ಖಾನಾಪುರದಲ್ಲಿ ಸಂಭ್ರಮಕ್ಕೆ ಸಾಕ್ಷಿಯಾಯ್ತು ಮಹಿಳೆಯರ ಹೋಳಿ !

ಯುವ ಭಾರತ ಸುದ್ದಿ ಖಾನಾಪುರ :
ಖಾನಾಪುರದ ಯುವತಿಯರು ಮತ್ತು ಮಹಿಳೆಯರೊಂದಿಗೆ ಬಿಜೆಪಿ ನಾಯಕಿ ಡಾ. ಸೋನಾಲಿ ಸರ್ನೋಬತ್ ಅವರು ಹೋಳಿ ಹಬ್ಬ ಆಚರಿಸಿದರು.
ಡ್ಯಾನ್ಸ್, ಸಾಂಪ್ರದಾಯಿಕ ನೃತ್ಯಗಳು, ಆಹಾರೋತ್ಸವ ಹಾಗೂ ಡಿಜೆ ಪ್ರಮುಖ ಆಕರ್ಷಣೆಯಾಗಿದ್ದವು.
ಡಾ. ಸೋನಾಲಿ ಸರ್ನೋಬತ್ ಮಹಿಳೆಯರೊಂದಿಗೆ ಹೋಳಿ ಆಡಿ ಸಂಭ್ರಮಿಸಿದರು.
ಸಹಸ್ರಾರು ಮಹಿಳೆಯರು ವಿವಿಧ ಬಣ್ಣಗಳನ್ನು ಹಚ್ಚಿಕೊಂಡು ಹೋಳಿ ಹಬ್ಬದ ಸಂಭ್ರಮ ಹಂಚಿಕೊಂಡರು.

ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ನಡೆದ ಇಂತಹ ಅಭೂತಪೂರ್ವ ಕಾರ್ಯಕ್ರಮಕ್ಕೆ ಮಹಿಳೆಯರು ಭಾರೀ ಸಂಖ್ಯೆಯಲ್ಲಿ ಸಾಕ್ಷಿಯಾಗಿ ಕಾರ್ಯಕ್ರಮಕ್ಕೆ ಹುರುಪು ತಂದರು. ಒಟ್ಟಾರೆ ಈ ಬಾರಿಯ ಹೋಳಿ ಹಬ್ಬ ಖಾನಾಪುರ ತಾಲೂಕಿನ ಮಹಿಳೆಯರ ಸಂಭ್ರಮವನ್ನು ಇಮ್ಮಡಿಗೊಳಿಸಿತು.
YuvaBharataha Latest Kannada News