Breaking News

ಕಲಿಕಾ ಹಬ್ಬವೆಂಬ ನಿತ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ.!

Spread the love

ಕಲಿಕಾ ಹಬ್ಬವೆಂಬ ನಿತ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ.!


ಗೋಕಾಕ: ಆಟದ ಮೈದಾನದಲ್ಲಿಯ ಮಕ್ಕಳ ಸಂಭ್ರಮ ತರಗತಿಯೊಳಗೂ ಕಾಣಲು ಸರಕಾರ ಕಲಿಕಾ ಹಬ್ಬವೆಂಬ ನಿತ್ಯೋತ್ಸವ ಕಾರ್ಯಕ್ರಮವನ್ನು ಜಾರಿಗೆ ತಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಬಿ ಬಳಗಾರ ಹೇಳಿದರು.
ಅವರು, ಗುರುವಾರದಂದು ತಾಲೂಕಿನ ನಂದಗಾವ ಗ್ರಾಮದ ಸರಕಾರಿ ಹೆಣ್ಣು ಮಕ್ಕಳ ಶಾಲೆಯ ಆವರಣದಲ್ಲಿ ಕ್ಲಸ್ಟರ್ ಮಟ್ಟದ ಮಕ್ಕಳ “ಕಲಿಕಾ ಹಬ್ಬ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಮಕ್ಕಳ ಕಲಿಕೆಯಲ್ಲಿ ಆಸಕ್ತಿ ಮೂಢಿಸಲು ಈ ಕಲಿಕಾ ಹಬ್ಬ ಸಹಕಾರಿಯಾಗಲಿದೆ. ಮಕ್ಕಳು ಚಟುವಟಿಕೆ ಮಾಡುತ್ತ ಕಲಿಯಲು ಪ್ರೇರೆಪಿಸಲು ಇಂತಹ ಯೋಜನೆಗಳ ಅವಶ್ಯಕತೆ ಇದೆ ಎಂದರು.
ಮಕ್ಕಳು ತಾವು ಕಲಿತು ಇನ್ನುಳಿದ ತಮ್ಮ ತರಗತಿಯ ಮಕ್ಕಳೊಂದಿಗೆ ಈ ಹಬ್ಬದ ಕುರಿತು ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಮಕ್ಕಳು ತಮ್ಮ ಸ್ನೇಹಿತರೊಂದಿಗೆ ಸೇರಿಕೊಂಡು ಒಡನಾಟದ ಮೂಲಕ ಪ್ರಶ್ನೆಗಳು, ಪ್ರಯೋಗಗಳು, ವಿಕ್ಷಣೆಗಳು, ಪರಸ್ಪರ ಚರ್ಚೆ, ಮುಕ್ತ ಸಂವಾದ, ಹಾಡು ಹಾಸ್ಯ, ನೃತ್ಯ ನಾಟಕ ಹೀಗೆ ಅನುಭಾತ್ಮಕವಾಗಿ ಕಲಿಯಲಿದ್ದಾರೆ ಎಂದು ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಕ್ಲಸ್ಟರ್ ಮಟ್ಟದ “ಕಲಿಕಾ ಹಬ್ಬ” ಕಾರ್ಯಕ್ರಮದ ಉದ್ಘಾಟನೆಯನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ಮಕ್ಕಳೊಂದಿಗೆ ಸಸಿಗೆ ನೀರುಣಿಸುವ ಮೂಲಕ ನೆರವೇರಿಸಿದರು.
ವೇದಿಕೆಯ ಮೇಲೆ ಶಾಲೆಯ ಎಸ್‌ಡಿಎಮ್‌ಸಿ ಅಧ್ಯಕ್ಷ ನಿಂಗನಗೌಡ ಭೀಪಾಟೀಲ, ಗ್ರಾಪಂ ಅಧ್ಯಕ್ಷೆ ಅವ್ವಕ್ಕ ನಾಯ್ಕ, ಚಿದಾನಂದ ಶಿರಗಾಂವಿ, ಬಿಸಿಯೂಟ ಯೋಜನಾಧಿಕಾರಿ ಎ ಬಿ ಮಲಬನ್ನವರ, ರಾಜೇಂದ್ರ ತೇರದಾಳ, ಎಸ್ ಎ ಕೇರಿ, ಎಮ್ ವಿ ಬಾಗೆನ್ನವರ, ಎಮ್ ವಾಚಿiÀiï ಬಡಿಗೇರ, ಶ್ರೀಮತಿ ಎಮ್ ಬಿ ಪಾಟೀಲ. ಬಿ ಎಚ್ ಕೋಲಕಾರ ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ!

Spread the loveಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ! ಯುವ ಭಾರತ ಸುದ್ದಿ ಗೋಕಾಕ: ಪ್ರಯಾಗರಾಜನ ಕುಂಭಮೇಳದಲ್ಲಿ ಭಾಗವಹಿಸಿ ಮರಳಿ ಬರುತ್ತಿರುವಾಗ …

Leave a Reply

Your email address will not be published. Required fields are marked *

fourteen − twelve =