Breaking News

ಮಸಗುಪ್ಪಿಯಲ್ಲಿ ೩.೩೭ಕೋಟಿ ರೂ ವೆಚ್ಚದ ಜೆಜೆಎಂ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ.!

Spread the love

ಮಸಗುಪ್ಪಿಯಲ್ಲಿ ೩.೩೭ಕೋಟಿ ರೂ ವೆಚ್ಚದ ಜೆಜೆಎಂ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ.!


ಮೂಡಲಗಿ: ಮಸಗುಪ್ಪಿ ಜೆಜೆಎಂ ಕಾಮಗಾರಿಗೆ ೩.೩೭ ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಂಡಿದ್ದು, ಪ್ರತಿ ಮನೆ ಮನೆಗೆ ಕುಡಿಯುವ ನೀರನ್ನು ನಲ್ಲಿ ಮೂಲಕ ಪೂರೈಸಲು ಈ ಯೋಜನೆ ಸಹಕಾರಿಯಾಗಿದೆ ಎಂದು ಶಾಸಕ ಹಾಗೂ ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.
ತಾಲೂಕಿನ ಮಸಗುಪ್ಪಿ ಗ್ರಾಮದಲ್ಲಿ ಆರ್.ಡಿ.ಪಿ.ಆರ್ ಇಲಾಖೆಯಿಂದ ೩.೩೭ ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಇದರಿಂದ ಮಸಗುಪ್ಪಿ ಗ್ರಾಮದ ನಾಗರಿಕರಿಗೆ ಕುಡಿಯುವ ನೀರಿನ ಅನುಕೂಲತೆ ಲಭ್ಯವಾಗಲಿದೆ ಎಂದು ಹೇಳಿದರು.
ಮಸಗುಪ್ಪಿ ಗ್ರಾಮಕ್ಕೆ ೨.೦೨ ಕೋಟಿ ರೂಪಾಯಿ, ಲಕ್ಷಿö್ಮÃ ನಗರಕ್ಕೆ ೬೦ ಲಕ್ಷ ಮತ್ತು ಬಡಲಕನ್ನವರ ತೋಟಕ್ಕೆ ೭೫ ಲಕ್ಷ ರೂಪಾಯಿ ವೆಚ್ಚದಲ್ಲಿ ಜಲ ಜೀವನ ಮಿಷನ್ ಕಾಮಗಾರಿಗಳು ನಡೆಯಲಿವೆ, ಮಸಗುಪ್ಪಿ ಗ್ರಾಮದ ಜನತೆಯ ಅಶೋತ್ತರಗಳಿಗೆ ನಿರಂತರವಾಗಿ ಸ್ಪಂದಿಸುವ ಕೆಲಸವನ್ನು ಮಾಡುತ್ತಿರುವದಾಗಿ ಹೇಳಿದ ಅವರು, ಗ್ರಾಮದ ಸರ್ವತೋಮುಖ ಪ್ರಗತಿಗಾಗಿ ಸರಕಾರದ ಹಲವಾರು ಯೋಜನೆಗಳನ್ನು ಅನುಷ್ಠಾನ ಮಾಡಿರುವದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಈ ಸಂದರ್ಭದಲ್ಲಿ ಮಸಗುಪ್ಪಿ ಗ್ರಾ.ಪಂ ಅಧ್ಯಕ್ಷೆ ಶಾಂತಾ ತಿಗಡಿ, ಉಪಾಧ್ಯಕ್ಷ ದುಂಡಪ್ಪ ಪಂಜೋದಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಅಪ್ಪಯ್ಯ ಬಡ್ನಿಂಗಗೋಳ, ಕಲ್ಲಪ್ಪ ಉಪ್ಪಾರ, ಭೂ ನ್ಯಾಯ ಮಂಡಳಿ ಸದಸ್ಯ ಸಂಜು ಹೊಸಕೋಟಿ, ಅಶೋಕ ಮಳಲಿ, ಆನಂದ ಹೊಸಕೋಟಿ, ಗ್ರಾ.ಕು.ನೀ ಮತ್ತು ನೈರ್ಮಲ್ಯಿಕರಣ ಗೋಕಾಕ ಉಪವಿಭಾಗದ ಎ.ಇ.ಇ ಆರ್.ವಿ.ಜಾಧವ, ಬಸು ಬುಜನ್ನವರ, ಬಾಳಪ್ಪ ತಿಗಡಿ, ಕೆಂಚಪ್ಪ ಶಿಂತ್ರಿ, ಭರಮಪ್ಪ ಆಶಿರೊಟ್ಟಿ, ಸಾತಪ್ಪ ಕೊಳದುರ್ಗಿ, ರಾಮಣ್ಣ ಗಂಗನ್ನವರ, ಭರಮಣ್ಣ ಗಂಗನ್ನವರ, ಕಲ್ಲೋಳೆಪ್ಪ ಅಶಿರೊಟ್ಟಿ, ಹನಮಂತ ಕುಲಕರ್ಣಿ, ಮುರಗೇಪ್ಪ ಗಾಡವಿ, ಭೀಮಪ್ಪ ಬಡ್ನಿಂಗಗೋಳ, ನಿಂಗಪ್ಪ ಹೆಜ್ಜಗಾರ ವೀರುಪಾಕ್ಷ ಕೋಳವಿ, ಬಂದೆನವಾಜ ನದಾಫ್ ಮುಂತಾದವರು ಉಪಸ್ಥಿತರಿದ್ದರು.
ದೇವಸ್ಥಾನಕ್ಕೆ ಭೇಟಿ: ಶಾಸಕ ಹಾಗೂ ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮಸಗುಪ್ಪಿ ಗ್ರಾಮದ ಜಾಗೃದೇವರಾದ ಶ್ರೀ ಮಹಾಲಕ್ಷಿö್ಮÃ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು


Spread the love

About Yuva Bharatha

Check Also

ಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಕೆ.!

Spread the loveಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ …

Leave a Reply

Your email address will not be published. Required fields are marked *

two × five =