ಗೃಹಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳ
ಯುವ ಭಾರತ ಸುದ್ದಿ ನವದೆಹಲಿ:
ದೇಶೀಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿದೆ. ದೆಹಲಿಯಲ್ಲಿ ಗೃಹಬಳಕೆಯ 14.2 ಕೆಜಿ ಎಲ್‍ಪಿಜಿ ಸಿಲಿಂಡರ್ ಬೆಲೆಯಲ್ಲಿ 50 ರೂ.ಗಳಷ್ಟು ಹೆಚ್ಚಳವಾಗಿದೆ.
ಹೊಸ ದರಗಳು ಇಂದಿನಿಂದ ಜಾರಿಗೆ ಬರಲಿವೆ
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಗೃಹಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆ 1103 ರೂ. ಗಳಾಗಿದ್ದು, ಎಂಟು ತಿಂಗಳ ಬಳಿಕ ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ 50 ರೂ. ಗಳ ಹೆಚ್ಚಳವಾಗಿದೆ. ಇದೇ ವೇಳೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 350.50 ರೂಪಾಯಿ ಏರಿಕೆಯಾಗಿದೆ. ಈ ಹೆಚ್ಚಳದೊಂದಿಗೆ 19 ಕೆಜಿ ವಾಣಿಜ್ಯ ಸಿಲಿಂಡರ್ ದೆಹಲಿಯಲ್ಲಿ 2,119.50 ರೂ. ಗಳಾಗಿದೆ.
ಪ್ರಸ್ತುತ ಮಾರುಕಟ್ಟೆಯ ಸನ್ನಿವೇಶದಲ್ಲಿ ಏರುತ್ತಿರುವ ಇಂಧನ ಬೆಲೆಗಳ ಹೊರೆಯನ್ನು ಭರಿಸಬೇಕಾಗಿರುವುದರಿಂದ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳ ಹೆಚ್ಚಳವು ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುತ್ತದೆ.
ಭಾರತದಲ್ಲಿ LPG ಬೆಲೆಯನ್ನು ಸರ್ಕಾರಿ-ಚಾಲಿತ ತೈಲ ಕಂಪನಿಗಳು ನಿರ್ಧರಿಸುತ್ತವೆ ಮತ್ತು ಮಾಸಿಕ ಆಧಾರದ ಮೇಲೆ ಪರಿಷ್ಕರಿಸಲಾಗುತ್ತದೆ.
ಗೃಹ ಬಳಕೆ ಸಿಲಿಂಡರ್‌ಗಳ ದರದ ವಿವರಗಳು ಇಲ್ಲಿವೆ-
ನವದೆಹಲಿ- 1,103.00 ರೂ., ಕೋಲ್ಕತ್ತಾ- 1,079.00 ರೂ., ಮುಂಬೈ- 1,052.50 ರೂ., ಚೆನ್ನೈ- ರೂ 1,068.50, ಬೆಂಗಳೂರು 1,055.00 ರೂ., ಗುರ್ಗಾಂವ್- 1,061.50 ರೂ., ನೋಯ್ಡಾ- 1,050.50 ರೂ., ಭುವನೇಶ್ವರ್- 1,079.00 ರು., ಚಂಡೀಗಢ 1,112.50 ರೂ., ಹೈದರಾಬಾದ್- 1,105.00 ರೂ., ಜೈಪುರ 1,056.50 ರೂ., ಲಕ್ನೋ- 1,090.50 ರೂ., ಪಾಟ್ನಾ- 1,201.00 ರೂ., ತಿರುವನಂತಪುರ-1,062 ರೂ.ಗಳಾಗಿವೆ.