ಗಿಲ್ ಸ್ಪೋಟಕ್ಕೆ ಕಿವೀಸ್ ತತ್ತರ : ಭಾರತಕ್ಕೆ ಸರಣಿ ಗೆಲುವು !
ಯುವ ಭಾರತ ಸುದ್ದಿ ಅಹಮದಾಬಾದ್ : ಭಾರತದ ಯುವ ಬ್ಯಾಟ್ಸ್ಮನ್ ಗಳು ಮತ್ತೆ ಅಬ್ಬರಿಸಿದ್ದಾರೆ. ಅದರಲ್ಲೂ ಆರಂಭಿಕ ಶುಭಮನ್ ಗಿಲ್ ಶತಕಗಳ ಮೇಲೆ ಶತಕ ಬಾರಿಸುತ್ತಿದ್ದಾರೆ. ಆರಂಭಿಕ ಭರವಸೆಯ ಬ್ಯಾಟ್ಸ್ಮನ್ ಶುಭಮನ್ ಗಿಲ್ 20-20 ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಶತಕ ಸಾಧನೆ ಮಾಡಿದ್ದಾರೆ. ಅವರ ಅಮೋಘ ಶತಕದ ನೆರವಿನಿಂದ ಭಾರತ ಇಂದು ನಡೆದ ಪಂದ್ಯದಲ್ಲಿ ಭಾರತ 168 ರನ್ ಗಳ ಭರ್ಜರಿಯ ಸಾಧಿಸಿತು. ನ್ಯೂಜಿಲೆಂಡ್ ತಂಡ ಕೇವಲ 66 ರನ್‌ಗಳಿಗೆ ಅಲೌಟ್ ಆಯಿತು. ಈ ಮೂಲಕ ನ್ಯೂಜಿಲ್ಯಾಂಡ್ ಎದುರು ಸರಣಿ ಜಯ ಸಾಧಿಸಿದೆ. ಶುಭಮನ್ ಗಿಲ್ ಅವರು ವಿರಾಟ್ ಕೊಹ್ಲಿ, ಸುರೇಶ್ ರೈನಾ, ಕೆ.ಎಲ್.ರಾಹುಲ್ ಹಾಗೂ ರೋಹಿತ್ ಶರ್ಮ ಅವರೊಂದಿಗೆ ಎಲೈಟ್ ಗುಂಪು ಸೇರ್ಪಡೆಗೊಂಡಿದ್ದಾರೆ. ಎಲ್ಲಾ ಮಾದರಿಗಳಲ್ಲೂ ಶತಕ ಬಾರಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. 63 ಎಸೆತಗಳನ್ನು ಎದುರಿಸಿದ ಗಿಲ್ ಅವರು 126 ರನ್ ಗಳಿಸಿದರು. ಅವರು ಶತಕಕ್ಕೆ ಕೇವಲ 54 ಎಸೆತಗಳಲ್ಲಿ ಎದುರಿಸಿದರು. ಬಳಿಕ 50 ರನ್ನುಗಳನ್ನು ಕೇವಲ 19 ಎಸೆತಗಳನ್ನು ತೆಗೆದುಕೊಂಡರು. ಭಾರತ ನಾಲ್ಕು ವಿಕೆಟ್ ನಷ್ಟಕ್ಕೆ 234 ರನ್ನುಗಳ ಬೃಹತ್ ಮೊತ್ತ ಪೇರಿಸಿತು. ರಾಹುಲ್ ತ್ರಿಪಾಠಿ 44, ಹಾರ್ದಿಕ್ ಪಾಂಡ್ಯ 30, ಸೂರ್ಯಕಾಂತಿ ಯಾದವ್ 24, ದೀಪಕ ಹೂಡಾ ಎರಡು ರನ್ ಗಳಿಸಿದರು.
ನ್ಯೂಜಿಲೆಂಡ್ ತಂಡದ ಮಿಚೆಲ್ ಭರ್ಜರಿ ಮೂರು ಸಿಕ್ಸರ್ ನೆರವಿನಿಂದ ರನ್ ಗಳಿಸಿದರು. ಆದರೆ, ನ್ಯೂಜಿಲೆಂಡಿನ ಬೇರಾವ ಆಟಗಾರರು ನಿರೀಕ್ಷಿತ ರನ್ ಗಳಿಸಲಿಲ್ಲ. ಭಾರತದ ನಾಯಕ ಹಾರ್ದಿಕ್ ಪಾಂಡ್ಯ ಅವರು ನಾಲ್ಕು ವಿಕೆಟ್ ಗಳಿಸಿದರು.