ಸಮ್ಮೇದ ಶಿಖರ್ಜಿ : ಜೈನ ಸಮುದಾಯದಿಂದ ಬೃಹತ್ ಪ್ರತಿಭಟನೆ
ಯುವ ಭಾರತ ಸುದ್ದಿ ಚನ್ನಮ್ಮನ ಕಿತ್ತೂರು: ಸೋಮವಾರ ಕಿತ್ತೂರಿನಲ್ಲಿ ಸಮ್ಮೇದ ಶಿಖರ್ಜಿ ಪ್ರವಾಸಿ ತಾಣಕ್ಕೆ ವಿರೋಧಿಸಿ ಜೈನ ಸಮುದಾಯದ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಜರುಗಿತು.
ಸಮ್ಮೇದ ಶಿಖರ್ಜಿ ಕ್ಷೇತ್ರವನ್ನು ವನ್ಯಜೀವಿ ಅಭಯಾರಣ್ಯ, ಪ್ರವಾಸೋದ್ಯಮ ಮತ್ತು ಧಾರ್ಮಿಕೇತರ ಚಟುವಟಿಕೆಗಳಿಗೆ ಅನುಮತಿ ನೀಡಿ ದಿನಾಂಕ ೦೨-೦೮-೨೦೨೩ ರಂದು ಅಧಿಸೂಚನೆ ಹೊರಡಿಸಿ ಸಮ್ಮೇದ ಶಿಖರ್ಜಿ ಕ್ಷೇತ್ರವನ್ನು ವನ್ಯಜೀವಿ ಅಭಯಾರಣ್ಯ, ಪ್ರವಾಸೋದ್ಯಮ ಮತ್ತು ಧಾರ್ಮಿಕೇತರ ಚಟುವಟಿಕೆಗಳಿಗೆ ಅನುಮತಿ ನೀಡಿರುವುದು ಖಂಡನೀಯ. “ಜೀವಿಸು ಮತ್ತು ಜೀವಿಸಲು ಬಿಡು” ಎಂಬ ದೈಯ ವಾಕ್ಯದೊಂದಿಗೆ ಅನಾದಿಕಾಲದಿಂದ ನಡೆದುಕೊಂಡ ಬಂದ ಜೈನ ಧರ್ಮದ ಮೇಲೆ ಇದೀಗ ಅನ್ಯಾಯವಾಗುತ್ತಿದೆ.
ಈ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಕಳೆದ ಹಲವಾರು ವರ್ಷಗಳಿಂದ ವಿವಿಧ ಜೈನ ಸಂಘಟನೆಗಳು ನಿರಂತರ ಪ್ರಯತ್ನ ಮಾಡುತ್ತಿದ್ದರು ಸರ್ಕಾರಗಳ ಸ್ಪಂದಿಸುತ್ತಿಲ್ಲ. ಸಮ್ಮೇದ ಶಿಖರ್ಜಿ ಜೈನ ಧರ್ಮಿಯರ ಪವಿತ್ರ ಕ್ಷೇತ್ರ ಜೈನರ ಪೂಜಿಸುವ ೨೪ ತೀರ್ಥಂಕರರ ಪೈಕಿ ೨೦ ತೀರ್ಥಂಕರರು ಮೋಕ್ಷಕ್ಕೆ ಹೋದ ಕ್ಷೇತ್ರವಾಗಿದೆ. ಈ ಕ್ಷೇತ್ರದಿಂದ ಜೈನರ ಪರಿಚಯವಾಗಿದೆ. ಒಂದು ವೇಳೆ ಸರಕಾರ ಈ ಪವಿತ್ರ ಕ್ಷೇತ್ರವನ್ನು ಅಭಯಾರಣ್ಯ ಮತ್ತು ಪ್ರವಾಸೋದ್ಯಮ ಕ್ಷೇತ್ರ ಎಂದು ಘೋಷಿಸಿದರೆ ಇಲ್ಲಿ ಅವ್ಯಾಹತ ಘಟನೆಗಳು ನಡೆಯಲಿವೆ. ಅಹಿಂಸಾ ಪರೋಮ ಧರ್ಮ ಎಂದು ಸಾರಿದ ಜೈನರ ಪವಿತ್ರ ಕ್ಷೇತ್ರದಲ್ಲಿ ಮದ್ಯ ಮಾಂಸ ಸೇವನೆ, ಅಸ್ವಚ್ಛತೆ, ಅಪವಿತ್ರ ಮತ್ತು ಅನೈತಿಕ ಚಟುವಟಿಕೆಗಳು ಹೆಚ್ಚಾಗಿ ಈ ಕ್ಷೇತ್ರದ ಪಾವಿತ್ರ‍್ಯತೆ ಕಳೆದುಕೊಳ್ಳಲಿದೆ.
ಸಮ್ಮೇದ ಶಿಖರ್ಜಿ ಪರ್ವತದ ಎತ್ತರ ೪,೫೭೯ ಅಡಿಗಳು, ಇದರ ವಿಸ್ತೀರ್ಣ ೨೫ ಚದರ ಮೈಲುಗಳು ಮತ್ತು ಇದು ೨೭ ಕಿಲೋಮೀಟರ್ ಪರ್ವತ ಶ್ರೇಣಿಯನ್ನು ಹೊಂದಿದೆ. ಈ ಸನಾತನ ನಿರ್ವಾಣ ಕ್ಷೇತ್ರಕ್ಕಿಂತ ಪವಿತ್ರವಾದ ಮತ್ತು ಅಲೌಕಿಕವಾದ ತೀರ್ಥಕ್ಷೇತ್ರ, ಅತಿಶಯಕ್ಷೇತ್ರ, ಸಿದ್ಧ ಕ್ಷೇತ್ರ ಜಗತ್ತಿನ ಯಾವುದೇ ಭೂಮಿಯ ಮೇಲೆ ಇಲ್ಲ. ಈ ತೀರ್ಥರಾಜನ ಪ್ರತಿಯೊಂದು ಕಣದಲ್ಲೂ ಅನಂತ ಪರಿಶುದ್ಧ ಆತ್ಮಗಳ ಪರಿಶುದ್ಧತೆಯು ವ್ಯಾಪಿಸಿರುತ್ತದೆ, ಆದ್ದರಿಂದ ಅದರ ಪ್ರತಿಯೊಂದು ಕಣವೂ ಪೂಜಿತವಾಗಿದೆ. ಸರ್ಕಾರ ಕೈಗೊಂಡಿರುವ ನಿರ್ಧಾರ ಜೈನ ಸಮಾಜಕ್ಕೆ ಮಾರಕವಾಗಲಿದ್ದು, ಸಂಪೂರ್ಣ ಜೈನ ಧರ್ಮ ಮತ್ತು ಸಮಾಜದ ಅವನತಿಗೆ ಕಾರಣವಾಗಲಿದೆ. ಹಾಗಾಗಿ ಈ ಅಧಿಸೂಚನೆಯನ್ನು ಹಿಂದಕ್ಕೆ ಪಡೆದುಕೊಂಡು ಜೈನ ಸಮಾಜದ ಧರ್ಮಾಚರಣೆಗೆ ಅವಕಾಶ ಮಾಡಿಕೊಡಬೇಕು ಮತ್ತು ತೀರ್ಥಕ್ಷೇತ್ರ ಸಮ್ಮೇದ ಶಿಖರ್ಜಿಯ ಪಾವಿತ್ರ‍್ಯತೆಯನ್ನು ಉಳಿಸಬೇಕು ಎಂದು ಮನವಿ ಮಾಡಿದರು
ಮಾಜಿ ಸಚಿವ ಡಿ. ಬಿ. ಇನಾಮದಾರ ಅವರು ಜೈನ ಸಮುದಾಯ ಹಮ್ಮಿಕೊಂಡ ಪ್ರತಿಭಟನೆಗೆ ಪೋನ್ ಕರೆ ಮಾಡುವ ಮೂಲಕ ಬೆಂಬಲ ಸೂಚಿಸಿದರು
ಈ ವೇಳೆ ಶಿಥಲ ಶಿರಗಾಪುರ, ಮಂಜುನಾಥ ದೊಡ್ಡಣ್ಣವರ, ದೇವೇಂದ್ರ ಪಾಟೀಲ, ಡಿ. ಆರ್. ಪಾಟೀಲ, ಸುನೀಲ ಭಜಣ್ಣವರ, ತವನಪ್ಪ ಜಾಯ್ಕನವರ, ತವನಪ್ಪ ಹಿತ್ತಲಕೇರಿ, ವಸಂತ ಪಾಟೀಲ, ಮಂಜುನಾಥ ಬಾಗೇವಾಡಿ, ವರ್ಧಮಾನ ಭಜಣ್ಣವರ, ಬಾಹುಬಲಿ ಕರಡಿ, ಮಹಾವೀರ ಶೇಬಣ್ಣವರ, ಉದಯ ಇಂಗಳೆ, ಲಕ್ಷ್ಮಣ ಪಾಟೀಲ, ರವೀಂದ್ರ ಇಂಗಳೆ, ಕಿತ್ತೂರು ಜೈನ ಯುವ ಸಂಘಟನೆಯ ಪದಾಧಿಕಾರಿಗಳು ಸೇರಿದಂತೆ ಇನ್ನೂ ಅನೇಕರು ಇದ್ದರು