Breaking News

ಕೊನೆಯ ಪಟ್ಟಿಯೂ ಪ್ರಕಟ

Spread the love

ಕೊನೆಯ ಪಟ್ಟಿಯೂ ಪ್ರಕಟ

ಯುವ ಭಾರತ ಸುದ್ದಿ ಬೆಂಗಳೂರು :
ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಆರನೇ ಪಟ್ಟಿ ಬಿಡುಗಡೆ ಮಾಡಿದೆ. ಇದರೊಂದಿಗೆ ಕಾಂಗ್ರೆಸ್ ಪಕ್ಷ 224 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟ ಮಾಡಿದಂತಾಗಿದೆ.

ಸಿ.ವಿ.ರಾಮನ್ ನಗರ-ಎಸ್ ಆನಂದ್ ಕುಮಾರ್

ಮಂಗಳೂರು ಉತ್ತರ- ಇನಾಯತ್ ಅಲಿ

ಶಿಡ್ಲಘಟ್ಟ-ಬಿ.ವಿ. ರಾಜೀವ ಗೌಡ

ಅರಕಲಗೂಡು-ಎಚ್‌.ಪಿ. ಶ್ರೀಧರ ಗೌಡ

ರಾಯಚೂರು ನಗರ- ಮಹಮ್ಮದ್ ಸಲಾಂ

ಬಿಜೆಪಿ ಅಭ್ಯರ್ಥಿಗಳ ಹೆಸರು ಪ್ರಕಟ :

ಲಿಂಗಾಯತ ಸಮುದಾಯದ ಚನ್ನಬಸಪ್ಪ, ಶಾಸಕ ಕೆ.ಎಸ್.ಈಶ್ವರಪ್ಪ ಅವರ ಕಟ್ಟಾ ಬೆಂಬಲಿಗ ಹಾಗೂ ಮಾನಸಪುತ್ರ ಎಂದೇ ಪರಿಚಿತರು. ಟಿಕೆಟ್ ವಿಚಾರದಲ್ಲಿ ಕೆ.ಎಸ್.ಈಶ್ವರಪ್ಪ ಅವರ ಮಾತೇ ನಿರ್ಣಾಯಕವಾಗಿದೆ ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.

ನಾಲ್ಕು ಬಾರಿ ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿರುವ ಚನ್ನಬಸಪ್ಪ (ಚನ್ನಿ)ಹಾಲಿ ಪಾಲಿಕೆ ಆಡಳಿತ ಪಕ್ಷದ ನಾಯಕ. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಗಿದ್ದ ಅವರು, ಶಿವಮೊಗ್ಗದ ಬಿಜೆಪಿಯ ಹಿಂದುತ್ವದ ಆಶಯಗಳ ಅನುಷ್ಠಾನದ ಪಡೆಯಲ್ಲಿ ಪ್ರಮುಖ ಸೇನಾನಿ. ಈಶ್ವರಪ್ಪ ಹಿಂದುತ್ವದ ಪರ ಮಾತಾಡಿದರೆ ಚನ್ನಬಸಪ್ಪ ಅದನ್ನು ಕಾರ್ಯರೂಪಕ್ಕೆ ತರುತ್ತಾರೆ ಎಂಬ ಮಾತು ಶಿವಮೊಗ್ಗದಲ್ಲಿ ಜನಜನಿತವಾಗಿದೆ.

ಆರ್ ಎಸ್ ಎಸ್ ಹಾಗೂ ಪಕ್ಷದ ಸಂಘಟನೆಯಲ್ಲಿ ಸಕ್ರಿಯರಾಗಿದ್ದು, ಟಿಕೆಟ್ ಪಡೆಯಲು ನೆರವಾಗಿದೆ ಎನ್ನಲಾಗುತ್ತಿದೆ.
ಈಶ್ವರಪ್ಪ ಪ್ರತಿನಿಧಿಸುತ್ತಿರುವುದರಿಂದ ಇಲ್ಲಿ ಟಿಕೆಟ್ ಘೋಷಣೆ ಬಿಜೆಪಿಗೆ ಕಗ್ಗಂಟ್ಟಾಗಿತ್ತು. ಈಶ್ವರಪ್ಪ ತಮ್ಮ ಪುತ್ರ ಕಾಂತೇಶ್ ಅವರಿಗೆ ಟಿಕೆಟ್ ತರಲು ಪ್ರಯತ್ನಿಸಿದ್ದರು. ಎಸ್.ಎಸ್.ಜ್ಯೋತಿಪ್ರಕಾಶ, ಧನಂಜಯ ಸರ್ಜಿ ಸಹ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಕೊನೆಗೂ ಈಶ್ವರಪ್ಪ ಅಪ್ತ ಚನ್ನಬಸಪ್ಪ ಅವರಿಗೆ ಟಿಕೆಟ್ ದೊರೆತಿದೆ.
ಮಾನ್ವಿ ಕ್ಷೇತ್ರದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಸಂಸದ ಬಿ.ವಿ. ನಾಯಕ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಇದರಿಂದ ಬಿಜೆಪಿ ಎಲ್ಲಾ ಎರಡು 224 ವಿಧಾನಸಭಾ ಮತಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿದಂತಾಗಿದೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

seventeen − 5 =