ಆನಂದಗೌಡರಿಂದ ಕುಟುಂಬಕ್ಕೆ ಧನಸಹಾಯ
ದೇವರಹಿಪ್ಪರಗಿ :
ತಾಲೂಕಿನ ಕಡ್ಲೆವಾಡ ಗ್ರಾಮದ ಸಾಹೇಬಣ್ಣ ಮಾದರ(35) ಕಳೆದ ವಾರ ಪುನಾ ಪಟ್ಟಣದಲ್ಲಿ ಕೆಲಸ ಮಾಡಿ ಮನೆಗೆ ಬರುವಾಗ ಕಾಲು ಜಾರಿ ಬಿದ್ದು ಅಕಾಲಿಕ ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಎಬಿಡಿ ಫೌಂಡೇಶನ್ ಮುಖ್ಯಸ್ಥರಾದ ಆನಂದಗೌಡ ದೊಡ್ಡಮನಿ ಸುದ್ದಿ ತಿಳಿದು ಗ್ರಾಮಕ್ಕೆ ಭೇಟಿ ನೀಡಿ ಕಾರ್ಮಿಕನ ಕುಟುಂಬಕ್ಕೆ ವೈಯಕ್ತಿಕ ಧನಸಹಾಯದ ಜೋತೆ ಸಾಂತ್ವಾನ ಹೇಳಿ ಧೈರ್ಯ ತುಂಬುವ ಕೆಲಸ ಮಾಡಿದರು.
ಕಳೆದ ಏಳು ವರ್ಷಗಳಿಂದ ಕಡ್ಲೆವಾಡ ಗ್ರಾಮದ ಕಡು ಬಡ ಕುಟುಂಬದ ಸಾಹೇಬಣ್ಣ ಮಾದರ ಅವರು ಪುನಾ ಪಟ್ಟಣದಲ್ಲಿ ಕೆಲಸ ನಿರ್ವಹಿಸುತ್ತಿದ್ದರು, ಅವರ ಧರ್ಮ ಪತ್ನಿ ಅಂಗವಿಕಲರಾಗಿದ್ದು ಕುಟುಂಬ ನಿರ್ವಹಣೆಗೆ ದುಡಿಮೆಯ ಆಧಾರ ಸ್ಥಂಭವಾಗಿತ್ತು. ಕಡ್ಲೆವಾಡ ಗ್ರಾಮದಲ್ಲಿ ಮೃತನ ಪತ್ನಿ ಕಲಾವತಿ ಸಾಹೇಬಣ್ಣ ಮಾದರ ಕುಟುಂಬದವರನ್ನು ಆನಂದಗೌಡ ದೊಡ್ಡಮನಿ ಅವರು ಭೇಟಿ ನೀಡಿ ಧನಸಹಾಯ ಮಾಡಿ ಸಾಂತ್ವನದ ಜೊತೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು.
ಡಿಎಸ್ಎಸ್ ಉತ್ತರ ಕರ್ನಾಟಕದ ಅಧ್ಯಕ್ಷರಾದ ರಾವುತ್ ತಳಕೇರಿ ಮಾತನಾಡಿ ಅಕಾಲಿಕ ನಿಧನರಾದ ಕುಟುಂಬದವರನ್ನು ಭೇಟಿಕೊಟ್ಟು ಆ ಕುಟುಂಬಗಳಿಗೆ ಧೈರ್ಯ ತುಂಬುವ ಕೆಲಸ ಮಾಡಿದ ಆನಂದಗೌಡರ ಸಾಮಾಜಿಕ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಸಾಯಿಕುಮಾರ ಬಿಸನಾಳ, ಮುಖಂಡರುಗಳಾದ ವಿಜಯಕುಮಾರ ತಳವಾರ, ರವಿಕುಮಾರ್ ಹಯ್ಯಾಳ, ಭೀಮಣ್ಣ ಗುಡ್ಡಳ್ಳಿ, ಅರ್ಜುನ ಮಾದರ, ಪರಶುರಾಮ ಮಾದರ, ಶರಣಬಸು ಮಣೂರ, ವಿಜಯಕುಮಾರ ಪಡಸಲಗಿ, ಪ್ರಶಾಂತ ವಾಡೆದ ಸೇರಿದಂತೆ ಗ್ರಾಮದ ಪ್ರಮುಖರು ಕುಟುಂಬಸ್ಥರು ಉಪಸ್ಥಿತರಿದ್ದರು.