ಕ್ರೀಡೆಯಲ್ಲಿ ಪಾಲ್ಗೋಳುವದರಿಂದ ಸದೃಢ ಆರೋಗ್ಯವಂತರಾಗಿ ಸಾಧನೆ ಮಾಡಲು ಸಹಕಾರಿಯಾಗುತ್ತದೆ-ಸುರೇಶ್ ಸನದಿ!
ಯುವ ಭಾರತ ಸುದ್ದಿ ಗೋಕಾಕ: ವಿದ್ಯಾರ್ಥಿಗಳ ಸರ್ವಾಂಗೀಣ ಬೆಳೆವಣಿಗೆಯಲ್ಲಿ ಪಠ್ಯೇತರ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಸುರೇಶ್ ಸನದಿ ಹೇಳಿದರು.
ಗೋಕಾಕ ಕಾರ್ಯಕ್ರಮವನ್ನು ಉದ್ಘಾಟಿಸುತ್ತಿರುವ ಗಣ್ಯರು
ಶುಕ್ರವಾರದಂದು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾ, ಸಾಂಸ್ಕೃತಿಕ, ಎನ್.ಎಸ್.ಎಸ್ ಹಾಗೂ ಯುವ ರೇಡ್ ಕ್ರಾಸ್, ಐ.ಕ್ಯೂ.ಎ.ಪಿ, ರೋವರ್ಸ್ ಮತ್ತು ರೇಂಜರ್ಸ ಘಟಕಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡೆಯಲ್ಲಿ ಪಾಲ್ಗೋಳುವದರಿಂದ ಸದೃಢ ಆರೋಗ್ಯವಂತರಾಗಿ ಸಾಧನೆ ಮಾಡಲು ಸಹಕಾರಿಯಾಗುತ್ತದೆ. ಎಲ್ಲರಲ್ಲೂ ಪ್ರತಿಭೆ ಇದ್ದು, ಅದನ್ನು ಗುರುತಿಸಿ ಇಂತಹ ವೇದಿಕೆಗಳ ಮೂಲಕ ಪ್ರದರ್ಶಿಸುವ ಮೂಲಕ ಪ್ರೋತ್ಸಾಹಿಸಿ ಪ್ರತಿಭಾವಂತರಾಗಿರಿ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಸಮಾಜ ಸೇವೆ ಮನೋಭಾವವನ್ನು ಬೆಳೆಸಿಕೊಂಡು ಸಮಾಜ ಮುಖಿ ಕಾರ್ಯಗಳಲ್ಲಿ ಪಾಲ್ಗೊಂಡು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ಪಡೆದು ಒಳ್ಳೆಯ ನಾಗರಿಕರಾಗಿರೆಂದು ಹಾರೈಸಿದರು.
ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ, ಪ್ರಾಚಾರ್ಯರಾದ ಮಹೇಶ್ ಕಂಬಾರ, ಎಲ್ ಎ ಅಂತರಗಟ್ಟಿ, ಉಪನ್ಯಾಸಕರುಗಳಾದ ವ್ಹಿ ಐ ತಿಳಿಗಂಜಿ, ಎ ಎ ನಧಾಫ, ಡಾ. ಶ್ರೀಧರ್, ಸಾವಿತ್ರಿ ಶಿಗ್ಲಿ, ಸಂತೋಷ ಬಿ ಎಸ್, ಸಿ ಎಚ್ ಶಿಂಗೆ, ವಿದ್ಯಾರ್ಥಿ ಪ್ರತಿನಿಧಿಗಳಾದ ಆಪ್ರೀನ ಸಾರವಾನ, ಕೀರ್ತಿ ಕೋಲಕಾರ, ಗೀತಾ ಮನ್ನಿಕೇರಿ ಇದ್ದರು.