ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ವಿರಾಟ್ ಕೊಹ್ಲಿ

ಯುವ ಭಾರತ ಸುದ್ದಿ ನವದೆಹಲಿ:
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿವೇಗದ 25,000 ರನ್ ಗಳಿಸಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರ ದಾಖಲೆ ಮುರಿದು ವಿರಾಟ್ ಕೊಹ್ಲಿ ಭಾನುವಾರ ಇತಿಹಾಸ ಬರೆದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ದೆಹಲಿಯಲ್ಲಿ ಎರಡನೇ ಟೆಸ್ಟ್‌ನ 3ನೇ ದಿನವಾದ ಭಾನುವಾರ ಈ ಸಾಧನೆ ಮಾಡಿದ್ದಾರೆ. ಸಚಿನ್ 577 ಪಂದ್ಯಗಳಲ್ಲಿ 25,000 ರನ್ ಗಳಿಸಿದ್ದರು, ವಿರಾಟ್ 549 ಪಂದ್ಯಗಳಲ್ಲಿ ಇದನ್ನು ತಲುಪಿದ್ದಾರೆ.
ವಿರಾಟ್ ಮತ್ತು ಸಚಿನ್ ನಂತರ ಈ ಪಟ್ಟಿಯಲ್ಲಿ ರಿಕಿ ಪಾಂಟಿಂಗ್ (588) ಜಾಕ್ವೆಸ್ ಕಾಲಿಸ್ (594), ಕುಮಾರ ಸಂಗಕ್ಕಾರ (608) ಮತ್ತು ಮಹೇಲಾ ಜಯವರ್ಧನೆ (701) ಈ ಸಾಧನೆ ಮಾಡಿದ್ದಾರೆ.
ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಬೇಗನೆ ನಿರ್ಗಮಿಸಿದ ನಂತರ ಕೊಹ್ಲಿ ಭಾನುವಾರ ಕ್ರೀಸ್‌ಗೆ ಬಂದರು. ಆದಾಗ್ಯೂ, ಅವರು 20 ರನ್‌ಗಳಿಸಿ ಔಟಾದರು.
ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಕೇವಲ 113 ರನ್‌ಗಳಿಗೆ ಆಲೌಟ್ ಆಗಿದ್ದರಿಂದ ಭಾರತ ಗೆಲುವಿಗೆ 115 ರನ್ ಗಳಿಸಬೇಕಾಗಿತ್ತು. ಭಾರತ 6 ವಿಕೆಟ್‌ಗಳೊಂದಿಗೆ ಪಂದ್ಯವನ್ನು ಗೆದ್ದುಕೊಂಡಿತು,
YuvaBharataha Latest Kannada News