Breaking News

ಬೆಳಗಾವಿ ಅಧಿವೇಶನದಲ್ಲಿ ವಕೀಲರ ಹಿತರಕ್ಷಣಾ ಕಾಯ್ದೆ ಜಾರಿಗೆ ತರುವಂತೆ ಆಗ್ರಹ

Spread the love

ಬೆಳಗಾವಿ ಅಧಿವೇಶನದಲ್ಲಿ ವಕೀಲರ ಹಿತರಕ್ಷಣಾ ಕಾಯ್ದೆ ಜಾರಿಗೆ ತರುವಂತೆ ಆಗ್ರಹ

ಯುವ ಭಾರತ ಸುದ್ದಿ ಬಸವನಬಾಗೇವಾಡಿ :
ಪಟ್ಟಣದಲ್ಲಿ ವಕೀಲರು ಶುಕ್ರವಾರ ಕೋರ್ಟ್ ಕಲಾಪದಿಂದ ದೂರ ಉಳಿದು ಬೈಕ್ ಮೂಲಕ ತಹಸೀಲ್ದಾರ ಕಚೇರಿಗೆ ತೆರಳಿ ಬೆಳಗಾವಿಯಲ್ಲಿ ಡಿ.೧೯ ರಿಂದ ಆರಂಭವಾಗುವ ಅಽವೇಶನದಲ್ಲಿ ವಕೀಲರ ಹಿತರಕ್ಷಣಾ ಕಾಯ್ದೆ ಮಂಡಿಸಿ ಜಾರಿಗೆ ತರಬೇಕೆಂದು ಆಗ್ರಹಿಸಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ ಡಿ.ಎಚ್.ಕೋಮಾರ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಕೀಲ ಮಲ್ಲಿಕಾರ್ಜುನ ದೇವರಮನಿ ಮಾತನಾಡಿ, ಸಂವಿಧಾನ ಅಡಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢಗೊಳಿಸಲು ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಮೂರು ಅಂಗಗಳು ಗುರುತರವಾದ ಜವಾಬ್ದಾರಿಯನ್ನು ನಿರ್ವಹಿಸುತ್ತಿವೆ. ನ್ಯಾಯಾಂಗದಲ್ಲಿ ಕಕ್ಷಿದಾರರಿಗೆ ನ್ಯಾಯ ಒದಗಿಸಲು, ನ್ಯಾಯ ವ್ಯವಸ್ಥೆಯನ್ನು ಎತ್ತಿ ಹಿಡಿಯಲು ಶ್ರಮಿಸುತ್ತಿರುವ ವಕೀಲರ ಪಾತ್ರವೂ ಸ್ಮರಣೀಯವಾಗಿದೆ. ಇಂತಹ ಕಾರ್ಯ ಮಾಡುತ್ತಿರುವ ಇವರಿಗೆ ರಕ್ಷಣೆಯಿಲ್ಲದೇ ಭಯದ ವಾತಾವರಣದಲ್ಲಿ ಕಾರ್ಯನಿರ್ವಹಿಸುವಂತಾಗಿರುವುದು ನೋವಿನ ಸಂಗತಿ ಎಂದರು.
ಕಾರ್ಯಾಂಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ನೌಕರರು ಕರ್ತವ್ಯ ನಿರ್ವಹಿಸುವಾಗ ತೊಂದರೆ ಉಂಟಾದಾಗ ಅಂತಹ ವ್ಯಕ್ತಿಗಳ ಮೇಲೆ ಜಾಮೀನ ರಹಿತ ಪ್ರಕರಣ ದಾಖಲಿಸಲು ಹಾಗೂ ಅವರ ರಕ್ಷಣೆಗೆ ಪ್ರಬಲವಾದ ಕಾನೂನು ರಕ್ಷಣೆ ನೀಡುತ್ತದೆ. ಕಕ್ಷಿದಾರರಿಗೆ ನ್ಯಾಯ ಒದಗಿಸಲು ವಕೀಲರು ಕಕ್ಷಿದಾರನ ಪ್ರತಿನಿಽಸಿ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುವಾಗ ಸೋಲಿನ ಭೀತಿಯಿಂದ ಅಥವಾ ದಾವೆಯ ದಾರಿ ತಪ್ಪಿಸಲು ವಕೀಲರ ಮೇಲೆ ದಬ್ಬಾಳಿಕೆ-ದೌರ್ಜನ್ಯಗಳು ನಿರಂತರವಾಗಿ ನಡೆದಿರುವುದು ಖಂಡನೀಯ. ವಕೀಲರು ಹಲವು ವರ್ಷಗಳಿಂದ ವಕೀಲರ ಹಿತರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸುತ್ತಾ ಬಂದಿದ್ದರೂ ಯಾವುದೇ ಸರ್ಕಾರ ಸ್ಪಂದಿಸುತ್ತಿಲ್ಲ. ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿಯಾದರೂ ಈಗಿರುವ ಸರ್ಕಾರ ಈ ಕಾಯ್ದೆಯನ್ನು ಜಾರಿಗೆ ತರಬೇಕೆಂದು ಆಗ್ರಹಿಸಿದ ಅವರು, ಕಾಯ್ದೆ ಜಾರಿಗೆ ಜಾರಿಗೆ ಬಾರದೇ ಹೋದರೆ ಮುಂದಿನ ದಿನಗಳಲ್ಲಿ ವಕೀಲರು ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಆರ್.ವಿ.ಗುತ್ತರಗಿಮಠ, ಆರ್.ಬಿ.ಗಣಕುಮಾರ, ಐ.ಎ.ಪರಮಗೊಂಡ, ಆರ್.ಬಿ.ಕಲ್ಲೂರ, ಆರ್.ಡಿ.ಜಾಧವ, ವಿ.ಬಿ.ಮರ್ತುರ, ಎಸ್.ಎಲ್.ಲಮಾಣಿ, ತಾನಾಜಿ ಗಾಯಕವಾಡ, ಅನಿಲ ಚಿಕ್ಕೊಂಡ, ಪಿ.ಎಂ.ಕಂದಗಲ್, ಸಿ.ಎಂ.ಹಡಪದ, ಬಸವರಾಜ ಮಿಣಜಗಿ, ಎಸ್.ಜಿ.ಹಗ್ಗದ, ಸುರೇಶ ಕೋಲಕಾರ, ಗೋವಿಂದ ಪವಾರ, ಸುನೀಲ ರಾಠೋಡ, ಭೀಮು ವಾಲೀಕಾರ, ಸಮೀರ ಕೊರಬು, ಪ್ರಕಾಶ ಸಲಗರ, ಈರಣ್ಣ ವಡವಡಗಿ, ಜಿ.ಎನ್.ಬೇವಿನಮರದ, ಕೆ.ಎಸ್.ಚವ್ಹಾಣ, ಎಸ್.ಎಂ.ಮಠಪತಿ ಇತರರು ಇದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

2 × four =