Breaking News

ಒಂದು ಸಮಾಜದ ಅಭಿವೃದ್ದಿಗೆ ಶಿಕ್ಷಣ ಮುಖ್ಯ, ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಜೊತೆ ಸಂಸ್ಕಾರ ನೀಡಿ- ಶಾಸಕ ಯಶವಂತರಾಯಗೌಡ ಪಾಟೀಲ!

Spread the love

ಒಂದು ಸಮಾಜದ ಅಭಿವೃದ್ದಿಗೆ ಶಿಕ್ಷಣ ಮುಖ್ಯ, ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಜೊತೆ ಸಂಸ್ಕಾರ ನೀಡಿ-ಶಾಸಕ ಯಶವಂತರಾಯಗೌಡ ಪಾಟೀಲ!

ಯುವ ಭಾರತ ಸುದ್ದಿ ಇಂಡಿ : ಒಂದು ಸಮಾಜದ ಅಭಿವೃದ್ದಿಗೆ ಶಿಕ್ಷಣ ಮುಖ್ಯ, ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಜೊತೆ ಸಂಸ್ಕಾರ ನೀಡಿ ವಿಶ್ವರತ್ನ ಡಾ. ಬಿ.ಆರ್. ಅಂಬೇಡ್ಕರAತೆ ಹೆಮ್ಮೇಯ ಭಾರತದ ಪುತ್ರರನ್ನಾಗಿ ಮಾಡಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ತಾಲೂಕಿನ ಕೋಟ್ನಾಳ ಗ್ರಾಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ ನೂತನ ಕಟ್ಟಡ ಸಮುದಾಯ ಭವನ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು ಸಮಾಜ ಎನ್ನಾದರೂ ಬದಲಾವಣೆ ಮಾಡಬೇಕು ಎಂಬ ಇಚ್ಛಾಶಕ್ತಿ ಇದ್ದರೆ ಶಿಕ್ಷಣದಿಂದ ಮಾತ್ರ ಸಾಧ್ಯೆ. ಶಿಕ್ಷಣ ಮನುಷ್ಯನ ಸಂಸ್ಕಾರ ನಡೆ ,ನುಡಿ ಮಾನವೀಯ ಬದುಕಿಗೆ ದಾರಿ ದೀಪವಿದ್ದಂತೆ ಡಾ.ಬಾಬಾಸಾಹೇಬ ಅಂಬೇಡ್ಕರವರು ಶಿಕ್ಷಣಪಡೆದು ಸಮಸಮಾಜ ನಿರ್ಮಾಣ ಮಾಡಿದ್ದಾರೆ. ಭಾರತ ಪ್ರಪಂಚದಲ್ಲಿಯೇ ಅಧ್ಯಾತ್ಮಿಕ ,ಧಾರ್ಮಿಕ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿ ನಮ್ಮಲ್ಲಿ ಇರುವಷ್ಟು ಗುಡಿ,ಗುಂಡಾರ.ಮಠ ಪುಣ್ಯಕ್ಷೇತ್ರಗಳು ಬೇರೆ ದೇಶಗಳಲ್ಲಿ ಕಾಣುವುದಿಲ್ಲ. ನಾನು ಕೂಡಾ ಒಬ್ಬ ಅಧ್ಯಾತ್ಮಿಕ ಜೀವಿ ಗುಡಿ.ಗುಂಡಾರ , ಮಠ ,ಮಂದಿರ ಕಾವಿಗಳನ್ನು ಕಂಡಾಗ ಎಲ್ಲಿಲ್ಲದ ಅಭಿಮಾನ ಭಕ್ತಿ ಗೌರವ ಇದು ಕೋಟ್ನಾಳ ಗ್ರಾಮದಲ್ಲಿ ಆದಿಶಕ್ತಿ ಶ್ರೀರೇಣುಕಾ ಯಲ್ಲಮ್ಮ ಜಾತ್ರೆ , ಆಟ.ನಾಟಕ ,ಅಗಿಕುಂಡ ಹಾಯುವ ಜಾತ್ರೆ ಮಾಡಿರುವುದು ಸ್ವಾಗತಾರ್ಹ ನಮ್ಮ ಪೂರ್ವಜರ ಸಂಸ್ಕಾರ ಮರೇಯಬಾರದು ಹಿಂದೆ ನೋಡಿ ಮುಂದೆ ಸಾಗಬೇಕು .ಇತಿಹಾಸ ಮರೇತವರು ಇತಿಹಾಸ ಸೃಷ್ಠಿಸಲಾರರು. ಈ ಹಿಂದೆ ನಿಮ್ಮ ಗ್ರಾಮದ ಮುಂದೆ ಹಳ್ಳದಿಂದ ಸಾರ್ವಜನಿಕರಿಗೆ ಹಾಯ್ದಾಡಲು ತೊಂದರೆಯಾಗಿತ್ತು ಇದನ್ನು ನಾನು ಹೇಳಿದಂತೆ ಮಾಡಿರುವೆ. ಈ ಭಾಗದಲ್ಲಿ ನೀರಿನ ತೊಂದರೆ ಇತ್ತು ಸದ್ಯ ತಡವಲಗಾ, ಹಂಜಗಿ, ಗುಂದವಾನ, ಕಪನಿಂಬರಗಿ, ಕೋಟ್ನಾಳ ಕೆರೆಗಳು ತುಂಬಿವೆ ಮುಂಬರುವ ದಿನಗಳಲ್ಲಿ ಸಂಪೂರ್ಣ ನೀರಾವರಿಯಾಗಲಿದೆ .
ಇಂದು ದಲಿತ ಸಮುದಾಯ ಅನೇಕ ಬೇಡಿಕೆ ಇಟ್ಟಿದ್ದಾರೆ ಕೇಳುವುದು ನಿಮ್ಮ ಹಕ್ಕು ನಾನೇನು ನನ್ನ ಮನೆಯಿಂದ ಗೋಧಿ.ಜೋಳ,ಕಬ್ಬು ಮಾರಿ ತಂದು ಕೊಡುವುದಿಲ್ಲ ೪೦ ವರ್ಷ ನನಗೆ ರಾಜಕೀಯವಾಗಿ ಬೆಳೆಸಿ ಈ ಮಟ್ಟಕ್ಕೆ ತಂದಿದ್ದೀರಿ , ಶ್ರೀರೇಣುಕಾ ಯಲ್ಲಮ್ಮ ದೇವಾಲಯದ ಮುಂಭಾಗ ಮಾಲಗಂಬ ಡಿಶೆಂಬರ್ ತಿಂಗಳಲ್ಲಿಯೇ ನಿರ್ಮಾಣದ ಪೂಜೆ ಮಾಡೋಣ ಸರಕಾರದ ಅನುಧಾನ ಕಡಿಮೆ ಬಿದ್ದರೂ ಕೈಯಿಂದ ಕೊಡುತ್ತೇನೆ ಇನ್ನುಳಿದ ಕೆಲಸಗಳು ಸಾಧ್ಯವಾದಮಟ್ಟಿಗೆ ಕ್ರಮಕೈಗೋಳ್ಳುವ ಭರವಸೆ ನೀಡಿದರು.

“ನನ್ನ ಅವಧಿಯಲ್ಲಿ ತಾಲೂಕಿನ ಸರ್ವಾಂಗೀಣ ಅಭಿವೃದ್ದಿಯಾಗಿದೆ ಮುಂದೊAದು ದಿನ ಜಿಲ್ಲೆ ಎಂಬ ಧ್ವನಿ ಸರಕಾರದಲ್ಲಿ ಎದ್ದರೆ ಪ್ರಥಮ ಇಂಡಿ ಎನ್ನುವಂತೆ ಕೆಲಸಗಳು ಆಗಿವೆ. ರಾಜಕಾರಣ ಬರುತ್ತದೆ ಹೋಗುತ್ತದೆ ೧೨ನೇ ಶತಮಾನದ ಅಣ್ಣ ಬಸಣ್ಣನ ಸಂದೇಶದAತೆ ಎಲ್ಲ ಸಮುದಾಯಕ್ಕೆ ಗೌರವಯುತ ನಡೆದುಕೊಂಡು ಅನೇಕ ಸ್ಥಾನ ಮಾನ ನೀಡಿದ್ದೇನೆ, ಜನರ ಧ್ವನಿ, ಜನತೆಯ ನಾಡಿ ಮಿಡಿತ ಪ್ರಬುದ್ದರಪರವಾಗಿ ಸದಾ ಇರಬೇಕು ಎಂದು ಸಾರ್ವಜನಿಕರಿಗೆ ತಿಳಿಸಿದರು” ಶಾಸಕ ಯಶವಂತರಾಯಗೌಡ ಪಾಟೀಲ

ದಿವ್ಯಸಾನಿಧ್ಯ ರಾಚಯ್ಯಾ ಹಿರೇಮಠ ವಹಿಸಿದರು.ಸಿದ್ದರಾಯ ಹಡಪದ, ಬವರಾಜ ಪೂಜಾರಿ,ಚಂದ್ರಕಾAತ ಗೋಡೆಕಾರ, ಮಲ್ಲುಗೌಡ ಕುಮಟಗಿ, ಶಿಕ್ಷಕ ಉಮದಿ, ಜಕ್ಕರಾಯ ಪೂಜಾರಿ, ಮಾಂತು ಪೂಜಾರಿ, ಪರಶುರಾಮ ಕಾಂಬಳೆ ವೇದಿಕೆಯಲ್ಲಿದ್ದರು.ನಿವೃತ್ತ ಶಿಕ್ಷಕ ಸಿದ್ದಪ್ಪ ಹೊಸಮನಿ,ಸುರೇಶ ಕಾಂಬಳೆ, ಬಸವರಾಜ ದೊಡಮನಿ,ಮಂಜುನಾಥ ಕಾಂಬಳೆ ,ಹುಸನಪ್ಪ ಹೊಸಮನಿ, ಬಾಸ್ಕರ ಹೊಸಮನಿ, ವಿಜಯಕುಮಾರ ಹೊಸಮನಿ, ಶಿವಪ್ಪ ಹೊಸಮನಿ, ರಾಹುಲ ಕಾಂಬಳೆ, ವಿಶ್ವನಾಥ ಕಾಂಬಳೆ, ಮಹೇಶ ಕಾಂಬಳೆ,ರವಿ ಕಾಂಬಳೆ, ಅನೀಲ ಹೊಸಮನಿ, ಗಣಪತಿ ಹೊಸಮನಿ, ಯಲ್ಲಪ್ಪ ಕಾಂಬಳೆ ,ಹೊನ್ನಪ್ಪ ಕಾಂಬಳೆ ಸೇರಿದಂತೆ ಕೋಟ್ನಾಳ ಗ್ರಾಮದ ದಲಿತ ಮುಖಂಡರು ಗ್ರಾಮಸ್ಥರು ಗಣ್ಯರು ಇದ್ದರು.


Spread the love

About Yuva Bharatha

Check Also

ಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ!

Spread the loveಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ! ಯುವ ಭಾರತ ಸುದ್ದಿ ಗೋಕಾಕ: ಪ್ರಯಾಗರಾಜನ ಕುಂಭಮೇಳದಲ್ಲಿ ಭಾಗವಹಿಸಿ ಮರಳಿ ಬರುತ್ತಿರುವಾಗ …

Leave a Reply

Your email address will not be published. Required fields are marked *

two × 3 =