ಐತಿಹಾಸಿಕ ಪರಂಪರೆ ಉಳಿಸಿ: ಡಾ.ಆರ್.ಎಚ್.ಸಜ್ಜನ
ಯುವ ಭಾರತ ಸುದ್ದಿ ಮುದ್ದೇ ಬಿಹಾಳ :
ಅನಾಗರಿಕತೆಯಿಂದ ನಾಗರಿಕತೆಯಕಡೆಗೆ ಸಾಗಿದ ಮಾನವನ ಪಯಣವೇ ಪರಂಪರೆಯಾಗಿದೆ. ನಮ್ಮ ಪರಂಪರೆಯ ಮೂಲಾಧಾರಗಳಾದ ಕೋಟೆಗಳು, ಸ್ಮಾರಕಗಳು, ನಾಣ್ಯ, ಶಾಸನ,ಸಾಹಿತ್ಯವನ್ನು ಸಂಗ್ರಹಿಸಿ ಸಂರಕ್ಷಿಸಿಕೊಳ್ಳಬೇಕೆಂದು ಮುದ್ದೇಬಿಹಾಳದ ಎಮ್.ಜಿ.ವ್ಹಿ.ಸಿ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಡಾ. ಆರ್.ಎಚ್.ಸಜ್ಜನ ಅವರು ಅಭಿಪ್ರಾಯಪಟ್ಟರು.
ಪಟ್ಟಣದ ಬಿ.ಎಲ್.ಡಿ.ಇ. ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯ್.ಕ್ಯೂ.ಎ.ಸಿ. ಮತ್ತು ಇತಿಹಾಸ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಐತಿಹಾಸಿಕ ಪರಂಪರೆ ಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಮುಂದಿನ ಪೀಳಿಗೆಗೆ ಈ ಶ್ರೀಮಂತ ಸಂಸ್ಕೃತಿ, ಪರಂಪರೆಯನ್ನು ಪರಿಚಯಿಸಿಕೊಡಲು ಪ್ರತಿಯೊಬ್ಬರೂ ಜಾತಿ,ಮತ,ಧರ್ಮ,ಪಂಗಡವನ್ನು ಮರೆತು ಅವುಗಳ ರಕ್ಷಣೆಮಾಡಿ, ಮಹತ್ವ ತಿಳಿಸಿಕೊಟ್ಟಾಗ ಮಾತ್ರ ಐತಿಹಾಸಿಕ ಪರಂಪರೆ ಉಳಿಯಲು ಸಾಧ್ಯವೆಂದು ಹೇಳಿದರು.
ಐತಿಹಾಸಿಕ ಪರಂಪರೆ ಕೂಟ ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಎಸ್.ಬಿ.ಜನಗೊಂಡ ಅವರು ಉನ್ನತ ಸಂಸ್ಕೃತಿಯ ಮೂಲಕವೇ ನಮ್ಮ ದೇಶ ಶ್ರೀಮಂತ ಇತಿಹಾಸವನ್ನು ಹೊಂದಿದ್ದು ನಮ್ಮೆಲ್ಲರ ಹೆಮ್ಮೆಯ ಸಂಗತಿ ಯೆಂದು ಹೇಳಿದರು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎ.ವ್ಹಿ.ಸೂರ್ಯವಂಶಿಯವರು ಅಧ್ಯಕ್ಷತೆಯನ್ನು ವಹಿಸಿಕೊಂಡು ಐತಿಹಾಸಿಕ ಪರಂಪರೆಯ ಉಳಿಕೆ ಮತ್ತು ಬೆಳವಣಿಗೆಯಲ್ಲಿ ಯುನೆಸ್ಕೊದ ಪಾತ್ರ ತುಂಬಾ ಮಹತ್ವದ್ದಾಗಿದೆ. ಯುನೆಸ್ಕೊದ ಜೊತೆಗೆ ನಾವೆಲ್ಲರೂ ಕೈಜೋಡಿಸಿ ಪ್ರಚಾರರಾಯಭಾರಿಗಳಾಗಿ ಪ್ರವಾಸೋಧ್ಯಮವನ್ನು ಬೇಳೆಸುವಲ್ಲಿ ಮುಂದಡಿಯಿಡಬೇಕೆಂದು ಅಭಿಪ್ರಾಯಪಟ್ಟರು. ವೇದಿಕೆಯ ಮೇಲೆ ವಿಧ್ಯಾರ್ಥಿ ಒಕ್ಕೂಟ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಡಿ.ಎಸ್.ಲಗಳಿ, ಎನ್.ಎಸ್.ಎಸ್.ಹಾಗೂ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ವಾಯ್.ಬಿ.ನಾಯಕ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ರವೀಂದ್ರಗೌಡ ಕೆ. ಉಪಸ್ಥಿತರಿದ್ದರು. ಆಯ್.ಕ್ಯೂ.ಎ.ಸಿ. ಹಾಗೂ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ದಿಲೀಪಕುಮಾರ, ನ್ಯಾಕ್ ಸಂಯೋಜಕರು ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ.ಸಿ.ಪಿ. ಧಡೆಕರ, ಪ್ರೊ. ಪಿ.ಎಸ್.ಹೊರಕೇರಿ, ಪ್ರೊ.ಎಸ್.ಜೆ.ಸೂರ್ಯವಂಶಿ, ಪ್ರೊ.ಎಸ್.ಪಿ.ಕೋಟಿ, ಪ್ರೊ.ಎಮ್.ಆರ್.ಮಮದಾಪೂರ, ಪ್ರೊ.ಎಸ್.ಡಿ.ಹನುಮರಡ್ಡಿ,ಪ್ರೊ.ಆರ್.ಎನ್.ರಾಠೋಡ ಹಾಗೂ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿಯವರು ಹಾಜರಿದ್ದರು. ಕುಮಾರಿ ಮಹಾಲಕ್ಷಿö್ಮÃ ಕಾಳಹಸ್ತೇಶ್ವರಮಠ ಪ್ರಾರ್ಥಿಸಿದಳು. ಡಾ.ವಾಯ್.ಬಿ.ನಾಯಕ ಪರಿಚಯಿಸಿದರು. ಪ್ರೊ.ಎಮ್.ಕೆ.ಯಾದವ ನಿರೂಪಿಸಿ, ವಂದಿಸಿದರು.