ವಿಶ್ವ ಕಪ್ ಗೆದ್ದ ಭಾರತೀಯ ಮಹಿಳೆಯರು
ಯುವ ಭಾರತ ಸುದ್ದಿ ಪಾಚೆಫ್ ಸ್ಟ್ರೂಮ್ :
ಭಾರತೀಯ ಮಹಿಳೆಯರು ಇದೇ ಮೊದಲ ಬಾರಿಗೆ ವಿಶ್ವಕಪ್ ನಲ್ಲಿ ಅತ್ಯಮೋಘ ಸಾಧನೆ ಮಾಡಿದ್ದಾರೆ. ವಿಶ್ವ ಕಪ್ ಕ್ರಿಕೆಟ್ ಪಂದ್ಯದಲ್ಲಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಅನ್ನು ಮಣಿಸಿ ಗೆಲುವನ್ನು ತಮ್ಮದಾಗಿಸಿ ಕೊಂಡಿದ್ದಾರೆ.
16 ತಂಡಗಳೊಂದಿಗೆ ಆರಂಭಗೊಂಡ ಚೊಚ್ಚಲ ಆವೃತ್ತಿಯ ಅಂಡರ್ 19 ಮಹಿಳಾ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಭಾರತ ವಿಶ್ವ ಕಪ್ ಗೆದ್ದಿದೆ. ಭಾರತದ ವನಿತೆಯರು ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿದ್ದಾರೆ.
ತ್ರಿಶಾ ಹಾಗೂ ಸೌಮ್ಯ ಅವರ ಅತ್ಯುತ್ತಮ ಬ್ಯಾಟಿಂಗ್ ನೆರವಿನಿಂದ ಭಾರತ ಗೆಲುವು ಸಾಧಿಸಿದೆ. ಭಾರತದ ಮಹಿಳೆಯರು ಇಂಗ್ಲೆಂಡ್ ತಂಡವನ್ನು ಕೇವಲ 68 ರನ್ಗಳಿಗೆ ಆಲ್ ಔಟ್ ಮಾಡಿದರು. ಬಹುಬೇಗನೆ ಇಂಗ್ಲೆಂಡ್ ಮಹಿಳೆಯರನ್ನು ಭಾರತೀಯ ಮಹಿಳೆಯರು ಕಟ್ಟಿಹಾಕಿದ್ದರಿಂದ ಸುಲಭ ಜಯ ಸಾಧ್ಯವಾಯಿತು.
ಅಂತಿಮವಾಗಿ ಭಾರತೀಯ ಮಹಿಳೆಯರು ಕೇವಲ ಮೂರು ವಿಕೆಟ್ ಕಳೆದುಕೊಂಡು ಗೆಲುವಿನ ರನ್ ಬಾರಿಸಿದರು.
U19 ಮಹಿಳಾ ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ 7 ವಿಕೆಟ್ ಗಳ ರೋಚಕ ಗೆಲುವು ಸಾಧಿಸಿದೆ . ಇಂಗ್ಲೆಂಡ್ ನೀಡಿದ್ದ 69 ರನ್ ಗಳ ಬೆನ್ನತ್ತಿದ್ದ ಭಾರತ , ಕೇವಲ 14 ಓವರ್ ಗಳಲ್ಲಿ ವಿಕೆಟ್ ನಷ್ಟಕ್ಕೆ 69 ರನ್ ಪೇರಿಸಿ ಗುರಿ ಮುಟ್ಟಿದೆ . ಭಾರತದ ಪರ , ಶಫಾಲಿ ವರ್ಮಾ -15 , ಶ್ವೇತಾ ಸೆಹ್ರಾವತ್ -5 , ಸೌಮ್ಯಾ ತಿವಾರಿ -23 & ಗೊಂಗಡಿ ತ್ರಿಷಾ -24 ರನ್ ಕಲೆಹಾಕಿದ್ದಾರೆ . ಇನ್ನು ಇಂಗ್ಲೆಂಡ್ ಪರ , ಅಲೆಕ್ಸಾ , ಗ್ರೇಸ್ ಸ್ಕಿವೆನ್ಸ್ ಮತ್ತು ಹನ್ನಾ ಬೇಕರ್ ತಲಾ 1 ವಿಕೆಟ್ ಕಬಳಿಸಿದ್ದಾರೆ .