Breaking News

ವಿಕಲಚೇತನರು ಹಾಗೂ 80 ವರ್ಷ ಮೇಲ್ಪಟ್ಟವರಿಗೆ ಐಚ್ಛಿಕ ಅಂಚೆ ಮತ ಸೌಲಭ್ಯ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

Spread the love

ವಿಕಲಚೇತನರು ಹಾಗೂ 80 ವರ್ಷ ಮೇಲ್ಪಟ್ಟವರಿಗೆ ಐಚ್ಛಿಕ ಅಂಚೆ ಮತ ಸೌಲಭ್ಯ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಯುವ ಭಾರತ ಸುದ್ದಿ ಬೆಳಗಾವಿ :
ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಲು ಸಾಧ್ಯವಾಗದ 80 ವರ್ಷ ಮೇಲ್ಪಟ್ಟವರು ಹಾಗೂ ವಿಕಲಚೇತನ ಮತದಾರರಿಗೆ ಅಂಚೆ ಮತಪತ್ರಗಳ ಮೂಲಕ ತಮ್ಮ ಮನೆಯಿಂದಲೇ ಮತದಾನ ಮಾಡುವಂತಹ ಐಚ್ಛಿಕ ಅವಕಾಶವನ್ನು ಕಲ್ಪಿಸಲಾಗಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

ಅಂಚೆ ಮತಪತ್ರ ವಿತರಣೆ, ಮತದಾನ ಮತ್ತಿತರ ಪ್ರಕ್ರಿಯೆ ಕುರಿತು ಕರ್ನಾಟಕ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ವಿಡಿಯೋ ಸಂವಾದದ ಮೂಲಕ ಮಾಹಿತಿಯನ್ನು ನೀಡಿದ ಬಳಿಕ ಸಂಬಂಧಿಸಿದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಒಮ್ಮೆ ಐಚ್ಛಿಕವಾಗಿ ಅಂಚೆ ಮತಪತ್ರವನ್ನು ಪಡೆದುಕೊಂಡವರಿಗೆ ಯಾವುದೇ ಕಾರಣಕ್ಕೂ ಮತಗಟ್ಟೆಗಳಲ್ಲಿ ಮತ ಚಲಾಯಿಸಲು ಅವಕಾಶ ಇರುವುದಿಲ್ಲ.

ಐಚ್ಛಿಕವಾಗಿ ಅಂಚೆ ಮತಕ್ಕೆ ನೋಂದಾಯಿಸಿದ ಮತದಾರರಿಗೆ ಮುಂಚಿತವಾಗಿಯೇ ಮಾಹಿತಿಯನ್ನು ನೀಡಿದ ಬಳಿಕ ಮತ ಅಧಿಕಾರಿಗಳ ತಂಡವು ಮನೆಗೆ ಭೇಟಿ ನೀಡಿ ಮತದಾನಕ್ಕೆ ಅವಕಾಶ ಕಲ್ಪಿಸಲಿದೆ.

ಐದು ಅಧಿಕಾರಿ/ಸಿಬ್ಬಂದಿ ತಂಡ ಮನೆಗೆ ಆಗಮನ:

ತಂಡದಲ್ಲಿ ಇಬ್ಬರು ಮತ ಅಧಿಕಾರಿ, ಮೈಕ್ರೋ ಅಬ್ಸರ್ವರ್, ಪೊಲೀಸ್ ಅಧಿಕಾರಿ ಮತ್ತು ಒಬ್ಬ ಛಾಯಾಗ್ರಾಹಕ ಸೇರಿದಂತೆ ಐದು ಜನರ ತಂಡ ಮತದಾರರ ಮನೆಗೆ ಭೇಟಿ ನೀಡಲಿದೆ.

ಅರ್ಹ ಮತದಾರರ ಕೋರಿಕೆ ಮೇರೆಗೆ ಸಂಬಂಧಿಸಿದ ಮತಕ್ಷೇತ್ರದ ನಿಯೋಜಿತ ಮತ ಅಧಿಕಾರಿಗಳ ತಂಡಗಳು ಅಂಚೆ ಮತಪತ್ರಗಳನ್ನು ಒದಗಿಸಲಿವೆ.

ಐಚ್ಛಿಕವಾಗಿ ನೋಂದಾಯಿತ ಮತದಾರರ ಮತ ಸಂಗ್ರಹಕ್ಕಾಗಿ ಅಧಿಕಾರಿಗಳ ತಂಡ ಮತದಾರನ ಮನೆಗೆ ಭೇಟಿ ನೀಡುವ ದಿನಾಂಕ ಕುರಿತು ಮುಂಚಿತವಾಗಿ ಮಾಹಿತಿಯನ್ನು ನೀಡಲಾಗುವುದು.
ಅವರ ಮೊಬೈಲ್ ಗೆ ಎಸ್.ಎಂ.ಎಸ್‌. ಮೂಲಕ ಮಾಹಿತಿ ನೀಡಲಾಗುತ್ತದೆ.
ಇದಾದ ಬಳಿಕ ಮತದಾರರ ಮನೆಗೆ ತೆರಳಲಿರುವ ಆಯಾ ಮತಕ್ಷೇತ್ರದ ತಂಡಗಳು ಅವರ ಗುರುತಿನ ಚೀಟಿ ಮತ್ತಿತರ ದಾಖಲಾತಿಗಳನ್ನು ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಪರಿಶೀಲಿಸಿ ಮತದಾನಕ್ಕೆ ಅವಕಾಶ ಒದಗಿಸಲಾಗುತ್ತದೆ.
ಮತದಾನದ ಬಳಿಕ ಮತ ಅಧಿಕಾರಿಗಳು ಸದರಿ ಮತಪತ್ರವನ್ನು ನಿಗದಿತ ಲಕೋಟೆಯಲ್ಲಿ ಭದ್ರವಾಗಿಟ್ಟು ನಂತರದ ದಿನಗಳಲ್ಲಿ ಚುನಾವಣಾಧಿಕಾರಿಗಳ ಮೂಲಕ ಮತ ಎಣಿಕೆ ಕೇಂದ್ರಕ್ಕೆ ಕಳಿಸಲಾಗುವುದು.

ಈ ಎಲ್ಲ ಪ್ರಕ್ರಿಯೆಯು ಕನಿಷ್ಠ ಹತ್ತು ದಿನಗಳ ಮುಂಚೆ ಆರಂಭಿಸಿ ನಿಗದಿತ ಮತದಾನ ದಿನಾಂಕಕ್ಕಿಂತ ಒಂದು ದಿನ ಮುಂಚೆ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಮತದಾರರಿಗೆ ಮತದಾನ ವಿಧಾನದ ಬಗ್ಗೆ ತಿಳಿವಳಿಕೆ ನೀಡಬೇಕು. ಅಂಚೆ ಮತದ ಗೌಪ್ಯತೆಯನ್ನು ಕಟ್ಟುನಿಟ್ಟಾಗಿ ಕಾಪಾಡಬೇಕು. ಯಾವುದೇ ಕಾರಣಕ್ಕೂ ಇದು ಬಹಿರಂಗಗೊಳ್ಳಬಾರದು.
ಸಂಪೂರ್ಣ ಮತದಾನ ಪ್ರಕ್ರಿಯೆಯನ್ನು ವಿಡಿಯೋಗ್ರಫಿ ಮಾಡಬೇಕು.

ಅಂಚೆ ಮತಪತ್ರ ವಿತರಣೆ, ಸಂಗ್ರಹ ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ನೀಡಬೇಕು. ಈ ಪ್ರಕ್ರಿಯೆ ಕುರಿತು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಅವರಿಗೆ ಮನವರಿಕೆ ಮಾಡಬೇಕು ಎಂದು ನಿತೇಶ್ ಪಾಟೀಲ ತಿಳಿಸಿದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

three × 2 =