ಬಸವೇಶ್ವರ ಸಕ್ಕರೆ ಕಾರ್ಖಾನೆಯ ಭೂಮಿ ಪೂಜೆ
ಯುವ ಭಾರತ ಸುದ್ದಿ ಇಂಡಿ: ತಾಲೂಕಿನ ನಿಂಬಾಳ ಹಾಗೂ ಹಂಜಗಿ ಗ್ರಾಮಗಳ ಮಧ್ಯ ಶ್ರೀ ಬಸವೇಶ್ವರ ಸಕ್ಕರೆ ಕಾರ್ಖಾನೆಯ ಭೂಮಿ ಪೂಜಾ ಕಾರ್ಯಕ್ರಮ ವ್ಯವಸ್ಥಾಪಕ ನಿರ್ದೇಶಕ ಎಮ್,ಎಸ್ ಪಾಟೀಲ ನೈತೃತ್ವದಲ್ಲಿ ನಡೆಯಿತ್ತು.
ಬಹು ವರ್ಷಗಳ ಈ ಭಾಗದ ರೈತರಿಗೆ ಅನೂಕಲವಾಗಲಿ ಎಂಬ ಉದ್ದೇಶದಿಂದ ಬಸವೇಶ್ವರ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಯೋಜನೆ ಹಾಕಿಕೊಳ್ಳಲಾಗಿತ್ತು ಕೋವಿಡ್ -೧೯ ಹಾಗೂ ಇನ್ನು ಅನೇಕ ತಾಂತ್ರಿಕ ತೊಂದರೆಯಿಂದಾಗಿ ಹಿನ್ನಡೇಯಾಗಿತ್ತು. ಯಾವುದೇ ಕಾರ್ಯಗಳಿಗೆ ಭಗವಂತನ ದಯೇ ಯೋಗಾ ಯೋಗ ಕಾಲ ಕೂಡಿಬರಬೇಕು. ದೇವರ ಇಚ್ಚೇ ಇಲ್ಲದೆ ಹುಲ್ಲುಕಡ್ಡಿಕೂಡಾ ಅಲುಗಾಡುವುದಿಲ್ಲ ಹಾಗೆ ಈ ಹಿಂದೆಯೇ ಪ್ರಾರಂಭಿಸಬೇಕಾಗಿತ್ತು ಅನಿವಾರ್ಯಕಾರಣಗಳಿಂದ ಆಗಿಲ್ಲ. ಈ ಕಾರ್ಖಾನೆ ಸುಮಾರು ೩೫೦೦ ಮೇಟ್ರೀಕ್ ಟನ್ ಕಬ್ಬು ನುರಿಸುವ ಯೋಜನೆಯಾಗಿದ್ದು ಮುಂದಿನ ೯ ತಿಂಗಳಲ್ಲಿ ಸಕ್ಕರೆ ಹಾರಿಸಿ ರೈತರಿಗೆ ಅನುಕೂಲಮಾಡಿಕೊಡುವ ಉದ್ದೇಶದಿಂದ ಕಾಮಗಾರಿ ತ್ವರಿತವಾಗಿ ಮಾಡುವ ಸಂಕಲ್ಪ ಇದೆ ಆದಷ್ಟು ಬೇಗ ಪೂರ್ಣಗೋಳಿಸಲಾಗುವುದು ಎಂದರು.
ಜೆಡಿಎಸ್ ಮುಖಂಡ ಬಿ.ಡಿ ಪಾಟೀಲ ಮಾತನಾಡಿ ಈ ಭಾಗದಲ್ಲಿ ಶ್ರೀಬಸವೇಶ್ವರ ಸಕ್ಕರೆ ಕಾರ್ಖಾನೆ ಪ್ರಾರಂಭ ಮಾಡಿ ರೈತರಿಗೆ ಅನುಕೂಲ ಕಲ್ಪಿಸಬೇಕು ಹಾಗೂ ಕಾರ್ಖಾನೆ ಸ್ಥಾಪಿಸುವದರಿಂದ ಯುವಕರಿಗೆ ಉದ್ಯೋಗ ಸಿಗುತ್ತದೆ ಇಂತಹ ಅದ್ಭುತ ಸಾಹಸ ಕಾರ್ಯಕ್ಕೆ ಕೈ ಜೋಡಿಸಿದ ಯುವ ನಾಯಕ ಶಿಕ್ಷಣ ಪ್ರೇಮಿ ಎಮ್.ಎಸ್ ಪಾಟೀಲ ಇವರ ಸಾಧನೆ ಮೆಚ್ಚುವಂತಹದು. ಯಾವುದೇ ಸರಕಾರ ಸಹಾಯ ಇಲ್ಲದೆ ಅಧಿಕಾರ ,ರಾಜಕೀಯ ಶಕ್ತಿ ಇಲ್ಲದೆ ಸಾರ್ವಜನಿಕರ, ರೈತರ ನಾಡಿಮಿಡಿತ ಅರಿತು ರೈತರ ಧ್ವನಿಯಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಮುಂಬರುವ ದಿನಗಳಲ್ಲಿ ಈ ಭಾಗದ ರೈತರ ಬಾಳಿಗೆ ಶ್ರೀಬಸವೇಶ್ವರ ಸಕ್ಕರೆ ಕಾರ್ಖಾನೆ ಸಾಗರೋತ್ತರವಾಗಿ ಬೆಳೆಯಲಿ ಎಂದರು.
ದಿವ್ಯಸಾನಿಧ್ಯವಹಿಸಿ ಮದ್ದಾನೆ ಮಹಾರಾಜರು ಆರ್ಶೀವಚನ ನೀಡಿದರು.
ಸಿದ್ದು ಡಂಗಾ, ಶಿವಾಜಿರಾವ ಕದಂ, ಎಸ್.ಎನ್ ಪಾಯಕರ, ಸುರೇಶಗೌಡ ಬಿರಾದಾರ, ಜಹಾಂಗೀರ ಚೌದರಿ, ಬಾಬು ಮೇತ್ರಿ, ಶಿವು ಮುರಗುಂಡಿ, ಗೇನುಬಾ ಹಿರೇಕುರಬರ, ಸುರೇಶ ಹೂಗಾರ ಸೇರಿದಂತೆ ಅನೇಕರಿದ್ದರು.