Breaking News

ಪಾರಿಶ್ವಾಡ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವ :  ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ

Spread the love

ಪಾರಿಶ್ವಾಡ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವ :  ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ

ಯುವ ಭಾರತ ಸುದ್ದಿ ಇಟಗಿ :
ಜಾತಿ ದೊಡ್ಡದಲ್ಲ. ನೀತಿ ದೊಡ್ಡದಾಗಬೇಕಾಗಿದೆ ಅವರೊಳ್ಳಿ-ಬೀಳಕಿ ಶ್ರೀ ರುದ್ರಸ್ವಾಮಿ ಮಠದ ಶ್ರೀ ಚೆನ್ನಬಸವ ದೇವರು ಹೇಳಿದರು.
ಪಾರಿಶ್ವಾಡ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಎನ್ನುವ ತತ್ವವನ್ನು ಪಾಲಿಸಬೇಕು. ಇನ್ನೊಬ್ಬರಂತೆ ಆಡಂಬರದಿಂದ ಬದುಕಬೇಕೆಂದು ಬಯಸುತ್ತೇವೆ. ಹಾಗೇ ಮಾಡಿದರೆ ನಷ್ಟ ನಮಗೆ. ನಾವು ಕನ್ನಡಿಯನ್ನು ನೋಡಿ ಜೀವಿಸುವುದನ್ನು ಕಲಿಯಬೇಕೆಂದರು.

ಹನಿವೆಲ್ ಇಂಟರ್ ನ್ಯಾಶನಲ್ ಶಾಲೆಯ ಅಧ್ಯಕ್ಷ ಸುಭಾಷ ಗುಳಶೆಟ್ಟಿ ಮಾತನಾಡಿ, ಹಿರಿಯರು ನಡೆಸಿಕೊಂಡ ಬಂದ ಶರಣತತ್ವ ಮತ್ತು ಧಾರ್ಮಿಕ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ. ಪಾರಿಶ್ವಾಡ ಗ್ರಾಮ ಕಾದರವಳ್ಳಿ ಮತ್ತು ಗರಗದ ಗುರುಪರಂಪರೆ ತತ್ವವನ್ನು ಮೊದಲಿನಿಂದಲೂ ಅಳವಡಿಸಿಕೊಂಡು ಬರುತ್ತಿದೆ ಎಂದರು.
ಬಿಜೆಪಿಯ ಡಾ. ಸೋನಾಲಿ ಸರನೋಬತ್ ಮಾತನಾಡಿ, ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಧರ್ಮ ರಕ್ಷಿಸುವುದರಲ್ಲಿ ಮಹಿಳೆ ಪಾತ್ರ ಬಹುಮುಖ್ಯವಾಗಿದೆ ಎಂದರು.

ಡಾ. ಸಂಜೀವ ಕುಲಕರ್ಣಿ, ಡಾ. ಪ್ರದೀಪ ಪೇಟಕರ್, ಡಾ. ಅಶೋಕ ನಂದಿ, ನ್ಯಾಯವಾದಿ ಆರ್.ಎಂ.ಪಾಟೀಲ, ಬಸವರಾಜ ಹಪಳಿ, ದಶರಥ ಬನೋಶಿ, ವಿಠ್ಠಲ ಹಿಂಡಲ್ಕರ್ ಹಾಗೂ ಇತರರು ಉಪಸ್ಥಿತರಿದ್ದರು.
ಮಹಾದೇವ ಕಮತೆ ನಿರೂಪಿಸಿದರು. ದತ್ತು ಪೂಜಾರ ವಂದಿಸಿದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

17 − 5 =