ಗಂಡನಿಗೆ ಟಿಕೆಟ್ ಕೊಡಿ : ಪತ್ನಿಯಿಂದಲೇ ಸಿಎಂಗೆ ಮನವಿ !

ಯುವ ಭಾರತ ಸುದ್ದಿ ಶಿಗ್ಗಾವಿ :
ರಾಣೆಬೆನ್ನೂರು ಹಾಲಿ ಬಿಜೆಪಿ ಶಾಸಕ ಅರುಣ್ ಕುಮಾರ್ ಪೂಜಾರ ಅವರಿಗೆ ಈ ಸಲವೂ ಟಿಕೆಟ್ ನೀಡುವಂತೆ ಒತ್ತಾಯಿಸಿ ಅವರ ಪತ್ನಿ ಮಂಗಳ ಗೌರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ಚರ್ಚೆ ನಡೆಸಿದ್ದಾರೆ.
ಬೊಮ್ಮಾಯಿ ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ಬಂದ ಮಂಗಳ ಗೌರಿ ಅವರ ಹಿಂಭಾಗದಲ್ಲಿ ನಿಂತು ಚರ್ಚಿಸಿರುವುದು ಎಲ್ಲರ ಗಮನ ಸೆಳೆಯಿತು.
YuvaBharataha Latest Kannada News