Breaking News

ಗೋಕಾಕನಲ್ಲಿ “ವಿಜಯ ಸಂಕಲ್ಪ ಯಾತ್ರೆ” ರವಿವಾರ ದಿ,5ರಂದು

Spread the love

 

ಗೋಕಾಕನಲ್ಲಿ “ವಿಜಯ ಸಂಕಲ್ಪ ಯಾತ್ರೆ” ರವಿವಾರ ದಿ,5ರಂದು

ಯುವ ಭಾರತ ಸುದ್ದಿ ಗೋಕಾಕ: ವಿಜಯ ಸಂಕಲ್ಪ ಯಾತ್ರೆ ನಿಮಿತ್ಯ ಮಾ.೦5ರಂದು ನಗರದ ಕೊಳವಿ ಹನುಮಾನ ದೇವಸ್ಥಾನದಿಂದ ಬಸವೇಶ್ವರ ವೃತ್ತದ ವರೆಗೆ ಬೃಹತ್ ರೋಡ ಶೋ ಜರುಲಿದೆ ಎಂದು ಬಿಜೆಪಿ ನಗರ ಅಧ್ಯಕ್ಷ ಭೀಮಶಿ ಭರಮನ್ನವರ ಹಾಗೂ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ತಿಳಿಸಿದ್ದಾರೆ.

ಗೋಕಾಕ ಬಿಜೆಪಿ ನಗರ ಅಧ್ಯಕ್ಷ ಭೀಮಶಿ ಭರಮನ್ನವರ ಹಾಗೂ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ

ಶುಕ್ರವಾರದಂದು ಜಂಟಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಜಯ ಸಂಕಲ್ಪ ಯಾತ್ರೆ ಬೃಹತ್ ರೋಡ ಶೋ ಕಾರ್ಯಕ್ರಮ ಶಾಸಕ ರಮೇಶ ಜಾರಕಿಹೊಳಿ ಅವರ ನೇತ್ರತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಚಿವರುಗಳಾದ ಬಿ ಎಸ್ ಪಾಟೀಲ, ಮುರಗೇಶ ನಿರಾಣಿ, ಭೈರತಿ ಬಸವರಾಜು, ಶಿವರಾಮ ಹೆಬ್ಬಾರ, ಶಶಿಕಲಾ ಜೊಲ್ಲೆ, ಮಾಜಿ ಸಚಿವ ಲಕ್ಷö್ಮಣ ಸವದಿ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಪಿ ರಾಜೀವ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಭಾಗವಹಿಸಲಿದ್ದಾರೆ.

ರವಿವಾರ ದಿ.5ರಂದು ಬೆಳಿಗ್ಗೆ 11ಗಂಟೆಗೆ ಕೊಳವಿ ಹನುಮಾನ ದೇವಸ್ಥಾನ, ಸಂಗೋಳ್ಳಿ ರಾಯಣ್ಣ ವೃತ್ತ, ಬಸ್ಸು ನಿಲ್ದಾಣ ಮಾರ್ಗವಾಗಿ ಬಸವೇಶ್ವರ ವೃತ್ತ (ಕೋರ್ಟ ಸರ್ಕಲ್)ವರೆಗೆ ಬೃಹತ್ ರೋಡ ಶೋ ಕಾರ್ಯಕ್ರಮ ನಡೆಯಲಿದೆ. ಸರಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸಿ, ಮುಂಬರುವ ಚುನಾವಣೆಯಲ್ಲಿ ವಿಜಯ ಸಾಧಿಸುವ ನಿಟ್ಟಿನಲ್ಲಿ ವಿಜಯ ಸಂಕಲ್ಪ ಯಾತ್ರೆ ಬೃಹತ್ ರೋಡ ಶೋ ಹಮ್ಮಿಕೊಳ್ಳಲಾಗಿದ್ದು, ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.


Spread the love

About Yuva Bharatha

Check Also

11ಕೆ.ವ್ಹಿ ಭೂಗತ ವಿದ್ಯುತ್ ವಿತರಣಾ ಮಾರ್ಗ ಕಾಮಗಾರಿಗೆ ಚಾಲನೆ-ಶಾಸಕ ರಮೇಶ ಜಾರಕಿಹೊಳಿ!

Spread the love11ಕೆ.ವ್ಹಿ ಭೂಗತ ವಿದ್ಯುತ್ ವಿತರಣಾ ಮಾರ್ಗ ಕಾಮಗಾರಿಗೆ ಚಾಲನೆ-ಶಾಸಕ ರಮೇಶ ಜಾರಕಿಹೊಳಿ! ಗೋಕಾಕ: ನಗರದ ಡಾರ‍್ಸ್ ಕಾಲನಿ …

Leave a Reply

Your email address will not be published. Required fields are marked *

two × five =