Breaking News

ಕಿತ್ತೂರು ಸೈನಿಕ ಶಾಲೆಗೆ ಚೇರಮನ್ ಆಗಿ ಮಾಜಿ ಸಚಿವ ಡಿ.ಬಿ.ಇನಾಮದಾರ ಆಯ್ಕೆ

Spread the love

ಕಿತ್ತೂರು ಸೈನಿಕ ಶಾಲೆಗೆ ಚೇರಮನ್ ಆಗಿ ಮಾಜಿ ಸಚಿವ ಡಿ.ಬಿ.ಇನಾಮದಾರ ಆಯ್ಕೆ

ಯುವ ಭಾರತ ಸುದ್ದಿ ಚನ್ನಮ್ಮನ ಕಿತ್ತೂರು :       ಇಲ್ಲಿಯ ಕಿತ್ತೂರು ರಾಣಿ ಚನ್ನಮ್ಮಾ ಬಾಲಕಿಯರ ವಸತಿ ಸೈನಿಕ ಶಾಲೆಯಲ್ಲಿ ಬುಧವಾರ ನಡೆದ ಚುನಾಯಿತ ಸದಸ್ಯರ ಸಭೆಯಲ್ಲಿ ಮಾಜಿ ಸಚಿವ ಡಿ.ಬಿ.ಇನಾಂದಾರ ಅವರು ಚೇರಮನ್ನರಾಗಿ ಆಯ್ಕೆಯಾಗಿದ್ದಾರೆ.

ತದನಂತರ ಸೈನಿಕ ಶಾಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಸೈನಿಕ ಶಾಲೆಯ ನೂತನ ಆಡಳಿತ ಮಂಡಳಿ ರಚಿಸುವಂತೆ ಠರಾವು ಮಾಡಿ ನಿರ್ಣಯ ಕೈಗೊಳ್ಳಲಾಗಿತ್ತು, ಆದರೇ ಕೆಲವರು ಇದನ್ನು ಪ್ರಶ್ನಿಸಿ ಕೋರ್ಟ ಮೆಟ್ಟಿಲೇರಿದ್ದರು ನಂತರ ನಡೆದ ಬೆಳವಣಿಗೆಯಲ್ಲಿ ಸುಪ್ರೀಂ ಕೋರ್ಟ ಚುನಾವಣೆ ನಡೆಸಬೇಕು ಅಲ್ಲದೆ ಇದರ ಫಲಿತಾಂಶವನ್ನು ಗುಪ್ತವಾಗಿರಿಸಿ ಧಾರವಾಡದ ಹೈಕೋರ್ಟ ಪೀಠದಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ತೆರೆದು ಫಲಿತಾಂಶ ಘೋಷಿಸುವಂತೆ ಷರತ್ತುಬದ್ದ ಆದೇಶವನ್ನು ನೀಡಿತ್ತು ಅದರಂತೆಯೇ ಚುನಾವಣಾಧಿಕಾರಿಗಳು ಚುನಾವಣೆ ನಡೆಸಿ ಫಲಿತಾಂಶ ಗುಪ್ತವಾಗಿರಿಸಿ ಧಾರವಾಡದ ಹೈಕೋರ್ಟ ಪೀಠಕ್ಕೆ ನೀಡಿದ್ದರು, ದಿ. 16 ರಂದು ಚುನಾವಣೆ ಫಲಿತಾಂಶ ಘೋಷಣೆಯಾಗಿದ್ದು ಶಾಲೆಯ ಅಧ್ಯಕ್ಷ ಸ್ಥಾನಕ್ಕೆ ಎ.ಕೆ.ಕೊಟ್ರಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ಡಾ. ಅರುಣಾ ಅಕ್ಕಿ ಆಯ್ಕೆಯಾಗಿದ್ದಾರೆ. ಅಲ್ಲದೆ ಶಾಲೆಯ ಆಡಳಿತಕ್ಕೆ ಅವಶ್ಯವಿರುವ ಆಡಳಿತ ಮಂಡಳಿ ರಚಿಸುವಂತೆ ಕೋರ್ಟ ಆದೇಶ ಹೊರಡಿಸಿ ಈ ಪ್ರಕರಣಕ್ಕೆ ನಾಂದಿ ಹಾಡಿತ್ತು.

ಇನ್ನೂಳಿದಂತೆ ಬುಧವಾರ ನಡೆದ ನಿರ್ದೇಶಕರ ಸಭೆಯಲ್ಲಿ ಎಲ್ಲರ ಒಮ್ಮತದಿಂದ ನನ್ನನ್ನು ಚೇರಮನ್ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ, ಬೈಲಹೊಂಗಲದ ಶಾಸಕ ಮಹಾಂತೇಶ ಕೌಜಲಗಿ ಅವರನ್ನು ಸದಸ್ಯ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಸ್ಪಷ್ಟ ಪಡಿಸಿದರು.

ಶಾಲೆಯಲ್ಲಿ ಪಾರದರ್ಶಕ ಆಡಳಿತದ ಅವಶ್ಯಕತೆ ಇದ್ದು ಆಡಳಿತ ಮಂಡಳಿಯ ಸರ್ವ ಸದಸ್ಯರು ಪಾರದರ್ಶಕ ಆಡಳಿತ ನೀಡಲಿದ್ದಾರೆ, ಅಲ್ಲದೆ ಶಾಲೆಯಲ್ಲಿ ಎಲ್ಲ ಕಲಿಕಾ ರಂಗದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಾಲಕಿಯರ ವಸತಿ ಶಾಲೆ ಇದಾಗಿದ್ದು ಎಲ್ಲ ರೀತಿಯ ಭದ್ರತೆಯನ್ನು ಇಲ್ಲಿ ಕೈಗೊಳ್ಳಲಾಗುವುದು ಅಲ್ಲದೆ ಉಪ ಸಮೀತಿಗಳನ್ನು ರಚಿಸಿ ಜವಾಬ್ದಾರಿಗಳನ್ನು ಹಂಚಿಕೆ ಮಾಡುವ ಮೂಲಕ ಶಿಸ್ತುಬದ್ಧ ಅಭಿವೃದ್ಧಿ ಪರ ಆಡಳಿತ ನಡೆಸಲಾಗುವುದು ಎಂದು ಹೇಳಿದರು.

ಈ ಹಿಂದಿನ ಆಡಳಿತ ಮಂಡಳಿಯ ಅವಧಿಯಲ್ಲಿ ಏನೇ ನ್ಯೂನತೆಗಳಿದ್ದರೂ ಅದರ ಬಗ್ಗೆ ಗಮನ ಹರಿಸಿ ಅವುಗಳನ್ನು ಸುಧಾರಿಸಲಾಗುವುದು ಎಂದು ಹೇಳಿದ ಅವರು, ಭಾರತೀಯ ಸೇನೆಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಬಾಲಕಿಯರಿಗೆ ಅವಕಾಶ ಕಲ್ಪಿಸಿದೆ ಈ ನಿಟ್ಟಿನಲ್ಲಿ ಸೇನೆಗೆ ಸೇರ ಬಯಸುವ ವಿದ್ಯಾರ್ಥಿಗಳಿಗೂ ಈ ಶಾಲೆ ಅನುಕೂಲವಾಗಲಿದೆ ಎಂದು ಹೇಳಿದರು.

ಶಾಲೆಯಲ್ಲಿ ಒಟ್ಟು 835 ವಿದ್ಯಾರ್ಥಿನಿಯರು ವ್ಯಾಸಾಂಗ ಮಾಡುತ್ತಿದ್ದಾರೆ, ಇವರೆಲ್ಲರ ಬಗ್ಗೆ ಕಾಳಜಿ ಅವಶ್ಯಕ, ಈಗೀರುವ ಆಡಳಿತ ಮಂಡಳಿ ಸದಸ್ಯರಲ್ಲಿಯೂ ಮಹಿಳೆಯರಿದ್ದು ವಿದ್ಯಾರ್ಥಿನಿಯರ ಕಾಳಜಿಯ ಬಗ್ಗೆ ಅವರು ನಿಗಾವಹಿಸಲಿದ್ದಾರೆ ಎಂದು ಹೇಳಿದರು.

ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಇಲ್ಲಿ ಅವಕಾಶ ಇದೆ. ಅವರ ಎಲ್ಲ ಖರ್ಚು ವೆಚ್ಚುಗಳನ್ನು ಸರ್ಕಾರ ಭರಿಸುತ್ತದೆ ಕಾರಣ ವಿಧ್ಯಾರ್ಥಿನಿಯರು ಓದಿನೆಡೆಗೆ ಗಮನ ಹರಿಸಬೇಕೆಂದು ಕರೆ ನೀಡಿದರು.

ಆಡಳಿತ ಮಂಡಳಿ ಸದಸ್ಯರಾದ ಸರೋಜಿನಿ ಮಾರಿಹಾಳ, ಡಾ. ವಿರೇಂದ್ರ ತೆಗ್ಗಿಮನಿ, ರೇವಣಸಿದ್ದಪ್ಪ ಮಮದಾಪೂರ, ಮಲ್ಲಿಕಾರ್ಜುನ ಬಗಲಿ, ಮಹಾಂತಪ್ಪ ಪಟ್ಟಣಶೆಟ್ಟರ, ಮನೋಹರ ಕೋರಿ, ರಾಜೇಂದ್ರ ಅಂಕಲಗಿ, ಶ್ರೀಮತಿ ನಿರ್ಮಲಾದೇವಿ ಬಿಕ್ಕಣ್ಣವರ ಇದ್ದರು.


Spread the love

About Yuva Bharatha

Check Also

ಹಿರೇಬೂದನೂರ : ಭಕ್ತರ ಸನ್ಮಾನ

Spread the loveಹಿರೇಬೂದನೂರ : ಭಕ್ತರ ಸನ್ಮಾನ ಮುರಗೋಡ : ಹಿರೇಬೂದನೂರ ಗ್ರಾಮದ ಶ್ರೀ ಸದ್ಗುರು ಸಂತ ಬಾಳುಮಾಮಾ ದೇವಸ್ಥಾನದ …

Leave a Reply

Your email address will not be published. Required fields are marked *

11 + seven =