Breaking News

ಬೆಳಗಾವಿಯಲ್ಲಿ ಶ್ರೀ ಯೋಗಿ ನಾರಾಯಣ ಯತೀಂದ್ರರ (ಕೈವಾರ ತಾತಯ್ಯ )ಜಯಂತಿ ಶಿಕ್ಷಣದಿಂದ ಉತ್ತಮ ಭವಿಷ್ಯ: ಶಾಸಕ ಅನಿಲ ಬೆನಕೆ

Spread the love

ಬೆಳಗಾವಿಯಲ್ಲಿ ಶ್ರೀ ಯೋಗಿ ನಾರಾಯಣ ಯತೀಂದ್ರರ (ಕೈವಾರ ತಾತಯ್ಯ )ಜಯಂತಿ
ಶಿಕ್ಷಣದಿಂದ ಉತ್ತಮ ಭವಿಷ್ಯ: ಶಾಸಕ ಅನಿಲ ಬೆನ

ಬೆಳಗಾವಿ :
ಸಮಾಜದಲ್ಲಿ ಮೀಸಲಾತಿ ಎಲ್ಲ ಸಮುದಾಯಾಗಳಿಗೆ ಸಿಗಬೇಕು, ಬಡವರ ಅಭಿವೃದ್ಧಿ ಆಗಬೇಕಾದರೆ ಸಮಾಜದಲ್ಲಿನ ಎಲ್ಲ ಸಮುದಾಯದ ಜನರಿಗೆ ಶಿಕ್ಷಣ ಸಿಗಬೇಕು. ಶಿಕ್ಷಣದಿಂದ ಮಾತ್ರ ಉನ್ನತ ಸ್ಥಾನ ಗಳನ್ನ ಪಡೆಯಲು ಸಾಧ್ಯ” ಎಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಅನಿಲ ಬೆನಕೆ ಅವರು ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನರ ಪಾಲಿಕೆಯ ವತಿಯಿಂದ ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಭಾನುವಾರ (ಮಾ.19) ರಂದು ಏರ್ಪಡಿಸಲಾಗಿದ್ದ ಶ್ರೀ ಯೋಗಿ ನಾರಾಯಣ ಯತೀಂದ್ರರ (ಕೈವಾರ ತಾತಯ್ಯ ) ಅವರ ಜಯಂತಿ ಕಾರ್ಯಕ್ರಮನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತಮ ಶಿಕ್ಷಣ ಪಡೆದರೆ ನೀವು ಮಾಡುವ ಯಾವುದೇ ವೃತ್ತಿಯಲ್ಲಿಯೂ ಕೂಡ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಸರಕಾರದಿಂದ ಎಲ್ಲ ಸಮುದಾಯಗಳಿಗೆ ವಿವಿಧ ಯೋಜನೆಯಡಿಯಲ್ಲಿ ಅನುದಾನಗಳು ಇರುತ್ತವೆ. ಅವು ಗಳನ್ನು ತಿಳಿದುಕೊಂಡು ಅವುಗಳ ಸದಪಯೋಗ ಪಡೆದುಕೊಂಡು ನೀವು ಉತ್ತಮ ಜೀವನ ಕಟ್ಟಿಕೊಳ್ಳಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿತಾದ ಕೆ ಟಿ. ಶಾಂತಲಾ ಅವರು, ಶ್ರೀ ಯೋಗಿ ನಾರಾಯಣ ಅವರು ಜನರಿಗೆ ಅವರದೇ ಆದ ಶೈಲಿಯಲ್ಲಿ ಜಾಗೃತಿ ಮೂಡಿಸುವುದರ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಿದರು. ಅವರು ಕೇವಲ ಒಂದೇ ಸಮುದಾಯಕ್ಕೆ ಸೀಮಿತವಾಗಿರದೆ ಸಮಾಜದ ಸಮಗ್ರ ಅಭಿವೃದ್ಧಿ ಬಯಸಿದವರು ಎಂದು ಹೇಳಿದರು

ಶ್ರೀ ಯೋಗಿ ನಾರಾಯಣ ಅವರು ವಚನಗಳ ಮೂಲಕ ಸರಳ ರೀತಿಯಲ್ಲಿ ಅವರ ವಿಚಾರ ಮತ್ತು ತತ್ವಾದರ್ಶಗಳನ್ನು ಎಲ್ಲರಿಗೂ ಮನ ಮುಟ್ಟುವಂತೆ ತಿಳಿಸಿದವರು. ಹಾಗೇ ನಾವು ಕೂಡಾ ಅವರ ಇತಿಹಾಸ ಅವರ ವಚನ ಸಂದೇಶ, ಬೋಧನೆ ಹಾಗೂ ಅವರ ತತ್ವವಾದರ್ಶಗಳನ್ನು ತಿಳಿದುಕೊಂಡು ನಮ್ಮ ಜೀವನದಲ್ಲಿ ಅಳಡಿಸಿಕೊಳ್ಳೋಣ ಎಂದು ಕೆ ಟಿ. ಶಾಂತಲಾ ಅವರು ಹೇಳಿದರು.

ಶ್ರೀ ಯೋಗಿ ನಾರಾಯಣ ಅವರು ದಾರ್ಶನಿಕರ ಸಾಲಿಗೆ ಸೇರಿದವರು ಹೀಗಾಗಿ ಅವರ ಎಲ್ಲ ಬೋಧನೆಗಳು ಉಪನಿಷತ್, ರಾಮಾಯಣ ಮತ್ತು ಮಹಾಭಾರತಗಳನ್ನು ಆಧರಿಸಿವೆ ಎಂದು ವಿಶೇಷ ಉಪನ್ಯಾಸಕರಾದ ಪೂಜಾ ಮಾ. ತೇಲಂಗಾ ಅವರು ಅಭಿಪ್ರಾಯಪಟ್ಟರು.

ಅವರು ಭಕ್ತಿ ಭಾವದ ಮೂಲಕ ಧ್ಯಾನ ಮಾರ್ಗದ ಮೂಲಕ ಜನಮಾನಸದಲ್ಲಿ ಭಕ್ತಿಭಾವ ಬಿತ್ತುವಂತೆ ಭಕ್ತಿಗೀತೆಗಳನ್ನು ರಚಿಸಿದರು. ಹೀಗೇ ಅವರದೇ ಆದ ಶೈಲಿಯಲ್ಲಿ ಸಮಾಜಕ್ಕೆ ಸಂದೇಶ ಬೋಧನೆಗಳನ್ನು ನೀಡಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಬಲಿಜ ಸಮುದಾಯದ ಉಪಾಧ್ಯಕ್ಷರಾದ ಸತೀಶ ಗುಡಮೆಟ್, ಸಮುದಾಯ ಜನರು ಬಹಳಷ್ಟು ಕ್ಷೇತ್ರಗಳಲ್ಲಿ ಹಿಂದೆ ಉಳಿದಿದ್ದಾರೆ ಆದ್ದರಿಂದ ಬಲಿಜ ಸಮುದಾಯ ಜನರೂ ಎಲ್ಲ ಕ್ಷೇತ್ರಗಳಲ್ಲಿಯೂ ಉನ್ನತ ಸಾಧನೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಸರಕಾರ ಸಮುದಾಯಕ್ಕೆ ಮೀಸಲಾತಿ ಕೊಡಬೇಕು ಎಂದು ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಕೃತಿ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಮಾಜಿ ನಗರ ಸೇವಕರಾದ ಜಯಶೀ ಮಾಳಗಿ, ಮಾರುತಿ ಗೋ. ತೇಲಂಗ( ನಾಯ್ಡು ) ಹಾಗೂ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

4 + five =