ಬೀದರ ಉತ್ಸವದಲ್ಲಿ ಕರಬಲ್ಲ ಕುಣಿತ
ಯುವ ಭಾರತ ಸುದ್ದಿ ಗೋಕಾಕ :
ಗೋಕಾಕ ತಾಲ್ಲೂಕಿನ ಫಾಲ್ಸ್ ಶ್ರೀ ಲಷ್ಮಿದೇವಿ ಕರಬಲ್ಲ ಮೇಳವ ಬೀದರ್ ಉತ್ಸವದ ಮೆರವಣಿಗೆಯಲ್ಲಿ ಪ್ರದರ್ಶನ ನೀಡಿ ಅಪಾರ ಜನ ಮೆಚ್ಚುಗೆ ಪಡೆಯಿತು.
ಈ ತಂಡಕ್ಕೆ ಗೋಕಾಕ್ ಶ್ರೀ ವಾಲ್ಮೀಕಿ ಜಾನಪದ ಸಂಸ್ಥೆಯ ಅಧ್ಯಕ್ಷರು, ಕರ್ನಾಟಕ ಭೂಷಣ, ಜಾನಪದ ರತ್ನ, ಕರ್ನಾಟಕ ಕಲಾ ಕೇಶರಿ ರಾಜ್ಯ ಪ್ರಶಸ್ತಿ ಪುರಸ್ಕೃತ, ವಕೀಲ ಉದ್ದಣ್ಣಾ ಗೋಡೇರ (ಗೌಡರ) ಉತ್ತಮ ನಿರ್ದೇಶನ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಮಾಯಪ್ಪಾ ನಾಗಣ್ಣವರ ಹಾಗೂ ತಂಡದವರು ಉಪಸ್ಥಿತರಿದ್ದರು.
ಕೇಂದ್ರ ಸಚಿವರು, ರಾಜ್ಯ ಸಚಿವರು, ಜಿಲ್ಲಾ ಪಂಚಾಯತ ಅಧಿಕಾರಿಗಳು, ಜಿಲ್ಲಾಧಿಕಾರಿಗಳು,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದರಾಮ ಶಿಂದೆ, ಮುಕ್ತಾ ಟೀಚರ್, ಮಾಳಗೆ ಸರ್, ಡಾ.ಬಸವರಾಜ್ ಬಲ್ಲುರ, ಡಾ.ಸಂಜೀವಕುಮಾರ ಅತಿವಾಳೆ ಉಪಸ್ಥಿತರಿದ್ದರು. ಉತ್ಸವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 45 ತಂಡಗಳು ಪ್ರದರ್ಶನ ನೀಡಿದವು. ಕರಬಲ್ಲ ತಂಡಕ್ಕೆ ಪ್ರಶಸ್ತಿ ಪತ್ರಗಳನ್ನು ನೀಡಿ ಅಭಿನಂದಿಸಲಾಯಿತು.