ನಂದಿನಿ ಸೈಕ್ಲೀಂಗ ಸ್ಫರ್ಧೆ ಆಯೋಜಿಸಿದ್ದು ಮಾದರಿಯಾಗಿದೆ- ಕಾರ್ಯದರ್ಶಿ ಆರ್ ಎಚ್ ಪೂಜೇರಿ.!
ಯುವ ಭಾರತ ಸುದ್ದಿ ಗೋಕಾಕ: ರೈತರ ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಈ ನಂದಿನಿ ಸೈಕ್ಲೀಂಗ ಸ್ಫರ್ಧೆ ಆಯೋಜಿಸಿದ್ದು ಮಾದರಿಯಾಗಿದೆ ಎಂದು ಜಿಲ್ಲಾ ಸೈಕ್ಲೀಂಗ ಅಸೋಶಿಯೇಶನ ಕಾರ್ಯದರ್ಶಿ ಆರ್ ಎಚ್ ಪೂಜೇರಿ ಹೇಳಿದರು.
ಅವರು, ಶನಿವಾರದಂದು ನಗರದಲ್ಲಿ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಆಯೋಜಿಸಿದ್ದ ಗೋಕಾಕ ತಾಲೂಕ ಮಟ್ಟದ ನಂದಿನಿ ಸೈಕ್ಲೀಂಗ ಸ್ಫರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಸೈಕ್ಲೀಂಗ ಸ್ಫರ್ಧೆಗೆ ಸರಕಾರದಿಂದ ಯಾವುದೇ ಪ್ರೋತ್ಸಾಹ ಇಲ್ಲ. ಇದನ್ನು ಶಾಸಕ ರಮೇಶ ಜಾರಕಿಹೊಳಿ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಅವರ ಹಾಗೂ ವಿವೇಕರಾವ ಪಾಟೀಲರವರ ಗಮನಕ್ಕೆ ತಂದಾಗ ರಾಜ್ಯದ ಎಲ್ಲ ಹಾಸ್ಟೇಲಗಳಲ್ಲಿ ಸೈಕ್ಲೀಂಗ ಕ್ರೀಡಾ ಪಟುಗಳಿಗೆ ಅವಕಾಶ ಕಲ್ಪಿಸಿದರು. ಮಹಿಳಾ ಕ್ರೀಡಾಪಟುಗಳಿಗೆ ಪ್ರತ್ಯೇಕ ಹಾಸ್ಟೇಲಗಳನ್ನು ಕಲ್ಪಿಸಿಕೊಟ್ಟು ಈ ಸ್ಫರ್ಧೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದರು. ಈಗ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಬೆಳಗಾವಿ ಕೆಎಮ್‌ಎಫನಿಂದ ಜಿಲ್ಲಾ ಮಟ್ಟದ ಸ್ಫರ್ಧೆಯನ್ನು ಎರ್ಪಡಿಸಿದ್ದು ಶ್ಲಾಘನೀಯ. ಹಲವಾರು ವಿಶೇಷ ಯೋಜನೆಗಳೊಂದಿಗೆ ಕೆಎಮ್‌ಎಫ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಈ ಸ್ಫರ್ಧೆಯನ್ನು ರಾಜ್ಯಮಟ್ಟದಲ್ಲೂ ಆಯೋಜಿಸುವಚಿತೆ ಮನವಿ ಮಾಡಿದರು.
ನಂದಿನಿ ಸೈಕ್ಲೀಂಗ್ ಸ್ಫರ್ಧೆಗೆ ಕೆಎಮ್‌ಎಫ ನಿರ್ದೇಶಕ ಅಮರನಾಥ ಜಾರಕಿಹೊಳಿ ಚಾಲನೆ ನೀಡಿ, ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.
ಬಾಲಕರ ಸೈಕ್ಲೀಂಗ ಸ್ಫರ್ಧೆಯಲ್ಲಿ ಬೆಣಚಿನಮರ್ಡಿ ಗ್ರಾಮದ ಜಿಎಚ್‌ಎಸ್‌ನ ರಾಮಸಿದ್ಧ ಖಿಲಾರಿ ಪ್ರಥಮ, ಮಾಲದಿನ್ನಿ ಜಿಎಚ್‌ಎಸ್‌ನ ಮಲ್ಲಿಕಾರ್ಜುನ ಮುಗಳಿ ದ್ವೀತಿಯ, ಗೋಕಾಕನ ಜಿಪಿಯೂಸಿಯ ಪ್ರಜ್ವಲ ಖಿಲಾರಿ ತೃತೀಯ ಸ್ಥಾನ ಪಡೆದರು.
ಬಾಲಕಿಯರ ಸೈಕ್ಲೀಂಗ ಸ್ಫರ್ಧೆಯಲ್ಲಿ ಪಾಮಲದಿನ್ನಿಯ ಜಿಎಚ್‌ಎಸ್‌ನ ಪವೀತ್ರಾ ಪಾಟೀಲ ಪ್ರಥಮ, ಗೋಕಾಕ ನಗರದ ಜಿವ್ಹಿಎಸ್‌ನ ಸಂಜನಾ ಗಾನೂರ ದ್ವೀತಿಯ ಹಾಗೂ ಕೆಎಲ್‌ಇ ಶಾಲೆಯ ಸಾಕ್ಷೀ ಬೆನ್ನಾಡಿ ತೃತೀಯ ಸ್ಥಾನ ಪಡೆದರು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕ ಎಮ್ ಪಿ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಜಿ ಶ್ರೀನಿವಾಸ, ಮಾರುಕಟ್ಟೆ ಅಧಿಕಾರಿ ಮುಜಾಹಿದ್ ಪಿ, ಕ್ಷೇತ್ರಶಿಕ್ಷಣಾಧಿಕಾರಿ ಜಿ ಬಿ ಬಳಗಾರ, ಡಿವೈಎಸ್‌ಪಿ ಮನೋಜಕುಮಾರ ನಾಯ್ಕ, ನಗರಾಧ್ಯಕ್ಷ ಜಯಾನಂದ ಹುಣಚ್ಯಾಳ, ಎಮ್ ಪಿ ಮರನೂರ, ತೋರನಗಟ್ಟಿ, ಗಂಗಾಧರ ಕೊಟ್ರಿ ಇದ್ದರು.