ನಗೆಗಡಲಲ್ಲಿ ತೇಲಿಸಿದ ಸುಧಾ ಬರಗೂರು : ಸಂಭ್ರಮದಿಂದ ನಡೆಯಿತು ಬೆಂಗಳೂರು ನಗರ ಹಬ್ಬ..
ಯುವ ಭಾರತ ಸುದ್ದಿ ಬೆಂಗಳೂರು:
ಎಸ್. ಪ್ರಸಾದ್ ಶೆಟ್ಟಿಯವರ ನೇತೃತ್ವದಲ್ಲಿ ಆಪಾತ್ಭಾಂಧವ ಚಾರಿಟೆಬಲ್ ಟ್ರಸ್ಟ್ ಮತ್ತು ಕರ್ನಾಟಕ ರಕ್ಷಣಾವೇದಿಕೆಯ ಸಂಯೋಗದೊಂದಿಗೆ ನಿನ್ನೆ ಬೆಂಗಳೂರಿನ ವಿಜಯನಗರದ ಚಂದ್ರಾಬಡಾವಣೆಯಲ್ಲಿ ಬೆಂಗಳೂರು ನಗರ ಹಬ್ಬ -2023 ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜಕೀಯ ಯುವ ಮುಖಂಡ ಅರುಣ್ ಸೋಮಣ್ಣ ವಹಿಸಿದ್ದರು ಜೊತೆಗೆ ಮಾಜಿ ಕಾರ್ಪೊರೇಟರ್ ಉಮೇಶ್ ಶೆಟ್ಟಿಯವರು, ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ, ಮಹೇಂದ್ರ ಮನೋತ್,ರಾಷ್ಟ್ರೀಯ ಬಸವ ಪರಿಷತ್ ನ ಅಧ್ಯಕ್ಷರಾದ ಅರುಣ್ ಕುಮಾರ್, ಚಲಚಿತ್ರ ನಟ ಗಣೇಶ್ ರಾವ್ , ಲಯನ್ಸ್ ಕ್ಲಬ್ ನ ಮನೋಜ್ ಕುಮಾರ್, ಸೈರನ್ ಚಿತ್ರದ ಯುವ ನಾಯಕನಟ ಪ್ರವೀರ್ ಶೆಟ್ಟಿ, ಸಮಾಜಸೇವಕ ವಿಜಯ್ ಸಾರಥಿ, ಹಿರಿಯ ನಟಿ ಜ್ಯೋತಿ ಮರೂರು, ಮಾಡೆಲ್ ಸತೀಶ್, ಚಿತ್ರ ಕಲಾವಿದ ಮಧುಸೂಧನ್ , ನಟಿ ರಚನಾ ಮಲ್ನಾಡ್ ಮತ್ತಿತರು ಭಾಗವಹಿಸಿದ್ದರು.
ಕಾರ್ಯಕ್ರಮದ ಮುಖ್ಯ ಆಕರ್ಷಣೆ ಸುಧಾ ಬರಗೂರು ರವರಿಂದ ನಗೆ ಹಬ್ಬ ಮತ್ತು ಅವರ ತಂಡದಿಂದ ಮ್ಯಾಜಿಕ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಸುಧಾ ಬರಗೂರವರು ಜನರನ್ನು ಸುಮಾರು ಮೂರು ತಾಸುಗಳ ಕಾಲ ನಕ್ಕು ನಗಿಸಿ ಎಲ್ಲರೂ ನಗೆಗಡಲಲ್ಲಿ ತೇಲುವಂತೆ ಮಾಡಿದರು.
ನಂತರ ಕಾರ್ಯಕ್ರಮದ ದೀಪ ಬೆಳಗಿಸಿ ಮಾತನಾಡಿದ
ಶ್ರೀಯುತ ಅರುಣ್ ಸೋಮಣ್ಣನವರು ” ಕನ್ನಡ ನಾಡು ನುಡಿ ಭಾಷೆಯಲ್ಲಿ ಯಾವುದೇ ರಾಜಿಯಿಲ್ಲ, ಕನ್ನಡಿಗರು ಸ್ವಾಭಿಮಾನಿಗಳು, ಇಂತಹ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕನ್ನಡದ ಕಾರ್ಯಕ್ರಮಗಳು ಇನ್ನೂ ಹೆಚ್ಚು ನಡೆಯಬೇಕು, ಪ್ರಸಾದ್ ಶೆಟ್ಟಿಯವರು ಕಳೆದ ಇಪ್ಪತ್ತು ವರ್ಷಗಳಿಂದ ಸತತವಾಗಿ ಈ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ, ಇದು ಎಲ್ಲರಿಗೂ ಮಾದರಿಯಾಗಬೇಕು ,ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬಂದಿದೆ” ಎಂದು ಸಂತಸ ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ಬೆಳಿಗ್ಗೆ ಕನ್ನಡ ಧ್ವಜಾರೋಹಣ, ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ, ಅನ್ನದಾನ ನಡೆಯಿತು.
ಒಟ್ಟಿನಲ್ಲಿ ಬೆಂಗಳೂರು ನಗರ ಹಬ್ಬ ಎಂಬ ಈ ಅದ್ಬುತ ಕಾರ್ಯಕ್ರಮ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯಿತು.