ಇಸ್ಮಾಯಿಲ್ ಗೋಕಾಕ ಅವರಿಗೆ “ಸಮಾಜ ಸೇವಾ ರತ್ನ” ಪ್ರಶಸ್ತಿ!
ಯುವ ಭಾರತ ಸುದ್ದಿ ಗೋಕಾಕ: ಇಸ್ಮಾಯಿಲ್ ಕುತ್ಬುದ್ದಿನ ಗೋಕಾಕ ಈ ಹೆಸರು ಗೋಕಾಕ ನಗರ ಹಾಗೂ ತಾಲೂಕಿನಲ್ಲಿ ಚಿರ ಪರಿಚಿತ. ಇದಕ್ಕೆ ಕಾರಣ ಅವರು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರೀತಿ. ಇಸ್ಮಾಯಿಲ್ ಅವರ ಹತ್ತಿರ ಯಾರೇ ತಮ್ಮ ಸಮಸ್ಯೆ ಪರಿಹರಿಸಲು ವಿನಂತಿಸಿದರೆ ತಕ್ಷಣ ಸ್ಫಂಧಿಸಿ. ಅದರ ನಿವಾರಣೆಗೆ ಪ್ರಾಮಾಣಿಕವಾಗಿ ಶ್ರಮಿಸುವದು ಹಾಗೂ ಸಹಾಯ ಮಾಡುವದು ಇವರ ಜನ್ಮದಾರಭ್ಯ ಬಂದ ಗುಣ.
ಇಸ್ಮಾಯಿಲ್ ಕುತ್ಬುದ್ದಿನ ಗೋಕಾಕ
ಬೀಜದಂತೆ ವೃಕ್ಷ ಎಂಬುವದು ನಮ್ಮಲ್ಲಿ ಬಹುಜನಜನಿತವಾದ ನಾಣ್ಣುಡಿ, ಅದಕ್ಕೆ ಪೂರಕವೆಂಬAತೆ ಇಸ್ಮಾಯಿಲ ಅವರ ತಂದೆ ಕುತ್ಬುದ್ದಿನ ಗೋಕಾಕ ಇವರು ಚಹಾ ಪುಡಿ ವ್ಯಾಪಾರಸ್ಥರು. ಅವರು ತಮ್ಮ ವ್ಯಾಪಾರದಲ್ಲಿ ಬಂದ ಲಾಭದ ಶೇ೨೦ರಷ್ಟು ಭಾಗವನ್ನು ಸಮಾಜ ಸೇವೆಗೆ ಹಾಗೂ ಧಾನ ಧರ್ಮಕ್ಕಾಗಿ ಬಳಸುತ್ತಿದ್ದರು ಎಂಬುವದನ್ನು ಈಗಲೂ ಅವರಿಂದ ಸಹಾಯ ಪಡೆದ ಜನ ಹೇಳುತ್ತಾರೆ. ಇದನ್ನೇ ಮೈಗೂಢಿಸಿಕೊಂಡು ಬೆಳೆದ ಇವರ ಮಕ್ಕಳು ಚಹಾ ಪುಡಿ ವ್ಯಾಪಾರದಿಂದ ಹಾರ್ಡವೇರ್ ಹಾಗೂ ರೀಯಲ್ ಎಸ್ಟೇಟ್ ಹೀಗೆ ಹತ್ತು ಹಲವು ಉದ್ಯಮಗಳಿಂದ ಬರುವ ಲಾಭದ ಅಂಶವನ್ನು ಸಮಾಜ ಸೇವೆಗೆ ವಿನಿಯೋಗಿಸುತ್ತಿದ್ದಾರೆ.
ಕುತ್ಬುದ್ದಿನ ಗೋಕಾಕ ಇವರು ನಗರಸಭೆ ಸದಸ್ಯರಾಗಿ, ಸ್ಥಾಯಿ ಸಮಿತಿ ಚೇರಮನ್ನರಾಗಿ ವಿವಿಧ ಅಧಿಕಾರ ಅನುಭವಿಸಿದ್ದರು ವಿನಯತೆಯನ್ನು ಮರೆತಿಲ್ಲ. ಮಕ್ಕಳಿಗೂ ಅದನ್ನು ಮರೆಯದಂತೆ ಮುತುವರ್ಜಿ ವಹಿಸುತ್ತಿದ್ದಾರೆ. ಗೋಕಾಕ ರಾಜಕೀಯ ಕ್ಷೇತ್ರದ ಅನಭಿಷಿಕ್ತ ದೊರೆಗಳಾಗಿರುವ ಜಾರಕಿಹೊಳಿ ಕುಟುಂಬದೊ0ದಿಗೆ ಒಳ್ಳೆಯ ಒಡನಾಟ ಹೊಂದಿದ್ದಾರೆ.
ಇಷ್ಟೇಲ್ಲ ಸಮಾಜ ಸೇವೆ ಮಾಡಿಯೂ ಎಲೆಮರೆ ಕಾಯಿಯಂತಿರುವ ಇಸ್ಮಾಯಿಲ್ ಗೋಕಾಕ ಅವರನ್ನು “ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ” ಸಂಘಟನೆ ಗುರುತಿಸಿ ದಿ.೨೫ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ “ಸಮಾಜ ಸೇವಾ ರತ್ನ ಪ್ರಶಸ್ತಿ” ನೀಡಿ ಗೌರವಿಸಲು ನಿರ್ಧರಿಸಿದೆ. ಈಗಾಗಲೇ ಇವರ ಸಹೋದರ ಜಾವೇದ ಗೋಕಾಕ ಅವರು ಕನ್ನಡಪ್ರಭ ಹಾಗೂ ಸುವರ್ಣ ವಾಹಿನಿಯ ರಜತಸಾಧಕ ಪ್ರಶಸ್ತಿ ನೀಡಿ ಗೌರವಿಸಿದೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಈ ಸಹೋದರರಿಗೆ ಇನ್ನೂ ಹೆಚ್ಚಿನ ಪ್ರಶಸ್ತಿ ಗೌರವ ದೊರೆತು ಸಮಾಜ ಸೇವೆಗೆ ಹೆಚ್ಚಿನ ಜವಾಬ್ದಾರಿ ಪಡೆಯುವಂತಾಗಲಿ ಎಂಬುದು ನಮ್ಮ ಹಾರೈಕೆ.