ಕಿವೀಸ್ ಹಣಿದು ಸರಣಿ ಗೆದ್ದ ಭಾರತ !

ಯುವ ಭಾರತ ಸುದ್ದಿ ರಾಯಪುರ :
ಭಾರತೀಯ ಬೌಲರ್ಗಳ ದಾಳಿ ತಡೆಯಲಾರದೆ ನ್ಯೂಜಿಲ್ಯಾಂಡ್ ತತ್ತರಿಸಿತು. ಇದರಿಂದ ಇನ್ನೂ ಒಂದು ಪಂದ್ಯ ಇರುವಂತೆ ಪ್ರವಾಸಿಗರು ಸರಣಿಯನ್ನು ಸೋತರು.
ನ್ಯೂಜಿಲ್ಯಾಂಡ್ ಎದುರು ಭಾರತ ಕ್ರಿಕೆಟ್ ತಂಡ ಏಕದಿನ ಪಂದ್ಯದ ಸರಣಿಯನ್ನು ತನ್ನದಾಗಿಸಿಕೊಂಡಿದೆ.
ಇಂದು ನಡೆದ ಪಂದ್ಯದಲ್ಲಿ ಭಾರತ ನ್ಯೂಜಿಲ್ಯಾಂಡ್ ನ್ನು 108 ರನ್‌ಗಳಿಗೆ ಅಲೌಟ್ ಮಾಡಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ನಡೆಸಿದ ಭಾರತ ಕೇವಲ ಎರಡು ವಿಕೆಟ್ ಕಳೆದುಕೊಂಡು 111ರನ್ ಗಳಿಸಿ ಜಯ ಸಾಧಿಸಿತು. ನಾಯಕ ರೋಹಿತ್ ಶರ್ಮಾ 51 ರನ್ ಗಳಿಂದ ಅರ್ಧ ಶತಕ ಗಳಿಸಿದರು.
ಶುಭಮನ್ ಗಿಲ್ ಆಕರ್ಷಕ 40 ಗಳಿಸಿದರು. ಭಾರತ ತಂಡದ ಬೌಲರ್ ಗಳ ಮಾರಕ ದಾಳಿಗೆ ನ್ಯೂಜಿಲ್ಯಾಂಡ್ ತತ್ತರಿಸಿತು. ಶಮಿ 3, ವಾಷಿಂಗ್ಟನ್ ಸುಂದರ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ ಎರಡು ವಿಕೆಟ್ ಪಡೆದುಕೊಂಡರು.
YuvaBharataha Latest Kannada News