ಕಣಬರಗಿ ಚೆಕ್ ಪೋಸ್ಟ್: 1.77 ಲಕ್ಷ ರೂಪಾಯಿ ನಗದು ಜಪ್ತಿ

ಯುವ ಭಾರತ ಸುದ್ದಿ ಬೆಳಗಾವಿ :
ಇಲ್ಲಿನ ಕಣಬರಗಿ ಚೆಕ್ ಪೋಸ್ಟ್ ನಲ್ಲಿ ಫ್ಲೈಯಿಂಗ್ ಸ್ಕ್ವಾಡ್ ತಂಡವು ಭಾನುವಾರ 1.77 ಲಕ್ಷ ರೂಪಾಯಿ ಜಪ್ತಿ ಮಾಡಿಕೊಂಡಿರುತ್ತದೆ.
ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣಾ ಸಂದರ್ಭದಲ್ಲಿ ನಗದು ಪತ್ತೆಯಾಗಿರುತ್ತದೆ. ಸದರಿ ಹಣವನ್ನು ಜಿಲ್ಲಾ ಖಜಾನೆಯಲ್ಲಿ ಜಮೆ ಮಾಡಲಾಗಿದ್ದು, ಪಂಚಾಯತ ಮುಖ್ಯ ಕಾರ್ಯನಿರ್ವಾಹಕರು ಅಧ್ಯಕ್ಷರಾಗಿರುವ ತ್ರಿಸದಸ್ಯ ಸಮಿತಿಗೆ ಪ್ರಕರಣವನ್ನು ವರ್ಗಾಯಿಸಲಾಗಿರುತ್ತದೆ.
ಚುನಾವಣಾಧಿಕಾರಿ ಅಕ್ರಮ್ ಇಂಫಾಲ್, ಮಾಳಮಾರುತಿ ಪೊಲೀಸ್ ಠಾಣೆಯ ಸಿಪಿಐ, ಎಫ.ಎಸ್.ಟಿ. ತಂಡದ ಮುಖ್ಯಸ್ಥ ಪ್ರವೀಣ ಕೊರಬು ಉಪಸ್ಥಿತರಿದ್ದರು.
YuvaBharataha Latest Kannada News