Breaking News

ಬಾಕಿ ಉಳಿದಿರುವ 268 ಜಾನುವಾರುಗಳ ರೈತರಿಗೆ ಶೀಘ್ರವೇ ಪರಿಹಾರ ಮೊತ್ತ ವಿತರಣೆಗೆ ಅಗತ್ಯ ಕ್ರಮ – ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love

ಬಾಕಿ ಉಳಿದಿರುವ 268 ಜಾನುವಾರುಗಳ ರೈತರಿಗೆ ಶೀಘ್ರವೇ ಪರಿಹಾರ ಮೊತ್ತ ವಿತರಣೆಗೆ ಅಗತ್ಯ ಕ್ರಮ – ಶಾಸಕ ಬಾಲಚಂದ್ರ ಜಾರಕಿಹೊಳಿ

ಚರ್ಮ ಗಂಟು ರೋಗದಿಂದ ಮೃತಪಟ್ಟ 237 ಜಾನುವಾರುಗಳ ರೈತರಿಗೆ 50 ಲಕ್ಷ 5 ಸಾವಿರ ರೂಪಾಯಿ ರೂ ಪರಿಹಾರ ಮೊತ್ತ ವಿತರಣೆ.‌ ಯಾದಾವಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.

ಯುವ ಭಾರತ ಸುದ್ದಿ‌, ಯಾದವಾಡ (ತಾ-ಮೂಡಲಗಿ): ಶಿಥಿಲಗೊಂಡಿದ್ದ ಯಾದವಾಡ ಪ್ರಾಥಮಿಕ ಆರೋಗ್ಯ ಕೇಂದ್ರ ದ ನೂತನ ಕಟ್ಟಡವು ಮುಗಿಯುವ ಹಂತದಲ್ಲಿದ್ದು, ಆದಷ್ಟೂ ಬೇಗನೇ ಸಾರ್ವಜನಿಕ ಸೇವೆಗೆ ಅರ್ಪಣೆ ಮಾಡಲಾಗುವುದು ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಇತ್ತೀಚಿಗೆ ಯಾದವಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವನ್ನು ಪರಿಶೀಲನೆ ಮಾಡಿದ ಅವರು, ಸಾರ್ವಜನಿಕರ ಹಿತದೃಷ್ಟಿಯಿಂದ ಗ್ರಾಮದಲ್ಲಿ ಹೊಸ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಯಾದವಾಡ ಗ್ರಾಮದಲ್ಲಿ ನಿರ್ಮಾಣ ಮಾಡುತ್ತಿರುವ ಈ ಹೊಸ ಆಸ್ಪತ್ರೆಯು 70 ಲಕ್ಷ ರೂಪಾಯಿ ವೆಚ್ಚವನ್ನು ಹೊಂದಿದೆ. ಇದಕ್ಕೆ ಡಾಲ್ಮೀಯಾ ಸಿಮೆಂಟ್ ಕಾರ್ಖಾನೆ ಸಹಯೋಗ ನೀಡಿದೆ. ನಾನು ಕೂಡ ಈ ಆಸ್ಪತ್ರೆಗೆ ಸ್ವಂತ ಹಣವನ್ನು ನೀಡುತ್ತಿರುವುದಾಗಿ ಅವರು ಹೇಳಿದರು.

ಜಾನುವಾರುಗಳಿಗೆ ಚರ್ಮ ಗಂಟು ರೋಗ ಅಂಟಿಕೊಂಡಿದ್ದರೂ ಸಮರ್ಪಕ ಸೇವೆ ನೀಡುತ್ತಿಲ್ಲ ಎಂದು ಪಶುವೈದ್ಯರ ವಿರುದ್ಧ ಸಾರ್ವಜನಿಕರು ಇದೇ ಸಂದರ್ಭದಲ್ಲಿ ಶಾಸಕರ ಮುಂದೆ ತಮ್ಮ ಅಳಲು ತೋಡಿಕೊಂಡರು.

ತಕ್ಷಣವೇ ಕಾರ್ಯಪ್ರವೃತ್ತರಾದ ಶಾಸಕರು, ಮೂಡಲಗಿ ಪಶು ಮುಖ್ಯ ವೈದ್ಯಾಧಿಕಾರಿಗಳು (ಆಡಳಿತ) ನಿರ್ದೇಶಕ ಡಾ. ಮೋಹನ ಕಮತ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ
ಯಾದವಾಡದಲ್ಲಿ ಪಶು ಚಿಕಿತ್ಸಾಲಯದಲ್ಲಿ ವೈದ್ಯರು ಸರಿಯಾಗಿ ಕೆಲಸ ಮಾಡಬೇಕು. ಜಾನುವಾರುಗಳ ಬಗ್ಗೆ ಕಾಳಜಿ ಕ್ರಮಗಳನ್ನು ಕೈಕೊಳ್ಳಬೇಕು ಎಂದು ಸೂಚನೆ ನೀಡಿದರು.

ಯಾದವಾಡ ಪಶು ಚಿಕಿತ್ಸಾಲಯದಲ್ಲಿ ಕರ್ತವ್ಯ ನಿರ್ವಹಿಸಲಿಕ್ಕೆ ಈಗಾಗಲೇ ಕೆಲವರನ್ನು ಆಯಾ ಸ್ಥಳಗಳಿಗೆ ನಿಯೋಜನೆ ಮಾಡಲಾಗಿದೆ. ಕುಲಗೋಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರನ್ನು ನಿಯೋಜನೆಗೊಳಿಸಲಾಗಿದೆ. ಜೊತೆಗೆ ಪಶು ವೈದ್ಯಕೀಯ ಪರಿವೀಕ್ಷಕರು ಮತ್ತು ಕೃತಕ ಗರ್ಭಧಾರಣೆ ಕಾರ್ಯಕರ್ತರನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಜಾನುವಾರುಗಳ ಚರ್ಮ ಗಂಟು ರೋಗದಿಂದ ಅರಭಾವಿ ಕ್ಷೇತ್ರದಲ್ಲಿ ಒಟ್ಟು 505 ಜಾನುವಾರುಗಳು ಮೃತಪಟ್ಟಿವೆ. ಇದರಲ್ಲಿ ಈಗಾಗಲೇ 237 ಮೃತಪಟ್ಟ ಜಾನುವಾರುಗಳ ರೈತರಿಗೆ 50 ಲಕ್ಷ 5 ಸಾವಿರ ರೂ.ಗಳ ಪರಿಹಾರ ಮೊತ್ತವನ್ನು ವಿತರಿಸಲಾಗಿದೆ. ಇನ್ನೂ 268 ಮೃತಪಟ್ಟ ಜಾನುವಾರುಗಳ ರೈತರಿಗೆ ಪರಿಹಾರವನ್ನು ನೀಡಬೇಕಾಗಿದೆ. ಮೃತಪಟ್ಟ ಎತ್ತು- ಹೋರಿಗಳಿಗೆ 30 ಸಾವಿರ, ಆಕಳುಗಳಿಗೆ 20 ಸಾವಿರ ಮತ್ತು ಕರುಗಳಿಗೆ ತಲಾ 5 ಸಾವಿರ ಪರಿಹಾರವನ್ನು ವಿತರಿಸಲಾಗುತ್ತಿದೆ. ಬಾಕಿ ಉಳಿದಿರುವ 268 ಜಾನುವಾರುಗಳಿಗೆ ಶೀಘ್ರದಲ್ಲಿ ಸರಕಾರದಿಂದ ಪರಹಾರ ಮೊತ್ತವನ್ನು ವಿತರಿಸಲಿಕ್ಕೆ ಕ್ರಮ ಕೈಗೊಳ್ಳಲಾಗುವುದೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಾಹಿತಿ ನೀಡಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೊನ್ನಮ್ಮದೇವಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ನಂತರ ಸಾರ್ವಜನಿಕರ ಕುಂದು-ಕೊರತೆಗಳನ್ನು ಆಲಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ರಂಗಪ್ಪ ಇಟ್ಟನ್ನವರ, ಪರ್ವತಗೌಡ ಪಾಟೀಲ, ಶಂಕರ ಬೆಳಗಲಿ, ಶಿವಪ್ಪಗೌಡ ನ್ಯಾಮಗೌಡ, ಬಸು ಭೂತಾಳಿ, ರಾಜುಗೌಡ ಪಾಟೀಲ, ಯಲ್ಲಪ್ಪಗೌಡ ನ್ಯಾಮಗೌಡ, ಬೀರಪ್ಪ ಮುಗಳಖೋಡ, ಮಲ್ಲಪ್ಪ ಚೆಕ್ಕೆನ್ನವರ, ಸುರೇಶ ಸಾವಳಗಿ, ಬಸು ಕೇರಿ, ಎಂ.ಎಸ್. ದಂತಾಳಿ, ಅಮೀನಸಾಬ ಎಳ್ಳೂರ, ಬಸು ಹಿಡಕಲ್, ಡಾ. ಶಿವನಗೌಡ ಪಾಟೀಲ, ಲಕ್ಷ್ಮೀ ಮಾಳೇದ, ಲಕ್ಷಣ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಹಿರೇಬೂದನೂರ : ಭಕ್ತರ ಸನ್ಮಾನ

Spread the loveಹಿರೇಬೂದನೂರ : ಭಕ್ತರ ಸನ್ಮಾನ ಮುರಗೋಡ : ಹಿರೇಬೂದನೂರ ಗ್ರಾಮದ ಶ್ರೀ ಸದ್ಗುರು ಸಂತ ಬಾಳುಮಾಮಾ ದೇವಸ್ಥಾನದ …

Leave a Reply

Your email address will not be published. Required fields are marked *

four × two =