಜಿಸಿದ್ದ ನಮ್ಮ ಶಾಲೆ ನಮ್ಮ ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
೧೯೯೨ನೇ ಸಾಲಿನ ವಿದ್ಯಾರ್ಥಿಗಳು ಸೇರಿ ಸಂಘವನ್ನು ಕಟ್ಟಿಕೊಂಡು ನಮ್ಮ ಶಾಲೆ ನಮ್ಮ ಕೊಡುಗೆ ಎಂಬ ಯೋಜನೆ ರೂಪಿಸಿ ತಾವು ಕಲಿತ ಶಾಲೆಗೆ ಅವಶ್ಯಕ ವಸ್ತುಗಳನ್ನು ನೀಡಿ ಶಾಲೆಯನ್ನು ಉಳಿಸಿ ಬೆಳೆಸುವ ಪವಿತ್ರ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಎಲ್ಲಾ ಹಳೆಯ ವಿದ್ಯಾರ್ಥಿಗಳು ಸೇರಿ ಶಾಲೆಗೆ ೩ ಕೊಠಡಿಗಳನ್ನು ಕಟ್ಟಿಸಿಕೊಡುವ ಯೋಚನೆ ಮಾಡಿದ್ದು ಆದಷ್ಟು ಬೇಗ ಅದನ್ನು ಮಾಡುವದಾಗಿ ತಿಳಿಸಿದರಲ್ಲದೇ ತಮ್ಮ ಶಾಲಾ ಅವಧಿಯ ನೆನಪುಗಳನ್ನು ಮೆಲುಕು ಹಾಕಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಬಿ ಬಳಗಾರ ಮಾತನಾಡಿ ಭೂಮಿಮೇಲೆ ಹುಟ್ಟಿದ ನಂತರ ನಾವು ಮೂರು ಜನರ ಋಣ ತಿರಿಸಲು ಆಗುದಿಲ್ಲ. ತಂದೆ ತಾಯಿ, ಗುರು ಮತ್ತು ಸಮುದಾಯದ ಋಣ ತಿರಿಸಲು ಆಗುವುದಿಲ್ಲ. ಆದರೂ ಸಹ ಇಂತಹ ಸತ್ಕಾರ್ಯಗಳಿಂದ ಅದು ಸಾಧ್ಯಮಾಡುವ ಕಾರ್ಯವಾಗಬೇಕು. ಅಂತಹ ಕಾರ್ಯವನ್ನು ಜೆ.ಎನ್.ಎಸ್ ಶಾಲೆಯ ಹಳೆಯ ವಿದ್ಯಾರ್ಥಿಗಳು ಮಾಡುತ್ತಿರುವುದು ಇತರರಿಗೆ ಮಾದರಿಯಾಗಿದೆ. ಹೊರಗಿಟ್ಟಿರುವ ಶಾಲೆಗಳು ಪವಿತ್ರವಾದ ಸ್ಥಳಗಳಾಗಿವೆ ಜಾತಿ ಮತ ಪಂಥವನ್ನುವುದು ಇಲ್ಲ. ನಮ್ಮೂರಿನ ಹೆಮ್ಮೆಯ ಶಾಲೆ ನಾಡಿಗೆ ತನ್ನದೇಯಾದ ಕೊಡುಗೆಯನ್ನು ನೀಡಿದೆ. ಇಲ್ಲಿ ಕಲಿತವರು ಮಂತ್ರಿಗಳಾಗಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ|| ಚಂದ್ರಶೇಖರ ಕಂಬಾರ ಅವರು ಕಲಿತ ಶಾಲೆ ನಮ್ಮದು. ಹಿರಿಯ ಸಾಹಿತಿ ಕೃಷ್ಣಮೂರ್ತಿ ಪುರಾಣಿಕ ಅವರು ಇಲ್ಲಿ ಶಿಕ್ಷಕರಾಗಿ ಸೇವೆಯನ್ನು ಸಲಿಸಿದ್ದಾರೆ. ಇನ್ನೂ ಹಲವಾರು ಗಣ್ಯರನ್ನು ಮಿನುಗುವ ತಾರೆಗಳನ್ನು ನಮ್ಮ ನಾಡಿಗೆ ಸಮರ್ಪಿಸಿದ್ ಕೀರ್ತಿ ಸರಕಾರಿ ಹೊಸ ಮಾಧ್ಯಮಿಕ ಶಾಲೆಯದಾಗಿದೆ ಎಂದು ತಿಳಿಸಿದರಲ್ಲರೇ ಶಾಲಾಭಿವೃದ್ದಿಗಾಗಿ ಶಿಕ್ಷಣ ಇಲಾಖೆಯೊಂದಿಗೆ ಪ್ರತಿಯೊಬ್ಬರು ಕೈ ಜೋಡಿಸಬೇಕೆಂದು ವಿನಂತಿಸಿದರು.
ಕಾರ್ಯಕ್ರಮವನ್ನು ಕಾರ್ಮಿಕ ಧುರೀಣ ಅಂಬಿರಾವ ಪಾಟೀಲ ಉದ್ಘಾಟಿಸಿದರು.ಇದೇ ಸಂದರ್ಭದಲ್ಲಿ ಜೆ-ಎನ್-ಎಸ್- ೧೯೯೨ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಜೆ.ಎನ್.ಎಸ್- ಶಾಲಾ ವಿದ್ಯಾರ್ಥಿಗಳಿಗೆ ಊಟದ ತಟ್ಟೆಗಳನ್ನು ಕೊಡುಗೆಯಾಗಿ ನೀಡಲಾಯಿತು. ನಿವೃತ್ತ ಶಿಕ್ಷಕ ಎಮ್.ಎನ್.ಹಾದಿಮನಿ ಅವರು ಶಾಲಾಭಿವೃದ್ದಿಗಾಗಿ ೫ಸಾವಿರ ರೂಗಳನ್ನು ಕೊಡುಗೆಯಾಗಿ ನೀಡಿದರು. ವಿವಿಧ ಸಾಲಿನಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ಶಾಲಾಭಿವೃದ್ದಿಗಾಗಿ ತನು-ಮನ-ಧನದಿಂದ ಸಹಕಾರ ನೀಡುವದಾಗಿ ಇದೇ ಸಂದರ್ಭದಲ್ಲಿ ಭರವಸೆಯನ್ನು ನೀಡಿದರು.
ವೇದಿಕೆಯಲ್ಲಿ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಎಮ್ ಬಿ ಪಾಟೀಲ, ಪ್ರಭಾರಿ ಮುಖ್ಯೋಪಾಧ್ಯಾಯ ಎಮ್ ಬಿ ಬಳಗಾರ, ನಿವೃತ್ತ ಶಿಕ್ಷಕ ಮಹಾದೇವಪ್ಪ ಹಾದಿಮನಿ, ಉದಯ ಚಬ್ಬಿ, ಶಿಕ್ಷಣ ಸಂಯೋಜಕ ಎಮ್ ಬಿ ವಣ್ಣೂರ ,ಜೆಎನ್‌ಎಸ್ ಹಳೆ ಶಾಲೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಶೆಟ್ಟಿ, ಕಾರ್ಯದರ್ಶಿ ಪ್ರದೀಪ ನಿಂಬಾಳಕರ, ಉಪಾಧ್ಯಕ್ಷ ರೋಹಿತ್ ಬೆನ್ನಾಡಿ ಉಪಸ್ಥಿತರಿದ್ದರು.