Breaking News

ಆಯುರ್ವೇದದ ಗುಟ್ಟು ಅರಿತು ಆರೋಗ್ಯವಂತರಾಗಿ-ಡಾ.ಬಸವರಾಜ ಚವ್ಹಾಣ!

Spread the love

ಆಯುರ್ವೇದದ ಗುಟ್ಟು ಅರಿತು ಆರೋಗ್ಯವಂತರಾಗಿ-ಡಾ.ಬಸವರಾಜ ಚವ್ಹಾಣ!

ಬಸವನಬಾಗೇವಾಡಿ:  ಆರೋಗ್ಯದ ಗುಟ್ಟು ಆಯುರ್ವೇದದಲ್ಲಿ ಅಡಗಿರುವದನ್ನು ಪ್ರತಿಯೊಬ್ಬರೂ ಅರಿತುಕೊಂಡರೆ ಪ್ರತಿಯೊಬ್ಬರೂ ಆರೋಗ್ಯಯುತ ಜೀವನ ಮಾಡುವ ಮೂಲಕ ಬದಕನ್ನು ಉಜ್ವಲಗೊಳಿಸಬಹುದು ಎಂದು ಸ್ಥಳೀಯ ಜಗದಂಬಾ ಆಯುರ್ವೇದ ಆಸ್ಪತ್ರೆಯ ಡಾ.ಬಸವರಾಜ ಚವ್ಹಾಣ ಹೇಳಿದರು.

ಬಸವನಬಾಗೇವಾಡಿಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ.ಬಸವರಾಜ ಚವ್ಹಾಣ ಮಾತನಾಡಿದರು.

ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಎನ್‌ಎಸ್‌ಎಸ್ ಹಾಗೂ ವೈಆರ್‌ಸಿ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ನಿತ್ಯ ಜೀವನದಲ್ಲಿ ಆಯುರ್ವೇದದ ಕುರಿತು ಮಾತನಾಡಿದ ಅವರು, ಇಂದಿನ ಜಾಗತೀಕರಣದ ಪ್ರಭಾವದಿಂದಾಗಿ ದೇಶದ ಪ್ರಾಚೀನ ವಿದ್ಯೆ ಆಯುರ್ವೇದ ಮಹತ್ವವನ್ನು ಮರೆತು ಜನರು ಅಲೋಪತಿಗೆ ಮಾರು ಹೋಗಿದ್ದಾರೆ. ಮಾನವ ಬಹುಕಾಲದವರೆಗೆ ಆರೋಗ್ಯಯುತವಾಗಿ ಬಾಳುವಂತಾಗಬೇಕಾದರೆ ಆಯುರ್ವೇದದ ಕಡೆಗೆ ಹೊರಳಬೇಕು. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ದೊರಕುವ ಸಾಕಷ್ಟು ಸಸ್ಯಗಳು ಔಷಽಯ ಗುಣಗಳನ್ನು ಹೊಂದಿವೆ. ನಮ್ಮ ಅಡುಗೆಮನೆಯೇ ಒಂದು ಔಷಧಾಲಯವಾಗಿದೆ. ಇದರ ಮಹತ್ವವನ್ನು ಅರಿತುಕೊಂಡು ಸಾಮಾನ್ಯ ರೋಗವನ್ನು ಗುಣಪಡಿಸಿಕೊಳ್ಳಬೇಕು. ನೆಗಡಿಯಂತಹ ಸಾಮಾನ್ಯ ರೋಗಕ್ಕೂ ಆಸ್ಪತ್ರೆಯ ಕಡೆಗೆ ಮುಖ ಮಾಡುತ್ತಿರುವದು ದುರ್ಬಲ ಆರೋಗ್ಯದ ಸೂಚಕವಾಗಿದೆ ಎಂದರು.
ಡಾ.ಗಾಯತ್ರಿ ರಾಠೋಡ ಮಾತನಾಡಿ, ಇಂದು ಪ್ರತಿಯೊಬ್ಬರೂ ಆರೋಗ್ಯದ ಜೊತೆಗೆ ಗಮನ ಸೆಳೆಯುವ ಸೌಂದರ್ಯಕ್ಕೂ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ಇದಕ್ಕಾಗೆ ಅವರು ಆಯ್ಕೆ ಮಾಡಿಕೊಂಡಿರುವ ಮಾರ್ಗ ತಪ್ಪಾಗಿದೆ. ಮಾರುಕಟ್ಟೆಯಲ್ಲಿ ದೊರೆಯುವ ರಾಸಾಯನಿಕ ಮಿಶ್ರಿತ ಉತ್ಪನ್ನಗಳನ್ನು ಬಳಕೆ ಮಾಡಿ ತಮ್ಮ ಕೈಯಾರೆ ಮುಖದ ಸೌಂದರ್ಯವನ್ನು ಹಾಳು ಮಾಡಿಕೊಳ್ಳುತ್ತಿರುವುದು ಕಂಡುಬರುತ್ತಿದೆ. ಮುಖದ ಸೌಂದರ್ಯಕ್ಕಾಗಿ ಆಯುರ್ವೇದದ ಉತ್ಪನ್ನಗಳನ್ನು ಬಳಕೆ ಮಾಡಿದರೆ ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ. ಆಯುರ್ವೇದದ ಮಹತ್ವವನ್ನು ನಾವೆಲ್ಲರೂ ಅರಿತುಕೊಳ್ಳಬೇಕಾದೆ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಮಾತನಾಡಿ, ಆರೋಗ್ಯವಂತ ಶರೀರದಲ್ಲಿ ಆರೋಗ್ಯವಂತ ಮನಸ್ಸಿರುತ್ತದೆ. ಆರೋಗ್ಯ ಇದ್ದವು ಎಲ್ಲರಿಗಿಂತಲೂ ಶ್ರೀಮಂತ. ನಾವು ಜೀವನದಲ್ಲಿ ಏನಾದರೂ ಕಳೆದುಕೊಂಡರೂ ಎಂದಿಗೂ ಆರೋಗ್ಯವನ್ನು ಕಳೆದುಕೊಳ್ಳಬಾರದು. ಈ ನಿಟ್ಟಿನಲ್ಲಿ ಯುವಜನಾಂಗ ಗಮನ ಹರಿಸಬೇಕಿದೆ ಎಂದರು.
ವೇದಿಕೆಯಲ್ಲಿ ಐಕ್ಯೂಎಸಿ,ರಾಜ್ಯಶಾಸ ವಿಭಾಗದ ಮುಖ್ಯಸ್ಥ ಪ್ರೊ.ದಿಲೀಪಕುಮಾರ, ವಿದ್ಯಾರ್ಥಿ ಒಕ್ಕೂಟ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಎಸ್.ಡಿ.ಲಗಳಿ, ಎನ್‌ಎಸ್‌ಎಸ್, ಸಮಾಜಶಾಸ ವಿಭಾಗದ ಮುಖ್ಯಸ್ಥ ಡಾ.ವೈ.ಬಿ.ನಾಯಕ ಇದ್ದರು. ಪ್ರೊ.ಎಂ.ಕೆ.ಯಾದವ ನಿರೂಪಿಸಿ,ವಂದಿಸಿದರು.


Spread the love

About Yuva Bharatha

Check Also

ಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಕೆ.!

Spread the loveಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ …

Leave a Reply

Your email address will not be published. Required fields are marked *

16 − 15 =