Breaking News

ಅಮರ ಮಧುರ..ಅಮರನಾಥ||ಚಾಣಕ್ಯನಿವ.. ಕರದಂಟಿನಷ್ಟೇ ರುಚಿಕರನಿವ…!!

Spread the love

ಅಮರ ಮಧುರ..ಅಮರನಾಥ…!

ಚಾಣಕ್ಯನಿವ.. ಕರದಂಟಿನಷ್ಟೇ ರುಚಿಕರನಿವ…!

 

ಸತೀಶ ಮನ್ನಿಕೇರಿ

ಯುವ ಭಾರತ ಸುದ್ದಿ ಗೋಕಾಕ :  ಬೆಳೆವ ಸಿರಿ ಮೊಳಕೆಯಲ್ಲಿ ಎಂಬಂತೆ ಪರೋಪಕಾರ, ಮಾನವೀಯತೆ, ಔದಾರ್ಯತೆ, ಸ್ನೇಹಶೀಲ ಮನಸ್ಸು, ಕಠಿಣ ಪರಿಶ್ರಮ, ಅಚ್ಚುಕಟ್ಟುತನ, ಸಂಘಟನೆ ಮುಂತಾದ ಗುಣಗಳನ್ನು ಅಳವಡಿಸಿಕೊಂಡಿರುವ ಸಹನಾಶೀಲ ಮನಸ್ಸುಳ್ಳವರೇ ಯುವ ನಾಯಕ ಬೆಳಗಾವಿ ಜಿಲ್ಲೆಯ ಭವಿಷ್ಯದ ಆಶಾಕಿರಣ ಅಮರನಾಥ ಜಾರಕಿಹೊಳಿ. ಅವರು ಈಗಾಗಲೇ ತಮ್ಮ ಜನಪರ ಕೆಲಸ ಕಾರ್ಯಗಳಿಂದ ಚಾಣಕ್ಯ ಎಂದೇ ಗುರುತಿಸಿಕೊಂಡಿದ್ದಾರೆ.

ತಂದೆ ರಮೇಶ ಜಾರಕಿಹೊಳಿ ಅವರ ರಾಜಕೀಯ ಚತುರತೆ, ಮಾವ ಅಂಬಿರಾವ್ ಪಾಟೀಲ ಅವರ ನೈಪುಣ್ಯತೆ, ಚಿಕ್ಕಪ್ಪ ಬಾಲಚಂದ್ರ ಜಾರಕಿಹೊಳಿಯವರ ಕಾರ್ಯಕ್ಷಮತೆಯನ್ನು ಚಾಚು ತಪ್ಪದೇ ಅಳವಡಿಸಿಕೊಂಡಿರುವ ಅಮರನಾಥ ಜಾರಕಿಹೊಳಿಯವರು ಹಿಡಿದ ಕೆಲಸವನ್ನು ಪೂರ್ಣಗೊಳಿಸದೆ ಬಿಡದ ಛಲದಂಕ ಮಲ್ಲರು. ರಾಜಕೀಯ ಮನೆತನದಿಂದ ಬಂದ ಅವರು ಜನರ ಮನಸ್ಸಿನಲ್ಲಿದೆ ಎನ್ನುವುದನ್ನು ಅವರನ್ನು ನೋಡಿದ ತಕ್ಷಣ ಅರಿತು ಸ್ಪಂದಿಸುವ ಹೃದಯವಂತ ಮನಸ್ಸುಳ್ಳವರಾಗಿದ್ದಾರೆ.
ಅಮರನಾಥ ಜಾರಕಿಹೊಳಿಯವರು ಗೋಕಾಕ ಮತಕ್ದೂರು-ದುಃಖಯಂತ ಈಗಾಗಲೇ ಪರಿಚಿತರಾಗಿದ್ದಾರೆ. ತಂದೆ ರಮೇಶ ಜಾರಕಿಹೊಳಿಯವರ ಚುನಾವಣಾ ಕಾರ್ಯತಂತ್ರ ಹೆಣೆಯುವುದರಲ್ಲಿ ಅಮರನಾಥ ಸಿದ್ಧಹಸ್ತರು. ಅವರ ಗೆಲುವು ಗೋಕಾಕ ಮತಕ್ಷೇತ್ರದಲ್ಲಿ ಕಠಿಣವೇನಲ್ಲ. ಆದರೆ ಮುಖ್ಯ ಪ್ರಶ್ನೆ ಎಂದರೆ ಇಲ್ಲಿ ಅತಿ ಹೆಚ್ಚು ಅಂತರದಿಂದ ಗೆಲುವು ಸಾಧಿಸುವುದು ಹೇಗೆ ಎಂಬ ಪ್ರಶ್ನೆ ಮೂಡುತ್ತದೆ. ಆ ನಿಟ್ಟಿನಲ್ಲಿ ಪ್ರತಿ ಬಾರಿಯೂ ದಾಖಲೆ ಅಂತರದಲ್ಲಿ ರಮೇಶ ಜಾರಕಿಹೊಳಿ ಅವರಿಗೆ ಮತ ತರುವ ನಿಟ್ಟಿನಲ್ಲಿ ಅಮರನಾಥ ಜಾರಕಿಹೊಳಿಯವರು ತಂತ್ರ ಹೆಣೆಯುತ್ತಾರೆ. ಯಾವ ಭಾಗದಲ್ಲಿ ಯಾವ ಸಮುದಾಯದವರು ಹೆಚ್ಚು ಇದ್ದಾರೆ,  ಅವರ ಪ್ರಮುಖ ಬೇಡಿಕೆಗಳೇನು ? ಎನ್ನುವುದನ್ನು ಸಂಪೂರ್ಣವಾಗಿ ಕೇಳಿ ತಿಳಿದುಕೊಳ್ಳುವ ಹಾಗೂ ತಾಳ್ಮೆಯಿಂದ ಆಲಿಸುವ ಗುಣ ಅಮರನಾಥ ಅವರಿಗೆ ಇದೆ. ಜನತೆ ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರ ಮನ ಗೆಲ್ಲುತ್ತಾರೆ. ರಾಜಕೀಯ, ಕೃಷಿ, ಸಮಾಜ ಸೇವೆ ಮುಂತಾದ ಎಲ್ಲಾ ಕ್ಷೇತ್ರಗಳಲ್ಲೂ ಕೆಲಸ ಮಾಡಿರುವ ಅಮರನಾಥ ಜಾರಕಿಹೊಳಿಯವರು ಬಿಜೆಪಿ ಸಂಘಟನೆಯನ್ನು ಎರಡು ವರ್ಷಗಳಿಂದ ಭದ್ರವಾಗಿ ಕಟ್ಟಿ ಪಕ್ಷಕ್ಕೆ ಬಲತಂದು ಕೊಟ್ಟಿದ್ದಾರೆ.
ಇಡೀ ಕ್ಷೇತ್ರಾದ್ಯಂತ ಓಡಾಡಿ ಜನರನ್ನು ತಲುಪಿ ಅವರ ಪ್ರೀತಿ ಗಳಿಸುವುದು ಅಮರನಾಥ ಅವರಿಗೆ ಅತ್ಯಂತ ಅಚ್ಚುಮೆಚ್ಚು. ಹೀಗಾಗಿ ಜನ ಅವರನ್ನು ಬಹುವಾಗಿ ಹಚ್ಚಿಕೊಳ್ಳುತ್ತಾರೆ. ತಮ್ಮ ಮನೆಯ ಮಗ ಎಂಬಂತೆ ಎಲ್ಲರೂ ಎಲ್ಲರೂ ಅವರನ್ನು ತಮ್ಮವನಾಗಿಸಿಕೊಳ್ಳುತ್ತಾರೆ. ಜೊತೆಗೆ ತಮ್ಮ ದೂರು-ದುಃಖ ದುಮ್ಮಾನ ಹೇಳಿಕೊಂಡು ದೂರದ ಊರುಗಳಿಂದ ಬರುವ ಜನರಿಗೆ ಅಮರನಾಥ ಜಾರಕಿಹೊಳಿಯವರ ಪರಿಹಾರ ನೀಡದೇ ಕಳಿಸುವುದೇ ಇಲ್ಲ. ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಜತೆಗೆ ಅಧಿಕಾರಿಗಳಿಗೆ ಆ ಬಗ್ಗೆ ಮನವರಿಕೆ ಮಾಡಿಕೊಟ್ಟು ಸಮಸ್ಯೆ ನಿವಾರಣೆಗೆ ಶ್ರಮಿಸುತ್ತಾರೆ.ನಿಷ್ಕಲ್ಮಷ ಮನಸ್ಸಿನ ಅಮರನಾಥ ಅವರು ಮಾತಿಗಿಂತ ಕೆಲಸದಲ್ಲೇ ಹೆಚ್ಚು ನಂಬಿಕೆ ಉಳ್ಳವರು. ಈ ನಿಟ್ಟಿನಲ್ಲಿ ಅವರು ಪಾದರಸದಂತೆ ಚುರುಕಿನಿಂದ ಓಡಾಡಿ ಸದಾ ಕ್ರಿಯಾಶೀಲರಾಗಿ ಜನತೆಯ ಪಾಲಿನ ಭವಿಷ್ಯದ ಆಶಾಕಿರಣರಾಗಿ ಗೋಚರಿಸುತ್ತಿದ್ದಾರೆ.

ಮಾವನ ಹಾದಿಯಲಿ ಪ್ರೀತಿಯ ಅಳಿಯ..!

ಅಮರನಾಥ ಜಾರಕಿಹೊಳಿ ಅವರು ತಮ್ಮ ಪ್ರೀತಿಯ ಮಾವ ಅಂಬಿರಾವ್ ಪಾಟೀಲ ಹಾಕಿದ ಗೆರೆ ದಾಟುವಲ್ಲ. ಅವರು ಏನು ಹೇಳುತ್ತಾರೋ ಅದನ್ನು ಚಾಚು ತಪ್ಪದೇ ಶಿರಸಾ ವಹಿಸಿ ಮಾಡಿ ಮುಗಿಸುವವರು. ವಿಧಾನಸಭಾ ಚುನಾವಣೆಗೆ ರಮೇಶ ಜಾರಕಿಹೊಳಿ ಅವರಿಗೆ ಹಾಗೂ ವಿಧಾನಪರಿಷತ್ ಚುನಾವಣೆಗೆ ಲಖನ್ ಜಾರಕಿಹೊಳಿ ಅವರಿಗೆ  ಮೊದಲಿನಿಂದಲೂ ಶಕ್ತಿಯಾಗಿ ನಿಂತವರು ಅಂಬಿರಾವ್. ಇವರು ಜಾರಕಿಹೊಳಿ ಸಹೋದರರಿಗೆ ಯಾವ ರೀತಿಯಲ್ಲಿ ಹೆಗಲಿಗೆ ಹೆಗಲುಕೊಟ್ಟು ಅವರ ಗೆಲುವಿನಲ್ಲಿ ಪರೋಕ್ಷವಾಗಿ ಶ್ರಮಿಸುತ್ತಿದ್ದರೋ ಅದೇ ಮಾದರಿಯಲ್ಲೀಗ ಪ್ರತಿಯೊಂದು ಕೆಲಸ ಕಾರ್ಯಗಳಲ್ಲೂ ಮಾವ ಅಂಬಿರಾವ್ ಅವರ ಕೆಲಸ ಕಾರ್ಯಗಳಲ್ಲಿ ಅಮರನಾಥ ಜಾರಕಿಹೊಳಿ ಸಕ್ರಿಯವಾಗಿ ಭಾಗಿಯಾಗುತ್ತಿದ್ದಾರೆ.

ಅಂಬಿರಾವ್ ಪಾಟೀಲ ಅವರ ಅಪಾರ ಅನುಭವವನ್ನು ಬಳಸಿಕೊಂಡು ಆ ಹಾದಿಯಲ್ಲಿ ಅಮರನಾಥ ಸಾಗುತ್ತಿದ್ದಾರೆ. ಮಾವ-ಅಳಿಯನ ಜೋಡಿ ಇದೀಗ ಗೋಕಾಕ ತಾಲೂಕಿನಲ್ಲಿ ಮನೆಮಾತಾಗಿದೆ. ಸಮಾಜ ಸೇವೆ, ಸಹಕಾರರಂಗ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಇದೀಗ ಇಬ್ಬರು ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ. ಪರಸ್ಪರ ಹೊಂದಾಣಿಕೆ, ಜವಾಬ್ದಾರಿ ಹಾಗೂ ಅಚ್ಚುಕಟ್ಟುತನದ ಕೆಲಸ ಕಾರ್ಯಗಳಿಂದಾಗಿ ಇವರ ಎಲ್ಲಾ ಕೆಲಸ ಕಾರ್ಯಗಳು ಸುಗಮವಾಗುತ್ತಿವೆ. ಅಂಬಿರಾವ್ ಅವರ ಮಾರ್ಗದರ್ಶನದಲ್ಲಿ ಅಮರನಾಥ ಭವಿಷ್ಯದಲ್ಲಿ ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಉತ್ತುಂಗದ ಸಾಧನೆ ಮಾಡಿ ಕೀರ್ತಿಗಳಿಸುವುದರಲ್ಲಿ ಯಾವ ಸಂದೇಹವು ಇಲ್ಲ ಎಂಬ ಲಕ್ಷಣಗಳು ಅವರ ನಾಯಕತ್ವದಿಂದ ಕಂಡುಬರುತ್ತವೆ. ಒಟ್ಟಾರೆ ರಮೇಶ ಜಾರಕಿಹೊಳಿಯವರ ಹೆಮ್ಮೆಯ ಸುಪುತ್ರ ಅಮರನಾಥ ಜಾರಕಿಹೊಳಿಯವರ ವ್ಯಕ್ತಿತ್ವ ಗೋಕಾಕ ತಾಲೂಕಿನಲ್ಲಿ ಎದ್ದು ಕಾಣುತ್ತಿದೆ.

Spread the love

About Yuva Bharatha

Check Also

ಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಕೆ.!

Spread the loveಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ …

Leave a Reply

Your email address will not be published. Required fields are marked *

19 + three =