Breaking News

ದೇಶದ ಅತೀ ವೇಗದ ವಂದೇ ಭಾರತ್ ರೈಲು : 13 ರಾಜ್ಯಕ್ಕೆ ವಿಸ್ತಾರ !

Spread the love

ದೇಶದ ಅತೀ ವೇಗದ ವಂದೇ ಭಾರತ್ ರೈಲು : 13 ರಾಜ್ಯಕ್ಕೆ ವಿಸ್ತಾರ !

ಯುವ ಭಾರತ ಸುದ್ದಿ ಭೋಪಾಲ್ ‌:
ಮಧ್ಯಪ್ರದೇಶದ ಕಮಲಾಪತಿ ರೈಲು ನಿಲ್ದಾಣದಲ್ಲಿ ಭೋಪಾಲ್‌-ದೆಹಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದರು. ಇದರಿಂದಾಗಿ ದೇಶಕ್ಕೆ 11ನೇ ವಂದೇಭಾರತ್‌ ರೈಲು ಸೇರ್ಪಡೆ ಆದಂತಾಗಿದೆ. ದೇಶದ ಅತಿ ವೇಗದ ರೈಲು ಎಂಬ ಹೆಗ್ಗಳಿಕೆಯನ್ನು ‘ವಂದೇಭಾರತ್‌’ ಹೊಂದಿದ್ದು, 13 ರಾಜ್ಯಗಳಿಗೆ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿದೆ.

ಭೋಪಾಲ್‌-ದಿಲ್ಲಿ ವಂದೇ ಭಾರತ್‌ ರೈಲು ಗಂಟೆಗೆ ಗರಿಷ್ಠ 160 ಕಿ.ಮೀ. ವೇಗದಲ್ಲಿ ಚಲಿಸುವ ಮೂಲಕ ಸುಮಾರು 7 ಗಂಟೆಗಳಲ್ಲಿ 708 ಕಿ.ಮೀ ದೂರವನ್ನು ಕ್ರಮಿಸಲಿದೆ. ಈ ಮುಂಚಿನ ಹಲವು ಸಾಮಾನ್ಯ ಎಕ್ಸ್‌ಪ್ರೆಸ್‌ ರೈಲುಗಳು ಭೋಪಾಲ್‌ನಿಂದ ದಿಲ್ಲಿ ತಲುಪಲು 10 ತಾಸು ಸಮಯ ತೆಗೆದುಕೊಳ್ಳುತ್ತಿದ್ದವು.

13 ರಾಜ್ಯಕ್ಕೆ ವ್ಯಾಪ್ತಿ ವಿಸ್ತಾರ:

ದೇಶದ ಮೊದಲ ಮೊದಲ ವಂದೇ ಭಾರತ್‌ ರೈಲು ದಿಲ್ಲಿ-ವಾರಾಣಸಿ ನಡುವೆ ಆರಂಭವಾಗಿತ್ತು. ನಂತರ ಈವರೆಗೆ ಇನ್ನೂ 10 ರೈಲುಗಳನ್ನು ಆರಂಭಿಸಲಾಗಿದ್ದು, ದೇಶದ 13 ರಾಜ್ಯಗಳನ್ನು ವಂದೇ ಭಾರತ್‌ ರೈಲುಗಳು ಸಂಪರ್ಕಿಸಿದಂತಾಗಿದೆ. ವಾರಾಣಸಿ-ದಿಲ್ಲಿ, ನವದೆಹಲಿ-ಕಟ್ರಾ, ಗಾಂಧಿನಗರ-ಮುಂಬೈ, ದೆಹಲಿ-ಅಂಬ್‌ ಅಂದೂರಾ (ಹಿಮಾಚಲ), ಚೆನ್ನೈ-ಮೈಸೂರು, ನಾಗಪುರ-ಬಿಲಾಸ್‌ಪುರ, ಹೌರಾ-ನ್ಯೂಜಲಪೈಗುರಿ, ಸಿಕಂದರಾಬಾದ್‌-ವಿಶಾಖಪಟ್ಟಣಂ, ಮುಂಬೈ-ಸೊಲ್ಲಾಪುರ, ಮುಂಬೈ-ಶಿರಡಿ ಹಾಗೂ ಭೋಪಾಲ್‌-ದೆಹಲಿ ನಡುವೆ ಈಗ ವಂದೇ ಭಾರತ್‌ ರೈಲುಗಳು ಸಂಚರಿಸುತ್ತಿವೆ.

ಇನ್ನೂ 3 ರೈಲು ಶೀಘ್ರ:
ದೆಹಲಿ-ಜೈಪುರ, ಸಿಕಂದರಾಬಾದ್‌-ತಿರುಪತಿ ಮತ್ತು ಚೆನ್ನೈ-ಕೊಯಮತ್ತೂರು ನಡುವೆ ಶೀಘ್ರದಲ್ಲೇ 3 ವಂದೇ ಭಾರತ್‌ ರೈಲು ಆರಂಭವಾಗಲಿವೆ ಎಂದು ಮೂಲಗಳು ಹೇಳಿವೆ. ಬೆಂಗಳೂರು-ಧಾರವಾಡ ವಂದೇ ಭಾರತ್‌ ಕೂಡ ಕೆಲವು ತಿಂಗಳಲ್ಲಿ ಆರಂಭವಾಗಬಹುದು ಎಂದು ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು-ಧಾರವಾಡ ಮಾರ್ಗದ ಜೋಡಿ ಮಾರ್ಗ ಹಾಗೂ ವಿದ್ಯುದೀಕರಣ ಭರದಿಂದ ಸಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷಾಚರಣೆ ಸಂದರ್ಭದಲ್ಲಿ 75 ವಂದೇ ಭಾರತ್‌ ರೈಲು ಆರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿತ್ತು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

two × 2 =