ಡಾ|| ಕುಲಕರ್ಣಿ ದಂಪತಿಗಳಗೆ “ರಾಚೋಟೇಶ್ವರ ಸಿರಿ” ಪ್ರಶಸ್ತಿ ಪ್ರಧಾನ!
ಯುವ ಭಾರತ ಸುದ್ದಿ ಇಂಡಿ: 5೦ ವರ್ಷಗಳಿಂದ ವೈದ್ಯನಾಗಿ ಸೇವೆ ಸಲ್ಲಿಸುತ್ತಿರುವ ನನ್ನ ವೈದ್ಯ ವೃತ್ತಿಯನ್ನು ಗೌರವಿಸಿ ನನ್ನ ಸ್ವ ಗ್ರಾಮದ ಶ್ರೀ ರಾಚೋಟೇಶ್ವರ ಶ್ರೀಗಳು ದಂಪತಿಗಳೀರ್ವರಿಗೂ “ಶ್ರೀ ರಾಚೋಟೇಶ್ವರ ಸಿರಿ” ಪ್ರಶಸ್ತಿ ನೀಡಿದ್ದು ಎಲ್ಲಿಲ್ಲದ ಆನಂದ ತಂದಿದೆ ಎಂದು ವಿಜಯಪುರದ ಖ್ಯಾತ ವೈದ್ಯ ಡಾ|| ವಿಲಾಸ ಕುಲಕರ್ಣಿ ಹೇಳಿದರು.
ಅವರು ಗುರುವಾರ ತಾಲೂಕಿನ ತಡವಲಗಾ ಗ್ರಾಮದಲ್ಲಿ ಶ್ರೀಗುರು ರಾಚೋಟೇಶ್ವರ ಶಿವಾಚಾರ್ಯರ ಪುಣ್ಯಸ್ಮರಣೋತ್ಸವ ನಿಮಿತ್ಯ ಹಮ್ಮಿಕೊಂಡ ಸರಳ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆಯಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ನಾನು ಇದೇ ಗ್ರಾಮದವನಾಗಿದ್ದರೂ ಸ್ವ ಗ್ರಾಮಕ್ಕೆ ಹೆಚ್ಚಿಗೆ ಬರಲು ಸಾಧ್ಯವಾಗಿಲ್ಲ. ಜಾತ್ರೆ, ಸಮಾರಂಭಗಳಲ್ಲಿ ಭಾಗವಹಿಸಲು ನನಗೆ ಸಮಯಾವಕಾಶ ಸಿಕ್ಕಿಲ್ಲ. ಶ್ರೀಗಳು ನನ್ನನ್ನು ಗುರುತಿಸಿ ಕರೆಸಿ ಪ್ರಶಸ್ತಿ ನೀಡಿದ್ದಕ್ಕೆ ಅಭಿನಂದನೆಗಳನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಈರಣ್ಣ ಆಶಾಪೂರ, ಉತ್ತಮ ರೈತ ಪ್ರಶಸ್ತಿ ಪುರಸ್ಕೃತ ಈರಣ್ಣ ಕುದರಿ ಅವರಿಗೂ ರಾಚೋಟೇಶ್ವರ ಸಿರಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಬಂಥನಾಳದ ವೃಷಭಲಿಂಗ ಮಹಾಸ್ವಾಮೀಜಿ, ಗೋಳಸಾರದ ಅಭಿನವ ಪುಂಡಲಿAಗ ಮಹಾರಾಜರು, ತಡವಲಗಾ ಹಿರೇಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ತಡವಲಗಾದ ಶಿವಾನಂದಯ್ಯ ಶಾಸ್ತಿçಗಳು, ಮಮದಾಪೂರದ ಮುರುಘೇಂದ್ರ ಮಹಾಸ್ವಾಮೀಜಿ, ಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯರು, ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ಅಥರ್ಗಾದ ಮುರುಘೇಂದ್ರ ಮಹಾಸ್ವಾಮೀಜಿ, ಕಾಸುಗೌಡ ಬಿರಾದಾರ, ವಿಠ್ಠಲಗೌಡ ಪಾಟೀಲ, ಸಚಿನ್ ಇಂಡಿ ಸೇರಿದಂತೆ ಮತ್ತಿತರರು ಇದ್ದರು.