Breaking News

ಡಿಕೆಶಿ ಕರ್ನಾಟಕ ಪ್ರದೇಶ್ ಸಿಡಿ ಕಮೀಟಿ ಅಧ್ಯಕ್ಷ ಎಂದು ಲಖನ್ ಜಾರಕಿಹೊಳಿ ವ್ಯಂಗ್ಯ.!

Spread the love

ಡಿಕೆಶಿ ಕರ್ನಾಟಕ ಪ್ರದೇಶ್ ಸಿಡಿ ಕಮೀಟಿ ಅಧ್ಯಕ್ಷ ಎಂದು ಲಖನ್ ಜಾರಕಿಹೊಳಿ ವ್ಯಂಗ್ಯ.!

 

ಯುವ ಭಾರತ ಸುದ್ದಿ  ಗೋಕಾಕ: ಸಿಡಿ ಕಾರ್ಖಾನೆ ಬೆಳಗಾವಿಯಲ್ಲಿಯೇ ಇದೆ. ಬೆಳಗಾವಿಯಿಂದ ತಯಾರಾಗಿ ಕನಕಪುರ ಮತ್ತು ಬೆಂಗಳೂರನಲ್ಲಿ ರಿಲೀಸ್ ಆಗುತ್ತದೆ. 2೦೦೦ ಇಸ್ವಿಯಿಂದ ಸಿಡಿ ಕಾರ್ಖಾನೆ ಚಾಲ್ತಿಯಲ್ಲಿದ್ದು, ಸಿಬಿಐ ತನಿಖೆ ನಡೆದರೆ ಎಲ್ಲವೂ ಹೊರಬರಲಿದೆ. ಕೆಪಿಸಿಸಿ ಅಂದ್ರೆ, ಕರ್ನಾಟಕ ಪ್ರದೇಶ್ ಸಿಡಿ ಕಮೀಟಿ ಎಂದು ವಿಧಾನ ಪರಿಷತ ಸದಸ್ಯ ಲಖನ್ ಜಾರಕಿಹೊಳಿ ವ್ಯಂಗ್ಯವಾಡಿದರು.
ಅವರು, ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಖರ್ಗೆ, ಪರಮೇಶ್ವರ, ಸಿದ್ದರಾಮಯ್ಯ ಸಾಹೇಬರು ಇದ್ದಾಗ ಕಾಂಗ್ರೆಸ್ ಬೇರೆ ಇತ್ತು, ಸಿದ್ದರಾಮಯ್ಯ, ಖರ್ಗೆ ಸಾಹೇಬರು ನಮ್ಮ ಗುರುಗಳು ಅಂತಾ ಒಪ್ಪುತ್ತೇವೆ. ಕಾಂಗ್ರೆಸ್‌ನಲ್ಲಿ ಡಿಕೆಶಿ ಬಗ್ಗೆ ಯಾರೂ ಮಾತನಾಡಲ್ಲ, ಎಲ್ಲರ ಸಿಡಿಗಳು ಅವನ ಬಳಿ ಇವೆ ಎಂದು ಹೇಳಿದರು.

ಸಿಡಿ ಪ್ರಕರಣ ಮಾರ್ಚ್ ೩ನೇ ತಾರೀಖಿಗೆ ಎರಡು ವರ್ಷ ಆಯ್ತು, ಎಲ್ಲ ಷಡ್ಯಂತ್ರ ನಡೆದಿದೆ. ೨೦೦೦ನೇ ಇಸವಿಯಿಂದ ಇದು ಇದೆ, ಇದಕ್ಕೆ ಸಿಬಿಐ ತನಿಖೆ ಒಂದೇ ಪರಿಹಾರ. ಈಗ ಸ್ಯಾಂಟ್ರೋ ರವಿ ಅಂತಾ ಏನು ತೋರಿಸುತ್ತಿದ್ದಾರಲ್ಲ ಹಾಗೇ ೮೦೦ ಸ್ಟಾರ್ಟ್ ಆಗಿ ಬಿಎಂಡಬ್ಲ್ಯೂವರೆಗೂ ಇದೆ. ಒಂಟಿತೋಳ ಒಂಟಿತೋಳ ಅಂದ್ರು ಒಂಟಿತೋಳ ಏನ್ ಮಾಡಿತು, ಕಾಂಗ್ರೆಸ್ ಸರ್ಕಾರ ಬೀಳಲು ಬೆಳಗಾವಿಯವರೇ ಕಾರಣ. ನಾವು ಸಿಂಪಲ್ ಆಗಿಯೇ ಇರ್ತೀವಿ, ಜನ ನಮ್ಮ ಜೊತೆ ಇರ್ತಾರೆ ಎಂದರು.
ಶಾಸಕ ರಮೇಶ ಜಾರಕಿಹೊಳಿ ಅವರು ಶಾಸಕಿ ಲಕ್ಷಿö್ಮÃ ಹೆಬ್ಬಾಳಕರ ಅವರಿಗೆ ವಿಷಕನ್ಯೆ ಎಂದು ಹೇಳಿದ ವಿಚಾರಕ್ಕೆ ವಿಷಕನ್ಯೆ ಅಷ್ಟೇ ಅಲ್ಲ ಮಟ್ಯಾಷ ಲೇಗ್ ಮತ್ತು ರಕ್ತ ಕಣ್ಣೀರು ಎಂದು ಬೆಳಗಾವಿ ಜನ ಮಾತಾಡುತ್ತಾರೆ. ನಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ಮೊದಲಿನಿಂದಲು ಇದೆ. ಚುನಾವಣೆ ಆರು ತಿಂಗಳು ಇರುತ್ತಲೇ ಜೋರಾಗಿರುತ್ತದೆ. ಆ ಮಟ್ಯಾಷ ಲೇಗ್‌ನಿಂದ ಸಿದ್ದರಾಮಯ್ಯ ಮಾಜಿ ಆದರು, ಕುಮಾರಸ್ವಾಮಿ ಸರ್ಕಾರ ಹೋಯಿತು. ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ನಾನು ಕಾಂಗ್ರೆಸ್ ನಿಂದ ದೂರವಾದೆ.
ಕೆಪಿಸಿಸಿ ಅಧ್ಯಕ್ಷ ಅಂದರೆ ಕರ್ನಾಟಕ ಪ್ರದೇಶ ಸಿಡಿ ಕಂಪನಿ ಅಧ್ಯಕ್ಷ. ರಮೇಶ ಜಾರಕಿಹೊಳಿಗೆ ಶಕ್ತಿ ಇದೆ ಬಹಿರಂಗವಾಗಿ ಮಾತನಾಡಿದ್ದಾರೆ. ಧೈರ್ಯ ಇಲ್ಲದೇ ಇರೋರು ಮನೆಯಲ್ಲಿ ಕುಳಿತುಕೊಳ್ಳುತ್ತಾರೆ ಒಂದು ವರ್ಷದಿಂದ ನಮ್ಮ ಬೇಡಿಕೆ ಇದೆ ಸಿಬಿಐ ವಹಿಸಬೇಕು ಅಂತ ಇದೆ. ಅನೇಕರು ನೊಂದು, ಬೆಂದು ಹೋಗಿದ್ದಾರೆ. ಬೆಂಗಳೂರು, ಮುಂಬೈ, ಕೆರಳದ ವರೆಗೆ ಇವರ ಲಿಂಕ್ ಇದೆ. ರಮೇಶ ಜಾರಕಿಹೊಳಿ ಅವರಿಗೆ ದಾಖಲೆ ಬಿಡುಗಡೆ ಮಾಡಬೇಡಿ ಸಿಬಿಐ ಕೊಡಿ ಎಂದು ಹೇಳಿದ್ದೇನೆ. ಕಾಂಗ್ರೆಸ್ ಸರ್ಕಾರ ಬಿಳಿಸಲು ಬೆಳಗಾವಿ ಶಾಸಕರು ಕಾರಣ. ಆ ಕ್ಷೇತ್ರದಲ್ಲಿ ನಮ್ಮ ಕುಟುಂಬದ ಅಭಿಮಾನಿಗಳು ೨೦ ಸಾವಿರ ಜನರಿದ್ದಾರೆ ಎಂದರು.
ಸಂತ್ರಸ್ತರೋ ಸಂತೃಪ್ತರೋ ಗೊತ್ತಾಗಲಿದೆ. ಬೇರೆಯವರಿಗೆ ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಕುಟುಂಬಸ್ಥರು, ಕ್ಷೇತ್ರದ ಜನ ಬೆನ್ನಿಗೆ ನಿಂತಿದ್ದಾರೆ. ರಮೇಶ ಜಾರಕಿಹೊಳಿ ನಿವೃತ್ತಿಗೆ ಜನ ಅವಕಾಶ ಕೊಡಲ್ಲ. ಸಿಬಿಐ ತನಿಖೆ ಆದರೇ ಲಂಚ, ಮಂಚ ಎಲ್ಲ ಹೊರಗೆ ಬರಲಿದೆ. ಯಾರು ಎಲ್ಲಿ ಪ್ಯಾಂಟ್ ಬಿಚ್ಚುತ್ತಾರೆ, ಲುಂಗಿ ಬಿಚ್ಚುತ್ತಾರೆ ಗೊತ್ತಾಗಲಿದೆ ಎಂದು ಗಂಭೀರ ಆರೋಪ ಮಾಡಿದರು.


Spread the love

About Yuva Bharatha

Check Also

ಅಕ್ಕಾ ಅಂದ್ರೆ ಅವರೇ ಅಂತ ಯಾಕೆ ತಿಳ್ಕೊತೀರಿ, ಪೆಗ್ ಅಂದ್ರೆ ಎನರ್ಜಿ ಡ್ರಿಂಕ್-ಮಾಜಿ ಶಾಸಕ ಸಂಜಯ ಪಾಟೀಲ.!

Spread the loveನಾನು ಭಾಷಣದಲ್ಲಿ ಹೆಬ್ಬಾಳಕರ ಹೆಸರನ್ನೆ ತಗೊಂಡಿಲ್ಲ. -ಮಾಜಿ ಶಾಸಕ ಸಂಜಯ ಪಾಟೀಲ.! ಯುವಭಾರತ ಸುದ್ದಿ ಬೆಳಗಾವಿ: ನಾನು …

Leave a Reply

Your email address will not be published. Required fields are marked *

20 − eleven =