ರಾಣಿ ಚೆನ್ನಮ್ಮ ವಿಶ್ವವಿಧ್ಯಾಲಯ ಸಮಸ್ಯ ಬಗೆಹರಿಸಬೇಕು. ಅ.ಭಾ,ವಿ,ಪರಿಷತ್ ಮನವಿ!
ಯುವ ಭಾರತ ಸುದ್ದಿ ಇಂಡಿ; ರಾಣಿಚೆನ್ನಮ್ಮ ವಿಶ್ವವಿಧ್ಯಾಲಯದ ವಿವಿಧ ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ವಿಧ್ಯಾರ್ಥಿಗಳಿಗೆ ಅನುಕೂಲವಾಗುವ ವಾತಾವರಣ ನಿರ್ಮಿಸಬೇಕು ಎಂದು ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ ಕಾಯಕರ್ತರು ಇಂದು ಪಟ್ಟಣದಲ್ಲಿ ನೂರಾರು ವಿಧ್ಯಾರ್ಥಿಗಳು ಪ್ರತಿಭಟನೆ ಮಾಡಿ ತಹಶೀಲ್ದಾರ ಇವರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು.
ವಿಶ್ವ ವಿಧ್ಯಾಲಯಗಳು ವಿಧ್ಯಾರ್ಥಿಗಳ ಜೀವನ ರೂಪಿಸುವ ಗುಣಮಟ್ಟದ ಕಾರ್ಖಾನೆಗಳಾಗಬೇಕು. ವಿಧ್ಯಾರ್ಥಿಗಳಿಗೆ ಪೂರಕ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡುವುದು ಸರಕಾರಗಳ ಆದ್ಯ ಕರ್ತವ್ಯ. ಇತೀಚಿನ ದಿನಗಳಲ್ಲಿ ವಿಶ್ವವಿಧ್ಯಾಲಯವು ವಿಧ್ಯಾರ್ಥಿಗಳ ಸಮಸ್ಯಗಳಿಂದಬಚರ್ಚೆಗೆ ಗ್ರಾಸವಾಗುತ್ತಿವೆ ಆದ್ದರಿಂದ್ದ ಪದವಿ ಪರೀಕ್ಷೆಯ ನಂತರ ಫಲಿತಾಶ ವಿಳಂಭವಾಗುತ್ತಿವೆ. ನಿಗದಿತ ಸಮಯಕ್ಕೆ ಪ್ರಟಿಸಬೇಕು, ಪದೆ ಪದೆ ಪಠ್ಯಕ್ರಮ ಬದಲಾವಣೆ ಇತಹ ಅಚಾರ್ತ್ಯು ನಡೆಯದಂತೆ ಕ್ರಮಕೈಗೊಳ್ಳಬೇಕು, ಮುಮೌಲ್ಯಮಾಪನ ಫಲಿತಾಶದಲ್ಲಿಯೂ ಕೂಡಾ ವಿಳಂಭ ದೊರಣೆ, ಒಂದು ಕಾಲೇಜಿನಿಂದ ಇನ್ನೊಂದು ಕಾಲೇಜ ವರ್ಗಾವಣೆಗೆ ೫ ಸಾವಿರ ಇದರ ಬದಲಿ ಹಿಂದೆ 1 ಸಾವಿರದಾ ೫ ನೂರು ನಿಗದಿ ಮಾಡಿ. ಯುಜಿಸಿ. ಪಿ.ಜಿ ವಿಧ್ಯಾರ್ಥಿಗಳಿಗೆ ಶುಲ್ಕ ಹೆಚ್ಚಳ ಮಾಡಬಾರದು ಕಡಿತಗೋಳಿಸಬೇಕು. ಆಟಿಪೀಸಿಯಲ್,ಇಂಟಲಿಜನ್ಸಿ ವಿಷಯದ ಕಂಟೇAಟ ಬಳಕೆ ಮಾಡಲು ಪ್ರತಿವಿಧ್ಯಾರ್ಥಿಗೆ ರೂ೧೫೦ ವಸೂಲಿ ಮಾಡುವುದು ಖಂಡನೀಯ, ಧಡೀರನೆ ಪಠ್ಯಕ್ರಮ ಬದಲಾವಣೆ ಮಾಡಿರುವುದು ಖಂಡನಿಯ, ಪ್ರಶ್ನೆ ಪತ್ರಿಕೆ ಇಂಗ್ಲೀಷನಲ್ಲಿ ಪ್ರೀಂಟ ಮಾಡಿ ಕನ್ನಡದಲ್ಲಿ ಪ್ರೀಂಟ ಮಾಡದೆ ಇರುವುದು ವಿಧ್ಯಾರ್ಥಿಗಳಿಗೆ ಸಮಸ್ಯಯಾಗಿದೆ. ಸೆಮೀಸ್ಟರ್ ಪದ್ದತಿ ರದ್ದು ಮಾಡಿ ಇಯರ್ ಸೆಸ್ಟಮ ಮಾಡಬೇಕು. ಇಲ್ಲಿಯವರೆಗೂ ಪಠ್ಯಕ್ರಮ ಬಂದಿರುವುದಿಲ್ಲ. ಬಿ.ಬಿಎ ಮತ್ತು ಬಿ.ಕಾಂ ತರಗತಿ ಪ್ರಾರಂಭವಾಗಿದ್ದು ೧ ತಿಂಗಳ ನಂತರ ಬದಲಾಯಿಸಿದ್ದು ವಿಧ್ಯಾರ್ಥಿಗಳಿಗೆ ಗೊಂದಲವಾಗಿದೆ ಇಂತಹ ವಿಶ್ವ ವಿಧ್ಯಾಲಯದಲ್ಲಿ ಅನೇಕ ಜ್ವಲಂತ ಸಮಸ್ಯಗಳಿದ್ದು ಕೂಡಲೆ ಮೇಲಿನ ಸಮಸ್ಯಗಳನ್ನುಪರಿಹರಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ನಗರ ಕಾರ್ಯದರ್ಶಿ ಪ್ರಪುಲ್ ಕಟ್ಟಿಮನಿ, ಸಹ ಕಾರ್ಯದರ್ಶಿ ಸಚೀನ ಧಾನಗೊಂಡ, ದರ್ಶನ ತೋಳನೂರ, ಗಣೇಶ ಹಂಜಗಿ, ವಿಶ್ವನಾಥ ಬಿರಾದಾರ, ಪ್ರಜ್ವಲ ಭೀಶೆ, ರವಿ ತಮಶೆಟ್ಟಿ, ಈರಣ್ಣಾ ಸಿಂದಗಿ ಸೇರಿದಂತೆ ಅನೇಕ ವಿಧ್ಯಾರ್ಥಿ ವಿಧ್ಯಾರ್ಥಿನಿಯರು ಇದ್ದರು.