Breaking News

ಚಟುವಟಿಕೆ ಆಧಾರಿತ ಕಲಿಕೆ ಕೈಗೊಳ್ಳಬೇಕಾಗಿದೆ-ಜಿ ಬಿ ಬಳಗಾರ.!

Spread the love

ಚಟುವಟಿಕೆ ಆಧಾರಿತ ಕಲಿಕೆ ಕೈಗೊಳ್ಳಬೇಕಾಗಿದೆ-ಜಿ ಬಿ ಬಳಗಾರ.!


ಗೋಕಾಕ: ಮಕ್ಕಳಲ್ಲಿ ಇರುವ ಕಲಿಕಾ ಕೊರತೆಯನ್ನು ತುಂಬುವ ಉದ್ದೇಶದಿಂದ ಸರ್ಕಾರ ಕಲಿಕಾ ಹಬ್ಬವನ್ನು ರೂಪಿಸಿದ್ದು, ಚಟುವಟಿಕೆ ಆಧಾರಿತ ಕಲಿಕೆ ಕೈಗೊಳ್ಳಬೇಕಾಗಿದೆ. ಮೂರು ತಿಂಗಳುಗಳ ಕಾಲ ಮಕ್ಕಳ ಮನಸ್ಸನ್ನು ಕಲಿಕಾದತ್ತ ಕೊಂಡೊಯ್ಯುವ ಕಾರ್ಯವಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಬಿ ಬಳಗಾರ ಹೇಳಿದರು.
ಅವರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಮಮದಾಪೂರ, ಉಪ್ಪಾರಹಟ್ಟಿ ಮತ್ತು ಶಿಂಗಳಾಪೂರ ಗ್ರಾಮಗಳ ಸರಕಾರಿ ಪ್ರೌಢಶಾಲೆಗಳಲ್ಲಿ ಗುರುವಾರ ಹಮ್ಮಿಕೊಂಡಿರುವ ಕಲಿಕಾ ಹಬ್ಬದ ತರಬೇತಿ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಕ್ಕಳಲ್ಲಿಯ ಕಲಿಕಾ ಕೊರತೆ ನಿವಾರಿಸಲು ಉತ್ತೇಜನ ನೀಡಿ ವಿದ್ಯಾರ್ಥಿಗಳನ್ನು ಸಂತಸಗೊಳಿಸಬೇಕು. ಇಂದಿನ ತಂತ್ರಜ್ಞಾನದ ಯುಗದಲ್ಲಿ ಮಕ್ಕಳು ಪ್ರಶ್ನೆ ಮಾಡುವಂತಾಗಬೇಕು. ಕಲಿಕೆಯ ಕೊರತೆ ತುಂಬಿ ಕಲಿಕೆಯಿಂದ ಹಿಂಜರಿಕೆ ಹೋಗಲಾಡಿಸಬೇಕಾಗಿದೆ. ಚಟುವಟಿಕೆಗಳ ಮೂಲಕ ಸಂತೋಷದಿAದ ಪಾಲ್ಗೊಳ್ಳುವಂತೆ ಮಾಡಿ ಸೂಕ್ತ ಪ್ರತಿಭೆಯನ್ನು ಹೊರತರುವಂತಹ ಕೆಲಸವಾಗಬೇಕು ಎಂದರು.
ಕಲಿಕಾ ಹಬ್ಬದ ತರಬೇತಿ ಕಾರ್ಯಾಗಾರ ಕಾರ್ಯಕ್ರಮವನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ಉದ್ಘಾಟಿಸಿದರು.
ವೇದಿಕೆಯ ಮೇಲೆ ಜಿ ಪಂ ಮಾಜಿ ಸದಸ್ಯರಾದ ಟಿ ಆರ್ ಕಾಗಲ, ಮಡ್ಡೆಪ್ಪ ತೋಳಿನವರ, ಸುರೇಶ ಸನದಿ, ಹನಮಂತ ದುರ್ಗನ್ನವರ, ಕೆಂಪಣ್ಣ ಮೈಲನ್ನವರ, ರಮೇಶ ಗಾಣಗಿ, ರುಕ್ಮವ್ವ ಭರಮನ್ನವರ, ಬಿಸಿಯೂಟ ಯೋಜನಾಧಿಕಾರಿ ಎಮ್ ಬಿ ಮಲಬನ್ನವರ ಸೇರಿದಂತೆ ಕ್ಲಸ್ಟರ್ ಮಟ್ಟದ ಅಧಿಕಾರಿವರ್ಗದವರು ಇದ್ದರು.


Spread the love

About Yuva Bharatha

Check Also

ಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಕೆ.!

Spread the loveಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ …

Leave a Reply

Your email address will not be published. Required fields are marked *

3 × one =