ಚಿಕ್ಕಹಟ್ಟಿಹೊಳಿ ವೀರಭದ್ರೇಶ್ವರ ಮಹಾ ರಥೋತ್ಸವಕ್ಕೆ ಹರಿದು ಬಂತು ಭಕ್ತಸಾಗರ !
ಯುವ ಭಾರತ ಸುದ್ದಿ ಇಟಗಿ :
ಚಿಕ್ಕಹಟ್ಟಿಹೊಳಿ ಗ್ರಾಮದ ಮಲಪ್ರಭಾ ನದಿ ತೀರದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಶ್ರದ್ಧಾ ಭಕ್ತಿ ಸಡಗರದಿಂದ ಮಹಾರಥೋತ್ಸವ ನಡೆಯಿತು.
ಸಾವಿರಾರು ಭಕ್ತರು ಶ್ರೀ ವೀರಭದ್ರೇಶ್ವರ ಮಹಾರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು. ಬೆಳಗಾವಿ ಜಿಲ್ಲೆ ವಿವಿಧ ತಾಲೂಕು ಸೇರಿದಂತೆ ಧಾರವಾಡ, ಮಹಾರಾಷ್ಟ್ರ ಮತ್ತು ಗೋವಾದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು. ಭಕ್ತರು ಹರ ಹರ ಮಹಾದೇವ ಘೋಷಣೆಗಳೊಂದಿಗೆ ಶ್ರೀ ವೀರಭದ್ರೇಶ್ವರ ಮಹಾರಥೋತ್ಸವ ಎಳೆದರು. ಉತ್ತತ್ತಿ, ಬಾಳೆಹಣ್ಣು ಮತ್ತು ನಾಣ್ಯಗಳನ್ನು ರಥಕ್ಕೆ ಎಸೆದು ತಮ್ಮ ಭಕ್ತಿ ಅರ್ಪಿಸಿದರು.
ಚಕ್ಕಡಿ, ಲಾರಿ, ಟ್ರಾಕ್ಟರ್, ದ್ವಿಚಕ್ರ ವಾಹನಗಳಲ್ಲದೆ ಕಾಲ್ನಡಿಗೆಯಲ್ಲಿ ಭಕ್ತಸಾಗರ ಹರಿದು ಬಂದಿತ್ತು. ಉತ್ತತ್ತಿ, ಬಾಳೆ ಮತ್ತು ತೆಂಗಿನ ಕಾಯಿ ರಥಕ್ಕೆ ಎಸೆದರು. ರುದ್ರಾಭಿಷೇಕ, ಭಜನೆ, ವಡಪು ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.