ಆಧುನಿಕತೆಯಲ್ಲಿ ಪುರಾಣ ಪ್ರವಚನಗಳು ಹೆಚ್ಚು ಪ್ರಸ್ತುತ; ಮಾಜಿ ಶಾಸಕ ಶಾಬಾದಿ
ಯುವ ಭಾರತ ಸುದ್ದಿ ಸಿಂದಗಿ:
ಇಂದಿನ ಆಧುನಿಕತೆಯ ದಿನಗಳಲ್ಲಿ ಪುರಾಣ ಮತ್ತು ಪ್ರವಚನಗಳು ಹೆಚ್ಚು ಪ್ರಸ್ತುತವಾಗಿವೆ. ಇದರಿಂದ ನಾವು ಧರ್ಮ, ಸಂಸ್ಕೃತಿ, ಮಹಾತ್ಮರ ಮತ್ತು ಶರಣರ ತತ್ವ ಸಿದ್ಧಾಂತಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಮಾಜಿ ಶಾಸಕ ಅಶೋಕ ಶಾಬಾದಿ ಹೇಳಿದರು.
ತಾಲೂಕಿನ ರಾಂಪುರ ಗ್ರಾಮದ ಆರಾಧ್ಯ ದೈವ ಶ್ರೀ ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಶ್ರೀ ಲಚ್ಯಾಣದ ಸಿದ್ದಲಿಂಗ ಮಹಾರಾಜರ ಪುರಾಣ ಮಂಗಲೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರುಜನರು ಪುರಾಣ, ಪ್ರವಚನ ಮತ್ತು ಸತ್ಸಂಗಗಳಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಾಂತಿ, ನೆಮ್ಮದಿ ಪಡೆಯುವುದರ ಜೊತೆಗೆ ದಾರಿದ್ರ್ಯ ಮತ್ತು ಪಾಪಗಳಿಂದ ಮುಕ್ತರಾಗುತ್ತಾರೆ ಎಂದರು.
ಈ ಸಂದರ್ಭದಲ್ಲಿ ರಾಂಪುರ ಶ್ರೀಗಳಾದ ನಿತ್ಯಾನಂದ ಮಹಾರಾಜರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಡಾ.ಶಿವಾನಂದ ಹೊಸಮನಿ, ಇಬ್ರಾಹಿಂ ಸಾಬ್ ಗೋಗಿ, ಶ್ರೀಶೈಲ ಕಬ್ಬಿನ, ಅಮೆಜಾನ್ ಮುಜಾವರ, ತಮ್ಮಣ್ಣ ಈಳಗೇರ, ದಾನೇಶ ಬಮ್ಮಣ್ಣಿ ಸೇರಿದಂತೆ ಗ್ರಾಮದ ಪ್ರಮುಖರು ಗಣ್ಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.