BREAKING ಬಿಜೆಪಿ ಪಟ್ಟಿ ಬಿಡುಗಡೆ : ಜಗದೀಶ ಶೆಟ್ಟರ ಕ್ಷೇತ್ರಕ್ಕೆ ಅಭ್ಯರ್ಥಿ ಪ್ರಕಟ

ಯುವ ಭಾರತ ಸುದ್ದಿ ಬೆಂಗಳೂರು:
ರಾಜ್ಯ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಎರಡು ಪಟ್ಟಿ ಬಿಡುಗಡೆ ಮಾಡಿದ್ದ ಬಿಜೆಪಿ ಇಂದು, ಸೋಮವಾರ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ. ಬಾಕಿ 12 ಕ್ಷೇತ್ರಗಳಲ್ಲಿ 10 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಅಭ್ಯರ್ಥಿಗಳ ಮೂರನೇ ಪಟ್ಟಿ
ಕ್ಷೇತ್ರ ಅಭ್ಯರ್ಥಿ
ನಾಗಠಾಣ-ಸಂಜೀವ ಐಹೊಳೆ
ಸೇಡಂ-ರಾಜಕುಮಾರ ಪಾಟೀಲ
ಕೊಪ್ಪಳ-ಮಂಜುಳಾ ಅಮರೇಶ
ರೋಣ – ಕಳಕಪ್ಪ ಬಂಡಿ
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್-ಮಹೇಶ್ ಟೆಂಗಿನಕಾಯಿ
ಹಗರಿಬೊಮ್ಮನಹಳ್ಳಿ (ಎಸ್‌ಸಿ) -ಬಿ ರಾಮಣ್ಣ
ಬೆಂಗಳೂರಿನ ಹೆಬ್ಬಾಳ-ಕಟ್ಟಾ ಜಗದೀಶ
ಬೆಂಗಳೂರಿನ ಗೋವಿಂದರಾಜನಗರ-
ಉಮೇಶ್ ಶೆಟ್ಟಿ
ಮಹದೇವಪುರ (ಎಸ್‌ಸಿ)- ಮಂಜುಳ ಅರವಿಂದ ಲಿಂಬಾವಳಿ
ಕೃಷ್ಣರಾಜನಗರ-ಶ್ರೀವತ್ಸ
ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.
ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ ಇನ್ನೂ ಘೋಷಣೆಯಾಗಿಲ್ಲ. ಜತೆಗೆ ಮಾನ್ವಿ ಕ್ಷೇತ್ರದ ಟಿಕೆಟ್ ಅನ್ನೂ ಬಾಕಿ ಇರಿಸಿಕೊಂಡಿದೆ. ಶಿವಮೊಗ್ಗ ನಗರ ಕ್ಷೇತ್ರವನ್ನು ಈವರೆಗೆ ಬಿಜೆಪಿಯ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಪ್ರತಿನಿಧಿಸುತ್ತಿದ್ದರು. ಇತ್ತೀಚೆಗಷ್ಟೇ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಆದರೆ, ತಮ್ಮ ಮಗ ಕಾಂತೇಶ್ಗೆ ಟಿಕೆಟ್ ನೀಡಬೇಕೆಂಬ ಬೇಡಿಕೆಯನ್ನು ಹೈಕಮಾಂಡ್ ಮುಂದಿಟ್ಟಿದ್ದಾರೆ ಎನ್ನಲಾಗಿದೆ.
YuvaBharataha Latest Kannada News