ಬಜೆಟ್ ದೇಶದ ಆರ್ಥಿಕತೆ ಹಾಗೂ ಅಭಿವೃದ್ದಿಗೆ ಪೂರಕವಾಗಿದೆ-ರಮೇಶ ಜಾರಕಿಹೊಳಿ.!
ಯುವ ಭಾರತ ಸುದ್ದಿ ಗೋಕಾಕ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ ಅವರು ಮಂಡಿಸಿರುವ ಇಂದಿನ ಬಜೆಟ್ ದೇಶದ ಆರ್ಥಿಕತೆ ಹಾಗೂ ಅಭಿವೃದ್ದಿಗೆ ಪೂರಕವಾಗಿದೆ. ಕೊರೊನಾ ಭೀಕರ ಸಂದರ್ಭದಲ್ಲೂ ಜನಸಾಮಾನ್ಯರಿಗೆ ಹೊರೆಯಾಗದಂತೆ ಬಜೆಟ್ ರೂಪಿಸಲಾಗಿದ್ದು, ತೆರಿಗೆ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡದಿರುವುದು ಇದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಮೂಲಭೂತ ಸೌಕರ್ಯ ವೃದ್ಧಿಗೆ ಈ ಬಾರಿಯ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ. ಭವಿಷ್ಯದ ಭಾರತದ ಚಹರೆ ಬದಲಿಸಲು ಬೇಕಾದ ಸಿದ್ಧತೆಗೆ ಈ ಬಜೆಟ್ ಪ್ರಮುಖ ಸಲಕರಣೆಯಾಗಿದೆ. ನೀರಾವರಿ, ಕೃಷಿ, ಆರೋಗ್ಯ, ಶಿಕ್ಷಣ, ರಸ್ತೆ, ಸಾರಿಗೆ, ಹೊಸ ರೈಲು ಯೋಜನೆಗಳು, ಡಿಜಿಟಲೀಕರಣ ಹಾಗೂ ಸ್ವಾವಲಂಬನೆಗೆ ಹೆಚ್ಚು ಒತ್ತು ನೀಡಿದ್ದು ಸ್ವಾಗರ್ತಾಹವಾಗಿದೆ.
ಈ ವರ್ಷದ ಬಜೆಟ್ ದೇಶದ ಆರ್ಥಿಕತೆಗೆ ಶಕ್ತಿ ನೀಡುವುದರ ಜೆuಟಿಜeಜಿiಟಿeಜತೆಗೆ ಮೂಲಭೂತ ಸೌಕರ್ಯಗಳಿಗೆ ಮತ್ತಷ್ಟು ಹೂಡಿಕೆ ನೆರವಾಗಲಿದೆ. ಹೆಚ್ಚಿನ ಬೆಳವಣಿಗೆ ಮತ್ತು ಹೆಚ್ಚಿನ ಉದ್ಯೋಗ ಅವಕಾಶಗಳು ಇದರಿಂದ ಸಿಗಲಿವೆ. ಹಸಿರು ಉದ್ಯೋಗ ಎಂಬ ಹೊಸ ಪ್ರಾವಿಜನ್ ಇದೆ. ಈ ಬಜೆಟ್ ಯುವಕರಿಗೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ನೆರವಾಗಲಿದೆ ಎಂದು ತಿಳಿಸಿದ್ದಾರೆ.