Breaking News

ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್‌ಗೆ 23 ಲಕ್ಷ ರೂ. ವಂಚನೆ: ಮಂಗಳೂರಿನಲ್ಲಿ ಆರೋಪಿ ಬಂಧನ !

Spread the love

ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್‌ಗೆ 23 ಲಕ್ಷ ರೂ. ವಂಚನೆ: ಮಂಗಳೂರಿನಲ್ಲಿ ಆರೋಪಿ ಬಂಧನ !

ಯುವ ಭಾರತ ಸುದ್ದಿ ನವದೆಹಲಿ:
ದೆಹಲಿಯ ಹೋಟೆಲ್‌ನಿಂದ ಬಿಲ್ ಪಾವತಿಸದೆ ಚೆಕ್ ಔಟ್ ಮಾಡಿ ಪರಾರಿಯಾಗಿದ್ದ ವ್ಯಕ್ತಿಯನ್ನು ವಂಚನೆ ಘಟನೆಯ ಎರಡು ತಿಂಗಳ ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಧಿಸಲಾಗಿದೆ.
ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿ ಮಹಮದ್ ಷರೀಫ್ (41) ಎಂದು ಗುರುತಿಸಲಾಗಿದ್ದು, ಯುಎಇ ರಾಜಮನೆತನದ ಸದಸ್ಯನಂತೆ ಸೋಗು ಹಾಕಿಕೊಂಡು ನವದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್‌ನಿಂದ 23.46 ಲಕ್ಷ ರೂ.ಗಳನ್ನು ವಂಚಿಸಿದ್ದಾನೆ ಎಂದು ಹೇಳಲಾಗಿದೆ. ಆರೋಪಿಯನ್ನು ಜನವರಿ 19 ರಂದು ಮಂಗಳೂರಿನಿಂದ ಬಂಧಿಸಲಾಯಿತು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಮಹಮದ್ ಷರೀಫ್ ಕಳೆದ ವರ್ಷ ಆಗಸ್ಟ್ 1ರಿಂದ ನವೆಂಬರ್ 20ರ ನಡುವೆ ಹೋಟೆಲ್‌ನಲ್ಲಿ ತಂಗಿದ್ದ. ಅವರು ಯುಎಇ ಸರ್ಕಾರದ ಪ್ರಮುಖ ಕಾರ್ಯನಿರ್ವಹಣಾಧಿಕಾರಿಯಂತೆ ನಟಿಸುವ ನಕಲಿ ಬಿಸಿನೆಸ್‌ ಕಾರ್ಡ್‌ನೊಂದಿಗೆ ಹೋಟೆಲ್‌ಗೆ ಬಂದಿದ್ದ ಮತ್ತು ನಂತರ ಬಿಲ್‌ ಪಾವತಿಸದೆ ನಾಪತ್ತೆಯಾಗಿದ್ದ.

 

ಹೋಟೆಲ್‌ ವಂಚನೆ ಪ್ರಕರಣದಲ್ಲಿ ದೆಹಲಿ ಪೊಲೀಸರು ಆತನನ್ನು ಹುಡುಕುತ್ತಿದ್ದರು. ಷರೀಫ್ ಅವರು ಅಬುಧಾಬಿಯ ರಾಜಮನೆತನದ ಸದಸ್ಯ ಶೇಖ್ ಫಲಾಹ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಬಳಿ ಕೆಲಸ ಮಾಡಿರುವುದಾಗಿ ಹೋಟೆಲ್ ಸಿಬ್ಬಂದಿಗೆ ತಿಳಿಸಿದ್ದಾನೆ. ಮಾಧ್ಯಮ ವರದಿಗಳ ಪ್ರಕಾರ, ಅವರು ಯುಎಇಯಲ್ಲಿನ ಪ್ರಮುಖ ಸರ್ಕಾರಿ ಅಧಿಕಾರಿಯಂತೆ ನಕಲಿ ಬಿಸಿನೆಸ್‌ ಕಾರ್ಡ್‌ನೊಂದಿಗೆ ಹೋಟೆಲ್ ಕೋಣೆ ಪಡೆದಿದ್ದಾನೆ.
ಷರೀಫ್ ಏಕಾಏಕಿ ಹೊರಟು ಹೋಗಿದ್ದಲ್ಲದೆ, ತನ್ನ ಕೊಠಡಿಯಿಂದ ಬೆಳ್ಳಿ ವಸ್ತುಗಳು ಮತ್ತು ಇತರ ವಸ್ತುಗಳನ್ನು ಕದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಲೀಲಾ ಪ್ಯಾಲೇಸ್‌ನಲ್ಲಿ ಷರೀಫ್ ಮಾಡಿದ ಒಟ್ಟು ವೆಚ್ಚವು ಸರಿಸುಮಾರು 35 ಲಕ್ಷ ರೂಪಾಯಿಗಳು, ಆದಾಗ್ಯೂ, ಆತ ವಾಸ್ತವ್ಯದ ಸಮಯದಲ್ಲಿ ಕೇವಲ 11.5 ಲಕ್ಷ ರೂಪಾಯಿಗಳನ್ನು ಪಾವತಿಸಿದ್ದಾನೆ.
ಷರೀಫ್ ಹೋಟೆಲ್ ಗೆ 20 ಲಕ್ಷ ರೂಪಾಯಿ ಚೆಕ್ ನೀಡಿದ್ದಾರೆ ಎನ್ನಲಾಗಿದೆ. ನವೆಂಬರ್‌ನಲ್ಲಿ ಚೆಕ್ ಅನ್ನು ಸಲ್ಲಿಸಲಾಗಿದ್ದು, ಸಾಕಷ್ಟು ಹಣವಿಲ್ಲದ ಕಾರಣ ಅದು ಬೌನ್ಸ್ ಆಗಿದೆ.
ಹೋಟೆಲ್ ಸಿಬ್ಬಂದಿಗೆ ರಾಜಮನೆತನದ ಜೀವನಶೈಲಿಯನ್ನು ವಿವರಿಸಿದ ಮತ್ತು ರಾಜಮನೆತನದ ಬಗ್ಗೆ ಸಾಕಷ್ಟು ಮಾತನಾಡಿ ಹೋಟೆಲ್ ಸಿಬ್ಬಂದಿ ತನ್ನ ಕಥೆಯನ್ನು ನಂಬುವಂತೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

two × two =