Breaking News

ಬೆಳಗಾವಿಗೆ ವಿಜಯೇಂದ್ರ ವಿಜಯಿಭವ…! ಬೆಳಗಾವಿ ಗ್ರಾಮೀಣದಲ್ಲಿ ಸ್ಪರ್ಧೆಗೆ ಹಸಿರು ನಿಶಾನೆ !

Spread the love

ಬೆಳಗಾವಿಗೆ ವಿಜಯೇಂದ್ರ ವಿಜಯಿಭವ…!

ಬೆಳಗಾವಿ ಗ್ರಾಮೀಣದಲ್ಲಿ ಸ್ಪರ್ಧೆಗೆ ಹಸಿರು ನಿಶಾನೆ !

ಯುವ ಭಾರತ ಸುದ್ದಿ ಬೆಳಗಾವಿ : ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸುಪುತ್ರ ಬಿ.ವೈ. ವಿಜಯೇಂದ್ರ ಅವರ ಬೆಳಗಾವಿ ಸ್ಪರ್ಧೆ ಇದೀಗ ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಬೆಳಗಾವಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದಲ್ಲಿ ಸ್ಪರ್ಧೆಗೆ ಬಿಜೆಪಿ ಅಭ್ಯರ್ಥಿಗಳಲ್ಲಿ ಹೊಂದಾಣಿಕೆ ಕೊರತೆ ಸೃಷ್ಟಿಯಾಗಿದೆ. ಈ ಹಿನ್ನಲೆಯಲ್ಲಿ ಪಕ್ಷದ ರಾಜ್ಯ ಹೈಕಮಾಂಡ್ ತೂಗಿ ಅಳೆದು ಯುವ ನಾಯಕ ವಿಜಯೇಂದ್ರ ಅವರನ್ನು ಬೆಳಗಾವಿಯಿಂದ ಸ್ಪರ್ಧೆಗೆ ಅಣಿಗೊಳಿಸಲು ಮುಂದಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಶಿಕಾರಿಪುರದಿಂದ ಈ ಬಾರಿ ಯಡಿಯೂರಪ್ಪ ತಮ್ಮ ಬದಲು ಸುಪುತ್ರನನ್ನು ಮುಂದಾಗಿದ್ದರು. ಈ ನಡುವೆ ವರುಣ ಮತಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಕಣಕ್ಕಿಳಿಯುತ್ತಿರುವುದರಿಂದ ಅವರಿಗೆ ತಕ್ಕ ತಿರುಗೇಟು ನೀಡಲು ವಿಜಯೇಂದ್ರ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬಂದಿತ್ತು.

ಆದರೆ ಈ ಕುತೂಹಲಕ್ಕೆ ಯಡಿಯೂರಪ್ಪ ತೆರೆ ಎಳೆದಿದ್ದು ಶಿಕಾರಿಪುರದಲ್ಲಿ ಪುತ್ರನ ಸ್ಪರ್ಧೆ ನಡೆಯಲಿದೆ ಎಂದು ಹೇಳಿದ್ದರು. ಆದರೆ, ಇದೀಗ ನಡೆದಿರುವ ಅಚ್ಚರಿಯ ಬೆಳವಣಿಗೆಯಲ್ಲಿ ಹೊಂದಾಣಿಕೆ ಕೊರತೆ ಎದ್ದು ಕಂಡಿರುವ ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದಲ್ಲಿ ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ವಿಜಯದುಂದುಬಿ ಹಾರಿಸಲೇಬೇಕು ಎಂಬ ಶತ ಪ್ರಯತ್ನದಲ್ಲಿರುವ ಕಮಲ ಪಕ್ಷ ಕೊನೆಗೂ ಹಲವಾರು ಲೆಕ್ಕಾಚಾರ ಹಾಕಿ ವಿಜಯೇಂದ್ರ ಅವರ ಹೆಸರನ್ನು ಅಖೈರುಗೊಳಿಸಿದೆ.

ಒಟ್ಟಾರೆ, ಇದೀಗ ನಡೆದಿರುವ ಬೆಳವಣಿಗೆಯಿಂದ ಬೆಳಗಾವಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರ ರಾಷ್ಟ್ರದ ಗಮನ ಸೆಳೆಯುವುದರಲ್ಲಿ ಯಾವ ಸಂಶಯ ಇಲ್ಲ. ಯುವ ನಾಯಕ ಹಾಗೂ ಯುವಕರ ಕಣ್ಮಣಿಯಾಗಿರುವ ವಿಜಯೇಂದ್ರ ಅವರ ಸ್ಪರ್ಧೆಯಿಂದಾಗಿ ಬೆಳಗಾವಿ ಜಿಲ್ಲೆ ಮಾತ್ರವಲ್ಲ, ಇಡೀ ಉತ್ತರ ಕರ್ನಾಟಕ ಬಿಜೆಪಿ ಅಲೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷದ ಪ್ರಭುತ್ವದಲ್ಲಿರುವ ಈ ಕ್ಷೇತ್ರ ನಿರಾಯಸವಾಗಿ ಬಿಜೆಪಿ ಪಾಲಾಗುವುದರಲ್ಲಿ ಯಾವ ಅನುಮಾನವೂ ಇಲ್ಲ. ಒಟ್ಟಾರೆ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಇನ್ನು ದಿನಗಳದಂತೆ ಚುನಾವಣೆ ಕಾವು ಕಾವೇರಲಿದೆ. ವಿಜಯೇಂದ್ರ ಅವರ ಸ್ಪರ್ಧೆಯಿಂದ ಚುನಾವಣೆಯ ಇಡೀ ಚಿತ್ರಣವೇ ಬದಲಾಗಲಿದೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

9 − 5 =